ನಮ್ಮ MTR ನಮ್ಮದೇನಾ?

ನಮ್ಮ MTR ನಮ್ಮದೇನಾ?

ಎಂ.ಟಿ.ಆರ್ ಅ೦ದ್ರೆ ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ತಿ೦ಡಿಗಳು ನೆನಪಿಗೆ ಬರುತ್ತೆ. ಬೆಂಗಳೂರಲ್ಲಿ ಕರ್ನಾಟಕದ ತಿನಿಸುಗಳಿಗಾಗಿ ಪ್ರಸಿದ್ಧಿಯಾದ "ಮಾವಳ್ಳಿ ಟಿಫಿನ್ ರೂಂ" ಗುಂಪು "packaged food (ತಿನಿಸು ಪೊಟ್ಟಣದ)" ಮಾರುಕಟ್ಟೆಯಲ್ಲೂ ಇದೆ ( http://www.mtrfoods.com/readytoeat/index.htm ). ಬಿಸಿಬೇಳೆ ಬಾತ್, ಪುಳಿಯೋಗರೆ ಇ೦ದ ಹಿಡಿದು ಪಾಲಾಕ್ ಪನೀರ್ ವರೆಗೂ ಎಲ್ಲಾ ರೀತಿಯ ತಿನಿಸುಗಳನ್ನೂ Ready-to-cook ಪೊಟ್ಟಣಗಳಲ್ಲಿ ಮಾರುತ್ತಾರೆ. ಈ ಪೊಟ್ಟಣಗಳನ್ನು, ಸೂಪರ್ ಮಾರ್ಕೆಟ್-ಗಳಲ್ಲಿ ಅಥವಾ "ನಮ್ಮ ಎಂ.ಟಿ.ಆರ್"ಗಳಲ್ಲಿ ನೀವು ನೋಡಿರಬಹುದು.

ಈ ಪೊಟ್ಟಣಗಳಲ್ಲಿ ತೀರಾ ಕೆಲವಕ್ಕೆ ಮಾತ್ರ "ಬಳಕೆ ವಿಧಾನ" ಬಗ್ಗೆ ಕನ್ನಡದಲ್ಲೂ ಮಾಹಿತಿ ಇದೆ, ಹೆಚ್ಚಿನವಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲವೇ ಇಲ್ಲ.

ಪಲ್ಲದ ಪಾಯಸಂ ಪೊಟ್ಟಣದ ಮೇಲೆ ಕನ್ನಡದಲ್ಲಿ ಮಾಹಿತಿ ಇಲ್ಲ

 

 

"ಯಾಕೆ ಹೀಗೆ?" ಎಂದು ವಿಚಾರಿಸಿದಾಗ ದೊರೆತ ಉತ್ತರ, "ಈ ವಸ್ತುಗಳನ್ನು ಅಲ್ಲಿಯವರೇ ಹೆಚ್ಚು ಕೊಳ್ಳುತ್ತಾರೆ, ಅದಕ್ಕೆ ಅವರ ಭಾಷೆಯಲ್ಲಿ ವಿವರಣೆ ಇದೆ". ಕನ್ನಡಿಗರು, "ಹೊಸ ರುಚಿಗೆ ಯಾವತ್ತೂ ರೆಡಿ" ಅನ್ನೋದು ಗೊತ್ತಿಲ್ವಾ ನಮ್ಮ ಎಂ.ಟಿ.ಆರ್-ಗೆ? MTR ರವರ ಎಲ್ಲಾ ಪೊಟ್ಟಣಗಳಲ್ಲೂ ಕನ್ನಡದಲ್ಲಿ "ಬಳಕೆ ವಿಧಾನ" ಮುದ್ರಿಸುವುದರಿಂದ, ಕನ್ನಡಿಗರನ್ನು ಸುಲಭವಾಗಿ ಆಕರ್ಷಿಸಬಹುದು. ಇದರಿಂದ ಮಾರುಕಟ್ಟೆ ವಿಸ್ತರಣೆ ಆಗೋದಲ್ದೆ, ಮಾರಾಟಾನೂ ಜಾಸ್ತಿಯಾಗತ್ತೆ.

