ದೇವರು ಮತ್ತು ನಂಬಿಕೆ

ದೇವರು ಮತ್ತು ನಂಬಿಕೆ

ಇಂದು ಒಂದು ನೈಜ ಘಟನೆ ಅಂತೆ :

ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ ಫಿಲಾಸಫಿ ಪ್ರೊಫೆಸರ್ ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ :

ಪ್ರೊಫೆಸರ್ :ನೀನು ದೇವರನ್ನು ನಂಬುತ್ತಿಯ?
ವಿದ್ಯಾರ್ಥಿ :ಖಂಡಿತವಾಗಿಯೂ
ಪ್ರೊ :ಹಾಗಾದರೆ ದೇವರು ಒಳ್ಳೆಯವನ ?
ವಿ :ಹೌದು
ಪ್ರೊ :ದೇವರು ಶಕ್ತಿವಂತನ ?
ವಿ :ಹೌದು
ಪ್ರೊ :ನನ್ನ ತಮ್ಮ ದೇವರ ದೊಡ್ಡ ಭಕ್ತ , ಅವನಿಗೆ ಕ್ಯಾನ್ಸರ್ ಬಂದು ತೀರಿಕೊಂಡ . ದೇವರಲ್ಲಿ ತುಂಬಾ ನಂಬಿಕೆ ಇದ್ದವನು .ನಾವೆಲ್ಲರೂ ರೋಗದಿಂದ ನರಳುತ್ತಿರುವವರಿಗೆ ಸಹಾಯ ಮಾಡುತ್ತವೆ , ದೇವರು ಎಂದಾದರು ಮಾಡಿದ್ದಾನ ? ಹಾಗಾದರೆ ದೇವರು ಹೇಗೆ ಒಳ್ಳೆಯವನು ?
ವಿ :ಮೌನ
ಪ್ರೊ :ಹೋಗಲಿ ಬಿಡು ಇದಕ್ಕೆ ನಿನ್ನ ಬಳಿ ಉತ್ತರವಿಲ್ಲ . ಇನ್ನೊಮ್ಮೆ ಶುರುಮಾಡೋಣ , ಮತ್ತೆ ಕೇಳುತ್ತಿದ್ದೇನೆ ದೇವರು ಒಳ್ಳೆಯವನ ?
ವಿ :ಹೌದು
ಪ್ರೊ : ಹಾಗಾದರೆ ಸಾತನ್ ಒಳ್ಳೆಯವನ
ವಿ :ಅಲ್ಲ
ಪ್ರೊ :ಅವನು ಎಲ್ಲಿಂದ ಬಂದ
ವಿ : ದೇವರಿಂದ
ಪ್ರೊ : ಸರಿ , ಈ ಜಗತ್ತಿನಲ್ಲಿ ಕೆಟ್ಟದ್ದು ಇದೆ ಅಲ್ವಾ ?
ವಿ :ಹೌದು
ಪ್ರೊ :ದೇವರು ಎಲ್ಲವನ್ನು ಸರಿ ಮಾಡುತ್ತಾನೆ ಅಲ್ವಾ ?
ವಿ :ಹೌದು
ಪ್ರೊ :ಹಾಗಾದರೆ ಕೆಟ್ಟದ್ದನ್ನು ಸೃಷ್ಟಿಸಿದ್ದು ಯಾರು ?
ವಿ :ಮೌನ
ಪ್ರೊ :ವಿಜ್ಞಾನದ ಪ್ರಕಾರ ಮನುಷ್ಯನಿಗೆ ತನ್ನ ಸುತ್ತಮುತ್ತಲಿದನ್ನು ನೋಡಲು ಮತ್ತು ಅನುಭವಿಸಲು ಪಂಚೆದ್ರಿಯಗಳಿವೆ , ಹೌದು ತಾನೇ . ಹಾಗಾದರೆ ನೀನು ಎಂದಾದರು ದೇವರನ್ನು ನೋಡಿದ್ದಿಯ .
