citibank ಇವರು ಕನ್ನಡದಲ್ಲಿ ಗ್ರಾಹಕ ಸೇವೆ ಕೊಡೋದು ಯಾವಾಗ?

citibank ಇವರು ಕನ್ನಡದಲ್ಲಿ ಗ್ರಾಹಕ ಸೇವೆ ಕೊಡೋದು ಯಾವಾಗ?

ನಾನು citibank ನ ಗ್ರಾಹಕಳು... ನಾನು ಸುಮಾರು ೮-೧೦ ತಿಂಗಳಿಂದ ಇವರಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಕೊಡಿ ಅಂತ ಕೇಳ್ತಾ ಇದ್ದೇನೆ.. ಇವರ ಗ್ರಾಹಕಸೇವೆಯ ಕಛೇರಿ ಇರುವುದು ಚೆನ್ನೈನಲ್ಲಿ. ಬೆಂಗಳೂರಿನಲ್ಲಿ ಇವರಿಗೆ ಬೇಕಾದಷ್ಟು ಗ್ರಾಹಕರಿದ್ರೂ ಕೂಡ ಇಲ್ಲೊಂದು ಕಛೇರಿ ತೆರೆಯಬೇಕು ಅಂತ ಇವರಿಗೆ ಇನ್ನೂ ಅನ್ಸಿಲ್ಲ... ಪ್ರತಿ ಬಾರಿ ನಾನು ಇವರಿಗೆ ಕರೆ ಮಾಡಿ ಕನ್ನಡದಲ್ಲಿ ಮಾತಾಡುವ ಅಧಿಕಾರಿಗೆ ನನ್ನ ಕರೆಯನ್ನ ವರ್ಗಾಯಿಸಿ ಅಂತ ಕೇಳ್ತೇನೆ.. ಆದ್ರೆ, ಪ್ರತೀ ಬಾರಿ ನನಗೆ ಸಿಗೋ ಉತ್ತರ "ಕನ್ನಡ ಮಾತಾಡುವ ಅಧಿಕಾರಿ ಸಧ್ಯಕ್ಕೆ ವ್ಯಸ್ಥರಾಗಿದ್ದಾರೆ... ಬೇಕಾದರೆ ನೀವು ತಮಿಳನಲ್ಲಿ ಮಾತಾಡಬಹುದು!!!!" ...
ಅದು ಯಾಕೆ ೮-೧೦ ತಿಂಗಳಿಂದ ಕನ್ನಡದ ಅಧಿಕಾರಿಗಳು ಮಾತ್ರ ಸಿಗೋದಿಲ್ಲ ಅಂತ ಅರ್ಥ ಆಗ್ತಾ ಇಲ್ಲ... ನಿಜವಾಗ್ಲೂ ಇವರಲ್ಲಿ ಕನ್ನಡದ ಅಧಿಕಾರಿಗಳು ಇದಾರೋ ಇಲ್ವೋ ಅಂತ ಗೊತ್ತಾಗ್ತಾ ಇಲ್ಲ. ಕನ್ನಡಿಗರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಕೊಡೋದು ಅಷ್ಟೊಂದು ಅವಶ್ಯಕವಲ್ಲ ಅಂತ ಏನಾದ್ರು ಇವ್ರು ತಿಳಿದುಕೊಂಡಿರಬಹುದು... ಕರ್ನಾಟಕದಲ್ಲಿ ಇರುವವರಿಗೆ ಕನ್ನಡದಲ್ಲಿ ಸೇವೆ ಕೊಡಬೇಕು ಅನ್ನೋದು citibank ನ ಬಧ್ಧತೆಯ ಕೋಡ್ ನಲ್ಲೇ ಇದೆ.. (http://www.online.citibank.co.in/customerservice/pdf/BCSBI_Kannada.pdf). ಆದ್ರೆ  ಇದನ್ನ citibank ಮಾಡೋದು ಯಾವಾಗ?
citibank ನ ivr ನಲ್ಲಿ ಕೂಡ ಕನ್ನಡ ಇಲ್ಲ....
ನಮ್ಮಲ್ಲಿ ಯಾರ್ಯಾರು citibank ನ ಗ್ರಾಹಕರಾಗಿದ್ದೇವೋ, ಎಲ್ಲರು ಖಂಡಿತ ಇವರಿಗೆ ಇವರ ತಪ್ಪಿನ ಬಗ್ಗೆ ತಿಳಿಹೇಳ ಬೇಕು ಹಾಗು ಕನ್ನಡದಲ್ಲಿ ಸೇವೆ ಕೊಡುವಂತೆ ಕೇಳ್ಬೇಕು... ಯಾರು citibank ನ ಗ್ರಾಹಕರಲ್ವೋ, ಔರು ಕೂಡ ಇದಕ್ಕಾಗಿ ಕೇಳಬಹುದು...
ಇದು ಅವರ customer service ತಾಣ:
http://www.online.citibank.co.in/customerservice/write.htm

Rating
No votes yet

Comments