ಹರಿಹರಪುರ ನಾರಾಯಣಪ್ಪನವರ ವಂಶವೃಕ್ಷ

ಹರಿಹರಪುರ ನಾರಾಯಣಪ್ಪನವರ ವಂಶವೃಕ್ಷ

ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ:
ವೈಯಕ್ತಿಕ ಬ್ಲಾಗ್ ಬರಹವಾದ್ದರಿಂದ ತೀರಾ ಖಾಸಗೀ ವಿಚಾರವಾದ ನನ್ನ ವಂಶವೃಕ್ಷದ ಬಗ್ಗೆ ಬರೆಯುವ ಸಾಹಸ ಮಾಡಿರುವೆ.
ಉದ್ಧೇಶ: ನಮ್ಮ ತಂದೆಯವರು ಅವರಪ್ಪ ಅಮ್ಮನ ಶ್ರಾದ್ಧ ಮಾಡುವಾಗ ಮಾಡುತ್ತಿದ್ದ ಸಂಕಲ್ಪದಿಂದ ಅವರಪ್ಪ-ಅಮ್ಮ,ಅವರ ಅಜ್ಜ-ಅಜ್ಜಿ ಹೆಸರುಗಳು ನನಗೆ ತಿಳಿಯಿತು. ಆದರೆ ನಮ್ಮ ಪೂರ್ವಿಕರು ಯಾರೂ ಅಂತಾ ಸಾಧನೆ ಮಾಡದಿದ್ದುದರಿಂದ ಅವರುಗಳ ಹೆಸರು ಸಾರ್ವಜನಿಕವಾಗಿ ದಾಖಲಾಗಿಲ್ಲ. ಅಂದ ಮಾತ್ರಕ್ಕೆ ನಮ್ಮ ಪೂರ್ವಿಕರನ್ನು ಮರೆತು ಬಿಡುವುದೇ? ಇಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಷ್ಟೇನೂ ಇಲ್ಲ.ಆದರೆ ನನಗೊಂದು ನಂಬಿಕೆ ಇದೆ. ಮುಂದೆ ನಮ್ಮ ಮಕ್ಕಳು ದೊಡ್ದವರಾದಾಗ ಅವರ ಪೂರ್ವಿಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಬಹುದು.ಆಗ ತಿಳಿಸಲು ಯಾರಿರುತ್ತಾರೋ ಇಲ್ಲವೋ, ಆದ್ದರಿಂದ ನನಗೆ ತಿಳಿದದ್ದನ್ನು ದಾಖಲಿಸಿದರೆ ಮುಂದೆ ನಮ್ಮ ಮಕ್ಕಳಿಗೆ ಮಾಹಿತಿ ಸುಲಭವಾಗಿ ದೊರೆಯುವುದೆಂಬ ಆಶಯ.ನಾನು ನಮ್ಮ ಪೂರ್ವಿಕರ ಬಗ್ಗೆ ಮಾಹಿತಿ ಹುಡುಕುತ್ತಾ ಹೋದಾಗ ನಮ್ಮ ಚಿಕ್ಕಜ್ಜ ಕೃಷ್ಣಪ್ಪನವರ ಇಬ್ಬರು ಮಕ್ಕಳೊಡನೆ ಹೆಚ್ಚು ಮಾಹಿತಿ ಇರಲಿಲ್ಲ. ನಮ್ಮ ದೊಡ್ದಪ್ಪ ನಾರಾಯಣಪ್ಪನವರ ಮಕ್ಕಳು ನನಗಿಂತ ಬಹಳ ಹಿರಿಯರು ಇದ್ದಾರೆ. ಅವರಲ್ಲಿಯೂ ಹೆಚ್ಚು ಮಾಹಿತಿ ಇಲ್ಲ.ನಮ್ಮೂರಲ್ಲಿ ನಮ್ಮ ದಾಯಾದಿಗಳಾದ ಚಂದ್ರಶೇಖರಯ್ಯ, ಶ್ರೀಕಂಠಯ್ಯ, ಗುಂಡಪ್ಪ, ಇವರುಗಳನ್ನು ವಿಚಾರಿಸಿದಾಗ ಅವರಹಿಂದಿನ ಮೂರು ನಾಲ್ಕು ತಲೆಮಾರಿನವರ ಹೆಸರನ್ನು ಹೇಳುತ್ತಾರೆ, ಆದರೆ ಅವರ ಪೂರ್ವಿಕರು ಮತ್ತು ನನ್ನ ಪೂರ್ವಿಕರು ಯಾವ ಒಬ್ಬ ತಂದೆಯ ಮಕ್ಕಳಾಗಿದ್ದಾರೆಂಬ ಮಾಹಿತಿ ದೊರೆಯಲೇ ಇಲ್ಲ. ಅಂತೂ ಅವರು ನಮಗೆ ದಾಯಾದಿಗಳು. ಎಷ್ಟು ತಲೆಮಾರಿನ ಹಿಂದೆ ಎಂಬ ವಿಷಯ ತಿಳಿಯುವುದೇ ಇಲ್ಲ.