ವಿ :ಇಲ್ಲ
ಪ್ರೊ : ನೀನು ಎಂದಾದರೂ ದೇವರ ಮಾತನ್ನು ಆಲಿಸಿದ್ದಿಯ .
ವಿ : ಇಲ್ಲ
ಪ್ರೊ :ನೀನು ಎಂದಾದರೂ ದೇವರ ಸ್ಮೆಲ್ ಅಥವಾ ರುಚಿ ನೋಡಿದ್ದಿಯ ?
ಎಂದಾದರೂ ನೀನು ಮಾಡುವ ಕೆಲಸಗಳಿಗೆ ದೇವರು ಸಲಹೆ ನೀಡಿದ್ದಾನ?
ವಿ :ಇಲ್ಲ
ಪ್ರೊ :ಆದರು ಕೂಡ ನೀನು ದೇವರನ್ನು ನಂಬುತ್ತಿ?
ವಿ :ಹೌದು
ಪ್ರೊ : ವಿಜ್ಞಾನದ ಹಾಗೂ ಸಂಶೋಧನೆಗಳ ಪ್ರಕಾರ ದೇವರು ಇಲ್ಲ , ನೀನು ಏನು ಹೇಳುತ್ತಿ .
ವಿ :ನನಗೆ ನಂಬಿಕೆ ಇದೆ .
ಪ್ರೊ : ಅದೇ ವಿಜ್ಞಾನದ ಮುಂದೆ ಇರುವ ದೊಡ್ಡ ತಲೆನೋವು
ವಿ :ಪ್ರೊಫೆಸರ್ , ಶಾಖ ಎಂಬ ವಸ್ತು ಇದೆಯೇ ?
ಪ್ರೋ :ಹೌದು
ವಿ : ಹಾಗೆಯೇ ಕೋಲ್ಡ್ ಅಂತ ಇದೆಯೇ ?
ಪ್ರೋ :ಎಸ್
ವಿ :ಇಲ್ಲ , ಅಂತದ್ದು ಏನು ಇಲ್ಲ
ಪ್ರೋ : ಸರ್ , " ತುಂಬಾ ತರಹದ ಹೀಟ್ (ಶಾಖ ) ಇದೆ ಸೂಪರ್ ಹೀಟ್ , ಮೆಗಾ ಹೀಟ್ ವೈಟ್ ಹೀಟ್ , ಅ ಲಿಟಲ್ ಹೀಟ್ ಅಥವಾ ನೋ ಹೀಟ್ .ಆದರೆ ಕೋಲ್ಡ್ ಅಂತ ಹೇಳುವಂತ ವಸ್ತುವೇ ಇಲ್ಲ .-೪೫೮ ಡಿಗ್ರಿ ವರೆಗೂ ಹೀಟ್ ಇರುತ್ತೆ , ಅದಕ್ಕಿಂತ ಮುಂದೆ ನೋ ಹೀಟ್ .
ಆದರೆ ಕೋಲ್ಡ್ ಅನ್ನುವಂತದ್ದು ಏನು ಇಲ್ಲ . ಹೀಟ್ನ ಆಬ್ಸೆನ್ಸ್ ಅನ್ನು ವಿವರಿಸಲು ಕೋಲ್ಡ್ ಅನ್ನೋ ಪದ ಬಳಸುತ್ತೇವೆ ಅಷ್ಟೇ .ಕೋಲ್ಡ್ ಅನ್ನು ಅಳೆಯಲು ಸಾಧ್ಯವಿಲ್ಲ . ಹೀಟ್ ಎನ್ನುವುದು ಎನರ್ಜೀ(ಶಕ್ತಿ ) .ಕೋಲ್ಡ್ ಎನ್ನುವುದು ಹೀಟ್ ನ ವಿರುದ್ಧ ಪದ ಅಲ್ಲ , ಕೇವಲ ಅದರ ಆಬ್ಸೆನ್ಸ್ ಅಷ್ಟೇ" .
