ವಿಶ್ವಮಾನವರ್ಯಾರು?

ವಿಶ್ವಮಾನವರ್ಯಾರು?

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ ಇರಬೇಕು ಎನ್ನುತ್ತಾರೆ. ಇವ್ರೆ ಭಾರತದಲ್ಲಿ ಭಾರತೀಯತೆ ಇಲ್ಲ ಎಂದು ಹಲುಬುತ್ತಾರೆ.

ಮನುಷ್ಯರೆಲ್ಲರೂ ಒಂದೆ, ಜಾತಿ ಗೀತಿ ಎಲ್ಲ ತಪ್ಪು ಅಂತಾರೆ. ಮತ್ತೆ, ಹಿಂದುಗಳು ನಾಶವಾಗುತ್ತಿದ್ದಾರೆ, ಕ್ರಿಶ್ಚಿಯನ್ನರಾಗಿ ಮತಾಂತರಗೊಳ್ಳುತ್ತಿದ್ದಾರೆ ಅಂತ ಬೊಬ್ಬೆ ಹೊಡೆಯುತ್ತಾರೆ.

ನಮ್ಮ ಸಂಪ್ರದಾಯ, ಸಂಸ್ಕೃತಿ ಎಲ್ಲ ಬಿಟ್ಟು ಭಾರತೀಯರು ಪಾಶ್ಚಾತ್ಯರಾಗುತ್ತಿದ್ದಾರೆ ಎಂದು ಮರುಗುತ್ತಾರೆ. ಪಾಶ್ಚಾತ್ಯರೆಂದರೆ ಬರೆ ಮೋಜು, ಕುಡಿತ, ಇದರಲ್ಲೆ ಮುಳುಗಿರುವವರು ಎಂದು ಮೂಗು ಮುರಿಯುತ್ತಾರೆ.

ಇವರಿಗೇನಾದರೂ ಗೊತ್ತ, ಎಲ್ಲರೂ ವಿಶ್ವಮಾನವರಾಗಲಿ ಅಂತ ಇದು ಪ್ರಕೃತಿ ನಡೆಸುತ್ತಿರುವ osmosis ಎಂದು? ಈಗ ಯೋಗ ಅಮೇರಿಕಕ್ಕೆ ಬಂದಿದೆ. ಭೋಗ ಭಾರತದಲ್ಲಿ ನೆಲವೂರುತ್ತಿದೆ! ಒಪ್ಪಿಕೊಳ್ಳಲು ಕಷ್ಟವಾದರೂ ನಿಜಮಾತು.

ಸಂಸ್ಕೃತಿಯಿಲ್ಲವೆಂದು ಹೇಳುವ ಈ ನಾಡಿನಲ್ಲಿ, prejudice ಇಲ್ಲದ ಹಲವು ವಿಶ್ವಮಾನವರನ್ನು ಕಂಡಿರುವೆ. ಉದಾ:ಒಂದು ಮಾಧ್ವ ಸಂಸಾರ. ಅವರ ಸೊಸೆ ಬಿಳಿಯಳು. ಅಳಿಯ ಕರಿಯ. ಇವರು ದೀಪಾವಳಿ, thanksgiving, christmas ಎಲ್ಲವನ್ನೂ ಜೋರಾಗಿ ಆಚರಿಸುತ್ತಾರೆ. ಸೊಸೆ, ಅಳಿಯ ಸೊಗಸಾಗಿ ಎಲ್ಲರೊಡನೆ ಬೆರೆತು ದೋಸೆ, ಇಡ್ಲಿ, ಖಾರವಾದ ಮಜ್ಜಿಗೆ ಹುಳಿ(!)ಯನ್ನು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುವುದನ್ನು ಕಣ್ಣಾರೆ ನೋಡಿದ್ದೇನೆ. :-) ಮತ್ತೆ, ಮಡಿ ಮಡಿ ಮಡಿಯೆಂದು ಯಾರನ್ನೂ ಹತ್ತಿರ ಸೇರಿಸದೆ ಇರುತ್ತಿದ್ದ ನಮ್ಮ ಅಜ್ಜಿಯೂ ನೆನಪಿಗೆ ಬರುತ್ತಾರೆ.

ನಾವೆಲ್ಲರೂ ಒಂದೆ ಎನ್ನುವುದು ಮಾತಿನಲ್ಲಿ ಬಂದರೆ ಸಾಲದು, ಕೃತಿಯಲ್ಲಿ ಎದ್ದು ತೋರಬೇಕಲ್ಲವೆ?

ವಿ.ಸೂ. ಇದು ಯಾರಿಗೂ ಬುದ್ಧಿಮಾತು ಅಲ್ಲ. ನನಗೆ ನಾನೆ ಎಡವಿದಾಗ ಹೇಳಿಕೊಳ್ಳುವ ಪ್ರವರ.

Rating
No votes yet

Comments