ನಮ್ಮಪ್ಪನಿಗೆ ತನ್ನ ಪೂರ್ವಿಕರ ಬಗ್ಗೆ ಅವರಿಗೆ ಅಪಾರ ಗೌರವ. ಅದರಿಂದಲೇ ಅವರ ಮಗನಾದ ನನಗೂ ನಮ್ಮ ಪೂರ್ವಿಕರ ಬಗ್ಗೆ ಒಂದಿಷ್ಟು ಮಾಹಿತಿ ಹಿಡಿದಿಡಬೇಕೆಂಬ ಆಸೆ. ನಮ್ಮೂರಲ್ಲಿ ಬ್ರಾಹ್ಮಣರದು ಹದಿನಾರು ಮನೆ.ಕಾಶ್ಯಪ , ಆತ್ರೇಯಸ ಮತ್ತು ಇನ್ನೊಂದು ಗೋತ್ರದ ಮೂಲಕ್ಕೆ ಸೇರಿದವರು.ಪರಾಶರ ಗೋತ್ರ ಹಾಗೂ ಮತ್ತೊಂದು ಗೋತ್ರಕ್ಕೆ ಸೇರಿದ ಮೂರುನಾಲ್ಕು ಮನೆಗಳಿವೆಯಾದರೂ ಅವರೆಲ್ಲಾ ಅರಕಲಗೂಡು ತಾಲ್ಲೂಕು ಬೆಳವಾಡಿ ಹಾಗೂ ಹೆಬ್ಬಾಲೆಯವರು, ನಮ್ಮೂರಿಗೆ ಬಂದು ಸೇರಿದವರು.ನಮ್ಮ ಮುತ್ತಜ್ಜನ ಅಜ್ಜ ಅಂದರೆ ನಾರಾಯಣಪ್ಪನವರ ತಂದೆ ಕೂಡ ಅರಕಲಗೂಡು ತಾಲ್ಲೂಕು ಜೋಡಿ ಗುಬ್ಬಿಯಿಂದ ನಮ್ಮೂರಿಗೆ ದತ್ತು ಮಗನಾಗಿ ಬಂದವರೆಂದು ಹೇಳುತ್ತಾರೆ. ದತ್ತು ಮಗನಾಗಿ ಬಂದಿದ್ದರಿಂದ ನಮ್ಮ ಪೂರ್ವಿಕರಿಗೂ ಜೋಡಿದಾರಿಕೆಯಲ್ಲಿ ಹಕ್ಕು ದೊರೆತು ನಮ್ಮಪ್ಪನೂ ಕೂಡ ಜೋಡೀದಾರ್ ಹಕ್ಕನ್ನು ಪಡೆದಿದ್ದರು.
ವಂಶವೃಕ್ಷ ತಯಾರಿಸಲು ಮಾಹಿತಿ ಕೆದುಕುತ್ತಾ ಹೋದಾಗ ೧೭೯೦ ರ ವರಗಿನ ಆರು ತಲೆಮಾರುಗಳ ಮಾಹಿತಿ ಲಭ್ಯವಾಯ್ತು.ವಂಶವೃಕ್ಷ ಸಿದ್ಧಪಡಿಸುವಾಗ ಮೊದಲು ವಂಶದ ಮೂಲ ವ್ಯಕ್ತಿ, ಅವರ ಹೆಸರಿನ ಪಕ್ಕದಲ್ಲಿಯೇ ಅವರ ಜನ್ಮ ವರ್ಷ ಹಾಗೂ ಅವರ ಧರ್ಮ ಪತ್ನಿ ಹೆಸರನ್ನೂ ಕೂಡ ನಮೂದಿಸಿರುವೆ.ಆನಂತರ ನಮ್ಮ ಅಪ್ಪನ ಒಡಹುಟ್ಟಿರುವ ಎಲ್ಲರ ಪೂರ್ಣ ವಿವರ ನೀಡಿರುವೆ. ಮೂರನೇ ತಲೆಮಾರಿನವರಾದ ನಮ್ಮ ದೊಡ್ದಮ್ಮ ಕಮಲಮ್ಮ ನವರು [ದೊಡ್ಡಪ್ಪ ನಾರಾಯಣಪ್ಪನವರ ಪತ್ನಿ ] ಮಾತ್ರ ಹಿರಿತಲೆಯಾಗಿ ಉಳಿದಿರುವುದು ನಮ್ಮ ಸೌಭಾಗ್ಯ.
ಇನ್ನು ವಂಶವೃಕ್ಷ ಸಿದ್ಧಪಡಿಸುವಾಗ ಹೆಣ್ಣು ಮಕ್ಕಳನ್ನೂ ಸಹ ಅವರವರ ಜನ್ಮ ಸ್ಥಾನದಲ್ಲಿ  ನಮೂದಿಸಿದ್ದೇನೆ.