(ಇಡೀ ತರಗತಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ ).
ವಿ : ಕತ್ತಲು ಎನ್ನುವುದು ಇದೆಯೇ ಪ್ರೊಫೆಸರ್
ಪ್ರೊ: ರಾತ್ರಿ ಏನು ಕಾಣುತ್ತೇವೋ ಅದೇ ಕತ್ತಲು
ವಿ :ಮತ್ತೊಮ್ಮೆ ನಿವ್ವು ತಪ್ಪು ಹೇಳುತ್ತಿದ್ದೀರಿ , ಕತ್ತಲು ಎನ್ನುವುದು ಯಾವುದೋ ವಸ್ತುವಿನ ಆಬ್ಸೆನ್ಸ್ ಅಷ್ಟೇ .ಬೆಳಕಿನಲ್ಲಿ ಹಲವು ವಿಧಗಳಿವೆ , ಮಂದ ಬೆಳಕು , ಸಾಧಾರಣ ಬೆಳಕು , ಮಿನುಗುವ ಬೆಳಕು , ಗಾಢ ಬೆಳಕು ,ಬೆಳಕು ಇಲ್ಲದೇ ಇರುವುದು ಹೀಗೆ ......
ಆದರೆ ಏನು ನಿಯಮಿತವಾಗಿ ಬೆಳಕೆ ಇಲ್ಲದೇ ಇರುವುದನ್ನು ಕತ್ತಲು ಅನ್ನುತ್ತೇವೆ ಅಲ್ಲವೇ ?
ಕತ್ತಲನ್ನು ಇನ್ನೂ ಗಾಢವಾಗಿ ಮಾಡಲು ನಿಮ್ಮಿಂದ ಸಾಧ್ಯವೇ ?
ಪ್ರೊ :ಹಾಗಾದರೆ ನೀನು ಏನು ಹೇಳ ಹೊರಟಿಡ್ದೀಯ .
ವಿ :ನಿಮ್ಮ ಆಧ್ಯಾತ್ಮಿಕ ಚಿಂತನೆ ದುಷ್ಟವಾಗಿದೆ ಅಂತ .
ಪ್ರೊ : ದುಷ್ಟವೆ ? ವಿವರಿಸುತ್ತಿಯ ?
ವಿ :ನಿಮಗೆ ನಿಮ್ಮಲ್ಲೇ ದ್ವಂದ್ವ ಇದೆ . ನಿಮ್ಮ ಪ್ರಕಾರ ಬದುಕು ಮತ್ತು ಸಾವು 2 ಇದೆ ಹಾಗೆ ಒಳ್ಳೇ ದೇವರು ಮತ್ತು ಕೆಟ್ಟ ದೇವರಿದ್ದಾರೆ .ನೀವು ದೇವರನ್ನು ಒಂದು ವಸ್ತು , ನಾವು ಅದನ್ನು ಅಳೆಯಬಹುದು ಅನ್ನುತ್ತಿದ್ದೀರ .ಸಾವು ಎಂಬುದು ಬದುಕಿನ ವಿರುದ್ಧ ಪದ ಅಲ್ಲ ಕೇವಲ ಬದುಕಿನ ಆಬ್ಸೆನ್ಸ್ ಅಷ್ಟೇ .ಹಾಗೆ ಅದು ವಿರುದ್ಧ ಅಂತ ಹೇಳಬೇಕಾದರೆ ನೀವದನ್ನ ಅನುಭವಿಸಿರಬೇಕು ,ನಿಮ್ಮ ಪ್ರಕಾರ .
ಈಗ ಹೇಳಿ ಸರ್ , ನೀವು ನಿಮ್ಮ ವಿಧ್ಯಾರ್ಥಿಗಳಿಗೆ ಮಾನವನ ಉಗಮ ಮಂಗಗಳಿಂದ ಆಯಿತು ಅಂತ ಭೋದಿಸುತ್ತೀರ .
ಪ್ರೊ :ನೀನು ನೈಸರ್ಗಿಕ ಬದಲಾವಣೆಯ ಬಗ್ಗೆ ಹೇಳುವುದಾದರೆ , ಹೌದು ನಾನು ಹಾಗೆ ಭೋದಿಸುತ್ತೇನೆ .
