ಸಂಪದದಲ್ಲಿ ಯಾಕೆ ಹೀಗೆ....?

ಸಂಪದದಲ್ಲಿ ಯಾಕೆ ಹೀಗೆ....?

ಸಂಪದ.ನೆಟ್ ಕನ್ನಡಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಕಾರಣ ಏನಪ್ಪ ಅಂದ್ರೆ , ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಒಂದು ಸಮರ್ಥ ವೇದಿಕೆಯಾಗಿದೆ ನಮ್ಮ ಈ ಸಂಪದ . ಈ ವೇದಿಕೆಯಲ್ಲಿ ಸಾವಿರಾರು ಜನರು ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಅತ್ಯಂತ ಪ್ರೀತಿಯಿಂದ ಭಾಗವಹಿಸುತ್ತಿದ್ದಾರೆ. ಭಾಗವಹಿಸುವುದರ ಜೊತೆಗೆ ಬೇರೆ ಬೇರೆ ಭಾಗಗಳಲ್ಲಿ ಇರುವಂತಹ ಎಷ್ಟೋ ಜನರು ಸ್ನೇಹಿತರಾಗಿದ್ದಾರೆ.

ಹೀಗಿರುವಾಗ ಕೆಲವರು, " ನಾನು ಸಂಪದಕ್ಕೆ ಗುಡ್ ಬೈ ಹೇಳ್ತೀನಿ, ನಾನು ಇನ್ನು ಸಂಪದದಲ್ಲಿ ಬರೆಯೋದಿಲ್ಲ, ಸಂಪದ ಸಹವಾಸವೇ ಬೇಡ, ಸಂಪದದಲ್ಲಿ ಇನ್ನು ಸ್ವಲ್ಪ ದಿನ ಬರೆಯೋದಿಲ್ಲ" ಅಂತ ಹೇಳ್ತಾರೆ. ಸಂಪದ ಏನ್ ಮಾಡಿದೆ ? ಸಂಪದದಲ್ಲಿ ಬರೆಯುವವರು ಸರಿಯಾದ ರೀತಿಯಲ್ಲಿ ಮನಸ್ಸಿಗೆ ಬೇಸರವಾಗದ ಬರೆಯಬೇಕು. ಕಾಮೆಂಟ್ ಹಾಕುವವರು ಸಹ ಕಾಮೆಂಟ್ ಹಾಕಿದ್ರೆ ಅದರಿಂದ ಲೇಖಕರ ಮನಸ್ಸಿನ ಮೇಲೆ ಏನು ಪರಿಣಾಮ ಬೀರತ್ತೆ ಅಂತಲೂ ಸಹ ಯೋಚಿಸಬೇಕು. ಯಾಕೆ ಅಂದ್ರೆ ಸಂಪದ ಒಂದು ದೊಡ್ಡ ಕುಟುಂಬ ಇದ್ದ ಹಾಗೆ . ಅಪ್ಪ, ಅಮ್ಮ, ಅಕ್ಕ, ಅಣ್ಣ, ತಮ್ಮ, ತಂಗಿ ಹೀಗೆ ಎಲ್ಲರೂ ಇರ್ತಾರೆ. ನಮ್ಮ ಮನೆಯಲ್ಲಿ ನಾವು ನಾವೇ ಕಿತ್ತಾಡಿಕೊಂಡ್ರೆ ಆಗತ್ತಾ... ನಾವೆಲ್ಲರೂ ಸಹ ಒಂದು ಒಂದು ಮನೆಯವರು , ಅದರಲ್ಲೂ ಸಹ ಕನ್ನಡಿಗರು ಅನ್ನೋ ಭಾವನೆ ನಮ್ಮಲ್ಲಿ ಮೂಡಬೇಕು. ನನಗಂತೂ ಸಂಪದದಲ್ಲಿ ಇದ್ದಷ್ಟು ಸಮಯ ತುಂಬಾನೆ ಖುಷಿಯಿಂದ ಇರ್ತೀನಿ. ನನಗೆ ಸಂಪದ ಒಬ್ಬ ಗೆಳೆಯನ ಥರಾ...ಒಬ್ಬ ಮಾರ್ಗದರ್ಶಕನ ಥರಾ.... ಒಬ್ಬ ಗುರುವಿನ ಥರಾ....

