ಇಟಲಿಯ ಪಿಡ್ಜ ಹಾಗು ಬೆಂಗಳೂರಿನ ದೋಸೆ

ಇಟಲಿಯ ಪಿಡ್ಜ ಹಾಗು ಬೆಂಗಳೂರಿನ ದೋಸೆ

ಗೆಳೆಯ : ಮಗ, ಸಾಯಂಕಾಲ ಮೆಟ್ರೋ ಹತ್ತಿಕೊಂಡು ಬಂದುಬಿಡು. ರಸ್ತೆ ಪಕ್ಕದಲ್ಲಿ ಪಿಡ್ಜ ತಿನ್ನೋಕೆ ಹೋಗೋಣ
ನಾನು : ಸರಿ ಮಗ
ಸರಿ ಸುಮಾರು ೬ ಗಂಟೆಗೆ ನಾನು ಮೆಟ್ರೋ ಹತ್ತಿಕೊಂಡು ಗೆಳೆಯ ಹೇಳಿದ ಸ್ಥಳಕ್ಕೆ ಬರ್ತೀನಿ. ನೋಡಿದರೆ ಎಲ್ಲರು ರಸ್ತೆ ಪಕ್ಕದಲ್ಲಿ ಪೇಪರ್ ತಟ್ಟೆಯಲ್ಲಿ ಪಿಡ್ಜ ತಿಂತ ನಿಂತಿದ್ದಾರೆ.

ಗೆಳೆಯ : * ಇಟ್ಯಾಲಿಯನ್ ಭಾಷೆಯಲ್ಲಿ*
ನಾನು : ಏನ್ ಮಗ, ಚಮಕ್ಕಾಗಿ ಏನೋ ಹೇಳ್ತಾ ಇದ್ದೀಯ
ಗೆಳೆಯ : ಮಗ ಎರಡು ಪಾರಂಪರಿಕ ಇಟ್ಯಾಲಿಯನ್ ಪಿಡ್ಜ () ಕೊಡು ಅಂದೇ ಅಷ್ಟೇ ಮಗ
ನಾನು : ಏನ್ ನಮ್ಮ ಬೆಂಗಳೂರಿನ ದೋಸೆ ಕ್ಯಾಂಪ್ನಲ್ಲಿ ...ಎರಡು ಮಸಾಲೆ ಕೊಡಿ ಅಂದಂಗೆ ??
ಗೆಳೆಯ : ಅದೇ....ಅದೇ ....ಹುಡುಕುತ್ತಾ ಇದ್ದೆ ನೀನೆ ಹೇಳ್ಬಿಟ್ಟೆ
ನಾನು : ಸಕತ್ತಾಗಿದೆ ಮಗ ......ಮರ್ಗರಿತ

ಸ್ತಳ : ಮಿಲಾನಿನ ಯಾವುದೊ ಮೆಟ್ರೋ ಸ್ಟೇಷನ್

"ನನ್ನ ಕೆಲವು ದಕ್ಷಿಣ ಅಮೆರಿಕಾದ ಗೆಳೆಯರು ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಬೆಂಗಳೂರಿನ ರುಚಿ ತೋರಿಸೋಣ ಅಂತ ಇದ್ದೀನಿ. ಆಗ ಇದು ನೆನಪಿಗೆ ಬಂತು."

Rating
No votes yet

Comments