ನಾರಿ ನಾಚಿ ನೀರಾಗಿ....

ನಾರಿ ನಾಚಿ ನೀರಾಗಿ....

ಮುಖದಲ್ಲಿ ಮೂಡಿದೆ ಮಂದಹಾಸ ತನ್ನ
ಇನಿಯನ ಬರುವಿಕೆಯನು ಕಂಡು,
ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ,
ಏನು ಹೇಳಬೇಕೆಂದು ತಿಳಿಯದೆ.
ತನ್ನ ಬಯಕೆಯ ಹೇಳುವ ತವಕದಲಿ,
ತನ್ನನೆ ಮರೆತಳು ಈ ಲೋಕದಲಿ.

ಕಣ್ಣ ಮುಂದಿನ ಮುಂಗುರುಳು ಮಾಡಿದೆ ಮೋಡಿ,
ಕಣ್ಣಂಚಿನಲಿ ತುಂಬಿದೆ ಊರಗಲದ ಪ್ರೀತಿ.
ತುಟಿಯಂಚಿನ ನಗೆಯು ಕರೆದಿದೆ ಇನಿಯನ,
ತನ್ನ ಬಾಹುಗಳಲ್ಲಿ ಬಂಧಿಸಲು ಕೊನೆತನಕ....

Rating
No votes yet

Comments