ನಾನು ಕಂಪ್ಯೂಟರ್ ನಲ್ಲಿ ಕೆಲ್ಸ ಮಾಡುತ್ತಿದ್ದಷ್ಟು ಸಮಯ, ಇಂಟರ್ನೆಟ್ ಬಳಸುತ್ತಿರುವಷ್ಟು ಸಮಯ, ಸಂಪದ ಓಪನ್ ನಲ್ಲಿ ಇರತ್ತೆ. ನಾನೇನಾದ್ರು ಒಂದು ಅಥವಾ ಎರಡು ದಿನ ನೆಟ್ ಓಪನ್ ಮಾಡಿಲ್ಲ ಅಂದ್ರೆ , ಅಕಸ್ಮಾತ್ ಸಂಪದ ಓಪನ್ ಆಗಿಲ್ಲ ಅಂದ್ರೆ, ಏನನ್ನೋ ಕಳೆದುಕೊಂಡ ಹಾಗೆ ಭಾಸವಾಗತ್ತೆ ! ಕೂಡಲೆ ಹರಿಪ್ರಸಾದ್ ನಾಡಿಗ್ ರವರಿಗೆ ಅಥವಾ ಓಂಶಿವಪ್ರಕಾಶ್ ರವರ ಗಮನಕ್ಕೆ ತಂದು ಸರಿಪಡಿಸೋ ತನಕ ಕಾಯ್ತಾ ಇರ್ತೀನಿ. ಇದು ನನಗೆ ಸಂಪದ ಮೇಲೆ ಇರೋ ಪ್ರೀತಿ ಅಂತ ನನ್ನ ಭಾವನೆ.

ಹೀಗಿರುವಾಗ ಸಂಪದದಲ್ಲಿ ನಾವೇಕೆ ಕಿತ್ತಾಡಬೇಕು, ಮನಸ್ಸಿಗೆ ಬೇಸರ ತರಿಸಬೇಕು. ಯಾರ್ಯಾರೋ, ಎಲ್ಲಿಂದಲೊ ಸಂಪದಕ್ಕೆ ಬರ್ತಾರೆ ಬಂದಾಗ ಸಂಪದ ನೋಡಿ , ಸಂಪದ ಬಳಗ ನೋಡಿ ಬೇಸರ ಪಡಬಾರದು, ಖುಷಿಪಡಬೇಕು...ನಾವೂ ಸಂಪದಿಗರಾಗೋಣ ಅಂತ ಉತ್ಸುಕರಾಗಬೇಕು.... ! ಹಾಗೆ ನೋಡಿದವರು ಅಂದುಕೊಳ್ಳುವ ಹಾಗೆ ನಾವು ನಡೆದುಕೊಳ್ಳಬೇಕು. ಗೆಳೆಯರೇ, ಇದು ಕೇವಲ ನನ್ನ ಅನಿಸಿಕೆ ಮಾತ್ರ . ಯಾರನ್ನೆ ಆಗಲಿ ನೋಯಿಸಬೇಕು ಅನ್ನೋ ಭಾವನೆಯಿಂದಾಗಲಿ, ಒಬ್ಬರನ್ನು ಹಿಯ್ಯಾಳಿಸಿಯಾಗಲಿ ಬರೆದಿದ್ದಲ್ಲ . ಇದರಿಂದ ಯಾರ ಮನಸ್ಸಿಗಾದರೂ ಬೇಸರವಾದರೆ ದಯಮಾಡಿ ನನ್ನನ್ನು ಕ್ಷಮಿಸಿ........

Rating
No votes yet

Comments