 

ಒಂದು ಬಿನ್ನಹ:

ಹರಿಹರಪುರ ನಾರಾಯಣಪ್ಪನವರ ವಂಶದಲ್ಲಿನ ಎಲ್ಲರ ಸಮಗ್ರ ಮಾಹಿತಿ ಹಿಡಿದಿಡಬೇಕೆಂಬ ಬಯಕೆ ನನ್ನದು. ಅದಕ್ಕಾಗಿ ನಾನು ಸಿದ್ಧಪಡಿಸಿರುವ ವಂಶವೃಕ್ಷವನ್ನು ಪ್ರಕಟಿಸಿರುವೆ. ಅದರಲ್ಲಿ  ಒಂದು ಎರಡು ಮತ್ತು ಮೂರನೇ ತಲೆಮಾರಿನಲ್ಲಿರುವ ನನ್ನ ಬಂಧುಗಳು ಅವರವರ ಮಕ್ಕಳು ಮೊಮ್ಮಕ್ಕಳ ಬಗ್ಗೆ ಮಾಹಿತಿ ಒದಗಿಸಿದಾಗ ವಂಶವೃಕ್ಷ ಇಂದಿನಂತೆ ಪೂರ್ಣಗೊಳ್ಳುತ್ತದೆ. ಅಲ್ಲದೆ ಮುಂದಿನ ತಲೆಮಾರಿನವರಿಗೆ ಮಾಹಿತಿ ಸೇರಿಸಲು ಅನುಕೂಲ ವಾಗುತ್ತದೆ.
ನಮ್ಮೂರಿನ ಅನೇಕರು ಬೆಂಗಳೂರಿನಲ್ಲಿ ಈಗ ನೆಲಸಿದ್ದಾರೆ. ಅವರಲ್ಲಿ ಅನೇಕರು ಕಾಶ್ಯಪ ಗೋತ್ರದವರೂ ಇದ್ದಾರೆ. ಯಾರಲ್ಲಾದರೂ ನಾನು ಪ್ರಕಟಿಸಿರುವ ವಂಶವೃಕ್ಷಕ್ಕೆ ಪೂರಕ ಮಾಹಿತಿ ಲಭ್ಯ ವಿದ್ದರೆ ದಯಮಾಡಿ ನನಗೆ ಪತ್ರದ ಮೂಲಕ ತಿಳಿಸಿ. ಮಾಹಿತಿ ಅಪ್ ಡೇಟ್ ಮಾಡಲು ನೆರವಾಗುತ್ತದೆ. ಅಲ್ಲದೆ ಇತ್ತೀಚಿನ ಎರಡು ಮೂರು ತಲೆಮಾರಿನ ನಮ್ಮ ಬಂಧುಗಳು ಅವರ ಕುಟುಂಬದ ವಿವರಗಳನ್ನು ದಯಮಾಡಿ ಕಳಿಸಿಕೊಡಿ. ಸಮಗ್ರ ಮಾಹಿತಿಯೊಡನೆ ಒಂದು ಪುಸ್ತಕವನ್ನು ರಚಿಸಲು ನೆರವಾದೀತು. ನಮ್ಮ ನಿಮ್ಮ ಮಕ್ಕಳಿಗೆ ನಮ್ಮ ಬಂಧು ಬಾಂಧವರ ಪರಿಚಯ ವಾಗಲು ಆ ಪುಸ್ತಕ ನೆರವಾದೀತು. 

Rating
No votes yet

Comments