"ನೀ ಮಾಯೆಯೊಳಗೋ...?" ಡಾ. ರಾಜಕುಮಾರರಿಂದ ತಪ್ಪಾಗಿ ಹಾಡಿಸಿದ್ದಾರೆಯೇ...?

"ನೀ ಮಾಯೆಯೊಳಗೋ...?" ಡಾ. ರಾಜಕುಮಾರರಿಂದ ತಪ್ಪಾಗಿ ಹಾಡಿಸಿದ್ದಾರೆಯೇ...?

"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ"

http://www.carnaticmusic.esmartmusic.com/srikanakadasa/songs/neek.htm

ಈ ದಾಸರ ಪದದ ಒಂದನೇ ಚರಣದಲ್ಲಿ

"ಬಯಲು ಆಲಯದೊಳಗೋ ಆಲಯವು ಬಯಲೊಳಗೋ" ಎಂದು ಇದೆ.

ಆದರೆ ಡಾ. ರಾಜಕುಮಾರ್ ಹಾಡಿರುವುದರಲ್ಲಿ "ಬಯಲು ಆಲಯದೊಳಗೋ ಆಲಯದೊಳು ಬಯಲೋ" ಅಂತ ತಪ್ಪಾಗಿ ಇದೆ.

ಸುಮಾರು ಇಪ್ಪತ್ತು ವರುಷಗಗಳ ಹಿಂದೆ ಇದನ್ನು ಆಲಿಸಿದಾಗ ಈ ತಪ್ಪಿನ ಅರಿವಾಗಿತ್ತು. ಅದನ್ನು ನಮ್ಮ ಅಪ್ಪಯ್ಯನವರ ಜೊತೆಗೆ ಚರ್ಚಿಸಿದ್ದೆ. ಆಮೇಲೆ ಮರೆತಿದ್ದೆ.
ಈಗ ಎರಡು ವಾರಗಳ ಹಿಂದೆ ಬಾನುಲಿಯಲ್ಲಿ ಆಲಿಸಿದಾಗ ಮತ್ತೆ ನೆನಪಾಯ್ತು.

ಹಾಗಾಗಿ ಈ ಪ್ರಶ್ನೆ.

ಡಾ. ರಾಜಕುಮಾರರಿಂದ ತಪ್ಪಾಗಿ ಹಾಡಿಸಿದ್ದಾರೆಯೇ...?

Rating
No votes yet