ಬಾರೆ ರಾಧೆ

ಬಾರೆ ರಾಧೆ

ಹೋಗೋಣ ಬಾರೆ
ಗೆಳತಿ ರಾಧಾ ಮೋಹನ
ಸನಿಹಕೆ |
ರಂಗಿನಾಟ ನಿರತ
ತುಂಗಾ ನದಿ
ತೀರಕೆ |
ವೇಣುಗಾನಕೆ
ಸೋತ ಗೋವುಗಳ
ದಂಡಿನಲ್ಲಿಗೆ |
ರಂಗಿನಾಟದಿ
ಮರೆತ ಗೋಪರ
ಗುಂಪಿನಲ್ಲಿಗೆ |
ರಾಧಾ ಮೋಹನರು ಈಗಿಲ್ಲ
ನಾವು ಆಟ ಆಡೋಣ
ಬಾರೇ ಗೆಳತಿ |
ತುಂಗಾ ತೀರದೀ ಜಲದಾಟ
ಆಡಿ ತನುಮನ ತಣಿಸೋಣ
ಬಾರೇ ಗೆಳತಿ |
ನೀನೇ ರಾಧೆ ನಾನೇ ಮೋಹನ
ಒಮ್ಮೆ ನುಡಿಸಲೇ ವೇಣು
ಹಾಡುತ್ತ ಬಾ ರಾಧೆ |
ಇಲ್ಲಿ ಯಶೋಧೆ ನಂದನ ಇಲ್ಲ
ಕಂಸನ ಕಿರುಕುಳ ಇಲ್ಲ
ಕುಣಿಯೋಣ ಬಾ ರಾಧೆ |

Rating
No votes yet