ವಿ :ನಿಮ್ಮ ಕಣ್ಣಿನಿಂದ ಎಂದಾದರೂ ಈ ಬದಲಾವಣೆಯನ್ನು ನೋಡಿದ್ದೀರಾ ಸರ್ ?
(ನಿಧಾನವಾಗಿ ಪ್ರೊಫೆಸರ್ ಗೆ ಗೊತ್ತಾಗತೊಡಗಿತ್ತು ಈ ವಾದ ಎತ್ತ ಕಡೆ ಸಾಗುತ್ತಿದೆ ಎಂದು )
ವಿ :ಹಾಗಾಗಿ ಈ ಮಾನವನ ವಿಕಾಸವನ್ನು ಯಾರು ತಮ್ಮ ಕಣ್ನಿಂದ ನೋಡಿಲ್ಲ ಮತ್ತು ಹೀಗೆ ಆಗಿದೆ ಅಂತ ವಾದಿಸುವ ಹಾಗೆ ಕೂಡ .
ವಿ :ಇನ್ನೊಂದು , ಈ ತರಗತಿಯಲ್ಲಿರುವ ಯಾರಾದರೂ ನಮ್ಮ ಪ್ರೊಫೆಸರ್ ಮೆದಲು ನೋಡಿದ್ದೀರ?
(ಇಡೀ ತರಗತಿಯಲ್ಲಿರುವ ವಿದ್ಯಾರ್ಥಿಗಳು ಒಮ್ಮೆ ಜೋರಾಗಿ ನಗುತ್ತಾರೆ )
ವಿ : ಯಾರಾದರೂ ಅವರ ಮೆದುಳಿನ ಮಾತು ಕೇಳಿದ್ದೀರ? ಮುಟ್ಟಿದ್ದೀರ ? ಪರಿಮಳ ಅನುಭವಿಸಿದ್ದೀರ ?
ಇಲ್ಲ ಎನ್ನುವುದಾದರೆ ಅವರದೇ ವಿಜ್ಞಾನದ ಪ್ರಕಾರ ನಮ್ಮ ಪ್ರೊಫೆಸರ್ಗೆ ಮೆದುಳಿಲ್ಲ .
ಸರ್ ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ ,ಆದರೆ ಮೆದುಳೆ ಇಲ್ಲದಿದ್ದರೆ ನಿಮ್ಮನ್ನು ನಂಬುವುದು ಹೇಗೆ ?
ಪ್ರೊ :ಹೌದು, ನಿನ್ನ ನಂಬಿಕೆ ನನ್ನನ್ನು ಸೋಲಿಸಿತು
ವಿ : "ಅದೇ ಸರ್ ಮನುಷ್ಯ ಮತ್ತು ದೇವರ ನಡುವಿನ ಕೊಂಡಿಯೇ ನಂಬಿಕೆ , ಅದೇ ಈ ಬದುಕನ್ನು ಜೀವಂತವಾಗಿರುಸುತ್ತೆ ಮತ್ತು ಮುನ್ನೆಡೆಸುತ್ತೆ

ಮೂಲ : ನನಗೆ ಬಂದ ಒಂದು ಇಂಗ್ಲಿಷ್ ಮಿಂಚಂಚೆ , ಅದನ್ನು ನನಗೆ ತಿಳಿದ ಮಟ್ಟಿಗೆ ಕನ್ನಡಕ್ಕೆ ಅನುವಾದಿಸಿದ್ದೇನೆ . ಮೂಲ ಮೇಲ್ ಬೇಕಾದಲ್ಲಿ ನನಗೆ ಒಂದು ಖಾಸಗಿ ಸಂದೇಶ ಕಳಸಿ.

ಇಂತಿ ನಿಮ್ಮೊಲುಮೆಯ

ವಿನಯ

Rating
No votes yet

Comments