ಕನ್ನಡ ಗಣಕ ಪ್ರಪಂಚವೆಂಬ ಈಜುಗೊಳ

ಕನ್ನಡ ಗಣಕ ಪ್ರಪಂಚವೆಂಬ ಈಜುಗೊಳ

ಈ ನನ್ನ ಬರಹ, ಬೆಳಕು ಕಂಡರೆ, ಅದು ಬ್ಲಾಗ್ ರೂಪದಲ್ಲೇ ಇರಬೇಕು. ಸ್ವಾನುಭವಗಳಿಗೂ, ಸ್ವಾನಿಸಿಕೆಗಳಿಗೂ ಬ್ಲಾಗೇ ಉತ್ತಮವಲ್ಲವೇ.
ಸಾಕಷ್ಟು ವಿಷಯಗಳನ್ನು ಹೇಳೋಣವೆಂದಿರುಕೊಂಡಿರುವುದರಿಂದ, ವಿಚಾರಗಳು ಕಲಸುಮೇಲೋಗರವಾಗುವ ಸಾಧ್ಯತೆಯಿದೆ. ನಾನಂತೂ ವೃತ್ತಿಪರ ಬರಹಗಾರನಲ್ಲ.
ಇನ್ನು ಲೇಖವನ್ನು, ಅನುಭವಗಳು ಹಾಗು ಅನಿಸಿಕೆಗಳು ಎಂದು ವಿಂಗಡಿಸಿಕೊಂಡರೆ ಓದುವುದು ಸುಲಭವಾಗಬಹುದು.

ಶೀರ್ಷಿಕೆ ಯನ್ನು ನೋಡಿ ಕೆಲವರಾದರೂ ಹೌಹಾರಿರಬೇಕು. ಆದರೆ ಕ್ಷಮೆಯಿರಲಿ ನಿಮ್ಮನ್ನು ಇಂಥ ಘನಗಂಭೀರ ವಿಷಯ???? ದ ಕುರಿತಾಗಿ ಬೋರಿಡಿಸುವ ಯೋಚನೆಯೇನೂ ಇಲ್ಲ.

ಅಂತರ್ಜಾಲದ ಪರಿಚಯ ನನಗಾದದ್ದು, ಬಹುಶಃ ೧೯೯೫-೯೬ ರಲ್ಲಿ ನೇರವಾಗಿಯಲ್ಲ, ಲೇಖನವಾಗಿ, Competition Successನಲ್ಲಿ. ಆಗಷ್ಟೇ Internet ಭಾರತಕ್ಕಡಿಯಿಟ್ಟಿತ್ತೆಂದು ಕಾಣುತ್ತೆ. ಹೊಸದಾಗಿ ಕಲಿವ ಎಲ್ಲ ವಿದ್ಯೆಗಳ ಹಾಗೆ ನನಗೂ ಅದೇನೋ ಬ್ರಹ್ಮವಿದ್ಯೆಯಂತೆ ಕಂಡಿತ್ತು. ೧೯೯೮ರ ಸುಮಾರಿಗೆ ಮೊದಮೊದಲ, ಅಂತರ್ಜಾಲ ಕೆ‌ಫೆಗಳೂ ಅಡಿಯಿಟ್ಟವು.ಆದರೆ ನನಗೆ, ಸುಲಭಸಾಧ್ಯವಾಗಿ ಈ ಜಾಲದ ಸಂಪರ್ಕವಾಗಿದ್ದು, ಇಂಜಿನಿಯರಿಂಗ್ ಓದಲು ಸೇರಿದಾಗ, ನಮ್ಮದು VTU ಮೊದಲ ವರ್ಗ. ಕಾಲೇಜಿನಲ್ಲಿ ಅಂತರ್ಜಾಲ ವ್ಯವಸ್ಥೆ ಅಳವಡಿಸಲಾಯಿತು. ವಾರಕ್ಕಿಷ್ಟು ನಿಗದಿತ ಸಮಯ ಅಂತರ್ಜಾಲ ಉಪಯೋಗಿಸಬಹುದಿತ್ತು. ಮೈಲು, ಇತ್ಯಾದಿಗಳ ಪರಿಚಯವಾದ ನಂತರ, ನನ್ನ ಆಸಕ್ತಿ ತಿರುಗಿದ್ದು ನೆಟ್ಟಿನಲ್ಲಿ ಕನ್ನಡದ ಅವತಾರಗಳನ್ನು ಕಾಣಲು. ಮೊದಲಿಗೆ ಹೆಚ್ಚೇನು ಇರಲಿಲ್ಲ. ವಿಶ್ವಕನ್ನಡ, ದಟ್ಸ್ಕನ್ನಡ, ಕನ್ನಡಸಾಹಿತ್ಯ.ಕಾಂ . KSC ಬಂದಾಗಲಂತೂ ಆದ ಖುಷಿ ಅಷ್ಟಿಷ್ಟಲ್ಲ.

ನಂತರ Chatting ಹುಚ್ಚು.. ಬಿಡುವಿನಲ್ಲೆಲ್ಲ, ಗೊಗಲ್ ಸರ್ಚ್ ಮಾಡೋದು Kannada ಶಬ್ಧಕ್ಕೆ. ೨೦೦೨ರಲ್ಲಿ ಕಾಲೇಜಿನಿಂದ ಹೊರಬಂದ ಮೇಲೆ ಅಂತರ್ಜಾಲ ಬಳಕೆ ಕಡಿಮೆಯಾಯಿತು.
ಅಷ್ಟರಲ್ಲಿ ಆಗಲೇ ಕನ್ನಡ ಅಕ್ಕರಗಳನ್ನು ಅಂತರ್ಜಾಲ ಪರದೆಯ ಮೇಲೆ ನೇರವಾಗಿ ಮೂಡಿಸುವ ಬರಹ Direct ಸಲಕರಣೆಯೂ ಬಂದಿತ್ತು. ನುಡಿಯೂ ಬಿಡುಗಡೆಗೊಂಡಿತ್ತು. ಈ ನಡುವೆ ಅಂತರ್ಜಾಲದಲ್ಲಿ ಕೆಲವು ಕನ್ನಡ ಗುಂಪುಗಳು ಪ್ರಾರಂಭವಾಗಿದ್ದವು. ಅಂತಹ ಕೆಲವಾರು ಗುಂಪುಗಳ ಸದಸ್ಯನೂ ನಾನಾದೆ. ಆದರೆ ಎಲ್ಲದರಲ್ಲಿಯೂ ಚಟುವಟಿಕೆಯ ಕೊರತೆಯಿತ್ತು. ಅದೊಂದು ಸುದಿನ ಮಾರ್ಚಿ ೨೦೦೩ರ ಮಾಸಾಂತ್ಯದಲ್ಲಿ, ಕೆಎಸ್ಸಿ ಯ ಗೆಳೆಯರ ಭೇಟಿಯಾಯಿತು. ಈ ಸ್ನೇಹಿತರ ಮೂಲಕ ಕನ್ನಡ ತಂತ್ರಾಂಶ, ಅದರ ಸುತ್ತಲಿನ ಸಮಸ್ಯೆಗಳ ಸ್ಥೂಲ ಪರಿಚಯವಾಯಿತು.

ಮುಂದುವರೆಯುತ್ತದೆ....

Rating
No votes yet