ಮಹಿಷಕ ಎಂಬ ಶೂದ್ರರ ನಾಡಿನಲ್ಲಿ...

ಮಹಿಷಕ ಎಂಬ ಶೂದ್ರರ ನಾಡಿನಲ್ಲಿ...

೨೦೦೬ರಲ್ಲಿ ನಾನು ಬರೆದ ‘ನಮಗೆ ಹೊಸ ರಾಷ್ಟ್ರಗೀತೆ ಬೇಕೆ’ ಎಂಬ ಲೇಖನವನ್ನು ಈಗ ಸಂಪದಿಗರು ಚರ್ಚೆಗೆ ತೆಗೆದುಕೊಂಡಿರುವುದು ನನಗೆ ತುಸು ಆಶ್ಚರ್ಯವನ್ನು ಉಂಟು ಮಾಡಿದೆ.

ಮಾಯ್ಸ ಅವರು ತಮ್ಮ ಅನಿಸಿಕೆಗಳನ್ನು ಆತ್ಮವಿಶ್ವಾಸದಿಂದ, ಬಲವಾಗಿ ಮಂಡಿಸಿದ್ದಾರೆ. ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ, ದ್ರಾವಿಡರ ಮೇಲೆ ಆರ್ಯರ (ಬ್ರಾಹ್ಮಣ) ಪ್ರಭಾವ, ನಮ್ಮತನವನ್ನು ಕಂಡುಕೊಳ್ಳಬೇಕಾಗದ ಅಗತ್ಯತೆಯ ಬಗ್ಗೆ ಸೊಗಸಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಗಮನಕ್ಕೆ ಬಂದ ಒಂದು ಮಾತನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

It is in consequence of the absence of Brahmanas from among them that the Sakas, the Yavanas, the Kambojas and other Kshatriya tribes have become fallen and degraded into the status of Sudras (13.33.20-21; cf: 13,35.17-18). The Dravidas, the Kalingas, the Pulandas, the Usinaras, the Kolisarpas, the Mahishakas and other Kshatriyas, have, in consequence of the absence of Brahmanas from among their midst, also become degraded into Sudras (MBH 13.33)

ಮಹಾಭಾರತದ ಈ ಉಲ್ಲೇಖದ ಅನ್ವಯ, ದ್ರಾವಿಡ ಹಾಗೂ ಮಹಿಷಕ (ಹಳೇ ಮೈಸೂರು ಸಂಸ್ಥಾನದ ಪ್ರದೇಶ) ಆರ್ಯರು ಅಂದರೆ ಬ್ರಾಹ್ಮಣರು ಇಲ್ಲದ ನಾಡು. ಆರ್ಯರ ಲೆಕ್ಕದಲ್ಲಿ ಶೂದ್ರರ ನಾಡು. ಅಂದರೆ ಮೂಲತಃ ಕನ್ನಡಿಗರ ನಾಡು.

ಇನ್ನೊಂದು ಉಲ್ಲೇಖವನ್ನು ಇಲ್ಲಿ ಮಾಡಬಯಸುತ್ತೇನೆ. ಕದಂಬ ವಂಶವನ್ನು ಸ್ಥಾಪಿಸಿದ ಮಯೂರವರ್ಮನು ಮೊದಲ ಬಾರಿಗೆ ಬ್ರಾಹ್ಮಣರನ್ನು ಅಹಿಚ್ಛತ್ರದಿಂದ ಬನವಾಸಿಗೆ ಕರೆಸುತ್ತಾನೆ. ಇವರೇ ಯಜ್ಞಯಾಗಾದಿಗಳನ್ನು ಮಾಡುವ ಹವೀಕರು ಅಥವ ಹವ್ಯಕರು. ಇವರ ನಂತರ ಉಳಿದ ಬ್ರಾಹ್ಮಣ ವರ್ಗಗಳು ಕ್ರಮೇಣ ಕರ್ನಾಟಕಕ್ಕೆ ಬಂದರು. ಈ ಬ್ರಾಹ್ಮಣರು ಮೂಲ ಕನ್ನಡದಲ್ಲಿದ್ದ ಶಬ್ದ ಭಂಡಾರವನ್ನು ‘ಕುಲಗೆಡಿಸಿ’ ಸಂಸ್ಕೃತಭೂಯಿಷ್ಠವಾಗಿಸಿದರು :).

ಒಂದು ವಿಪರ್ಯಾಸವೆಂದರೆ, ಇಂದು ಅತ್ಯಂತ ಹೆಚ್ಚಿನ ಮೂಲ ಕನ್ನಡ ಶಬ್ದಗಳನ್ನು ತಮ್ಮ ದೈನಂದಿನ ಆಡುಭಾಷೆಯಲ್ಲಿ  ಬಳಸುತ್ತಿರುವವರು ಹವ್ಯಕರೆ!

-ನಾಸೋ

Rating
No votes yet

Comments