ಹೊಸರುಚಿಗೆ ಬೆಂಗಳೂರಿನಲ್ಲಿ ಎಂತಹ ಮಾರುಕಟ್ಟೆ ಇದೆ ಎಂಬುದನ್ನು ಸರಿಯಾಗಿ ಅರಿತ "ಅಡ್ಯಾರ್ ಆನಂದ ಭವನ್", ತಮಿಳು ನಾಡಿನ ತಿನಿಸುಗಳನ್ನು ತಯಾರಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಎಲ್ಲೆಡೆ ತಲೆ ಎತ್ತುತ್ತಿರುವ ಇವರ ಮಳಿಗೆಗಳೇ, ಇವರ ಲಾಭಕ್ಕೆ ಸಾಕ್ಷಿ. ಇದನ್ನು ಗಮನಿಸಿದಾಗ, "ಕನ್ನಡಿಗರು ಬೇರೆ ತಿನಿಸುಗಳನ್ನು ಕೊಳ್ಳುವುದಿಲ್ಲ" ಎಂಬ ಎಂ.ಟಿ.ಆರ್-ನ ನಂಬಿಕೆ ಸತ್ಯಕ್ಕೆ ದೂರವಾದುದೆಂದು ಅರಿವಾಗುತ್ತದೆ. ಎಂ.ಟಿ.ಆರ್ ತಮ್ಮ ಭಾಷಾ ನೀತಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ, ಅವರ ಲಾಭ ಹೆಚ್ಚಾಗೋದು ಗ್ಯಾರೆ೦ಟಿ.

ರವೆ ದೋಸೆ ಪ್ಯಾಕೇಜ್ ಮೇಲೆ ಮಾಹಿತಿ

 ರವೆ ದೋಸೆ

ಎಲ್ಲಾ ಭಾಷೆಗಳಲ್ಲೂ ಮಾಹಿತಿ ಹಾಕುವ ಗೋಜಿಗೆ ಸಿಕ್ಕಿ ಉಪಯುಕ್ತ ಮಾಹಿತಿಯನ್ನು ಚಿಕ್ಕ ಫಾಂಟ್-ನಲ್ಲಿ ಬರೆಯಬೇಕಾಗಿದೆ. ಕರ್ನಾಟಕದಲ್ಲಿ ಮಾರಾಟವಾಗುವ ಪ್ಯಾಕೇಜ್-ಗಳ ಮೇಲೆ ಕನ್ನಡ ಮತ್ತು ಇಂಗ್ಲಿಷ್-ನಲ್ಲಿ ವಿವರಣೆ ಇದ್ದರೆ ಸಾಕು. ಇದರಿಂದ ಪ್ಯಾಕೇಜ್ ಡಿಸೈನ್ ಕೂಡ ಸುಲಭ ಹಾಗು ಪರಿಣಾಮಕಾರಿಯಾಗಿರುತ್ತೆ.

ಬನ್ನಿ, ಕರ್ನಾಟಕದಲ್ಲಿ ಮಾರಾಟವಾಗುವ ಪೊಟ್ಟಣಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರುವುದರ ಅವಶ್ಯಕತೆಯ ಬಗ್ಗೆ, ಇದರಿಂದ ಎ೦.ಟಿ.ಆರ್ ಗಳಿಸಬಹುದಾದ ಲಾಭದ ಬಗ್ಗೆ ಮನವರಿಕೆ ಮಾಡಿಕೊಡೋಣ. ಇವರಿಗೆ ಮಿಂಚೆ ಬರೆದು, "ಎಂ.ಟಿ.ಆರ್ ಹೋಟೆಲ್ ಬೆಂಗಳೂರಿಗರ ಮನ ಸೆಳೆದಿರುವಂತೆ, ಎಂ.ಟಿ.ಆರ್ ತಿನಿಸು ಪೊಟ್ಟಣಗಳೂ ಕೂಡ ಕನ್ನಡಿಗರ ಮನ ಗೆಲ್ಲಲು ಸಾಧ್ಯ" ಎಂದು ಹೇಳೋಣ.

ಎಂ.ಟಿ.ಆರ್ ಫುಡ್ಸ್-ನ ಮಿಂಚೆ: feedback@mtrfoods.com , murthy.r@mtrfoods.com

--

ಪ್ರಿಯಾಂಕ್

ಜಾಗೃತ ಗ್ರಾಹಕರು

Rating
No votes yet

Comments