ಪ್ರತಿಮೆಗೆ ಬಂದ ಪ್ರತಿಕ್ರಿಯೆ

ಪ್ರತಿಮೆಗೆ ಬಂದ ಪ್ರತಿಕ್ರಿಯೆ

ಅಂತೂ ನನ್ನ ಮನದಾಳದ ಮಾತಿಗೆ ಪದವು ವಿನುತಾರವರಿಂದ ಹೊರಬಂತು....
ಅದಕ್ಕೆ ದನ್ಯವಾದಗಳು.

<<<<ಮಸೋ೦ರೆಯವರೇ,

ನನ್ನನ್ನು ಕಾಡುವ ಪ್ರಶ್ನೆಯೆ೦ದರೆ, ಕಲಾವಿದರನ್ನು ಇ೦ತವೇ ಚಿತ್ರಗಳು ಯಾಕೆ ಕಾಡುತ್ತವೆ? ಇ೦ತಹ ಶೋಷಿತ, ನಿರ್ಗತಿಕತನ, ಬಡತನವೇ ಯಾಕೆ ಅವರ ವಸ್ತುಗಳಾಗುತ್ತವೆ? ಬೇರೆ ಯಾವುದೇ ವಸ್ತುಗಳಲ್ಲಿ ಕಲೆ ಎ೦ಬುದು ಇರುವುದಿಲ್ಲವೇ? ಅಥವಾ ಅದರಲ್ಲಿ ನೈಜತೆ, ಜೀವ೦ತಿಕೆ ತರಲಾಗುವುದಿಲ್ಲವೇ? ಯಾವುದೇ ಬಗೆಯ ಕಲೆಯ ಪ್ರಾಕಾರವನ್ನೇ ತೆಗೆದುಕೊಳ್ಳಿ, ಚಿತ್ರಕಲೆ, ಛಾಯಾಗ್ರಹಣ, ಸಿನೆಮಾ, ಬರವಣಿಗೆ... ಮನ್ನಣೆ ದೊರೆಯುವುದು ಇ೦ತಹ ವಿಷಯಗಳಿಗೇ, ಅದೂ ಪಾಶ್ಚಿಮಾತ್ಯ ಮನ್ನಣೆ, ಪ್ರಶಸ್ತಿಗಳು. (ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಕೆವಿನ್ ಕಾರ್ಟನ್ ನ ಚಿತ್ರ, ಅಡಿಗರ ವೈಟ್ ಟೈಗರ್, ಆಸ್ಕರ್ ವಿಜೇತ ಸ್ಲಮ್ ಡಾಗ್.....) ಇಲ್ಲೆಲ್ಲ ವಿಷಯಗಳು ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಸುಡಾನ್, ಜಿ೦ಬಾಬ್ವೆ ಇತ್ಯಾದಿ..
ನಿಮ್ಮ ಈ ಚಿತ್ರ ಇ೦ತಹ ಅವಕಾಶವಾದಿ ಕಲಾವಿದರನ್ನು ಅಣಕವಾಡುವ೦ತಿದೆ. >>>>

ಇದೂ ನನ್ನ ಚಿತ್ರದ ಉದ್ದೇಶಗಳಲ್ಲಿ ಒಂದಾಗಿದೆ.
ಇದೇ ಪ್ರಶ್ನೆ ನನ್ನನ್ನು ಸದಾಕಾಡುತ್ತದೆ. ಅದೇಕೆ ಇಂತಹ ಚಿತ್ರಗಳೆ ಕಲಾವಿದರಗೆ ಸದಾ ಆಸಕ್ತಿಕರ ವಿಶಯವಾಗುತ್ತದೆ... ಇಂತಹ ವಿಶಯಗಳ ಬಗ್ಗೆ ಪುಂಖಾನುಪುಂಕವಾಗಿ ಬರೆದು ಪ್ರಶಸ್ತಿ ಗಿಟ್ಟಿಸಿದವರೆಷ್ಟೋ ಜನರಿದ್ದಾರೆ.ಇಂತಹ ವಿಶಯಗಳ ಅಡಿಪಾಯದ ಮೇಲೆ ತಮ್ಮಹೆಸರಿನ ಮಹಲುಗಳು ಕಟ್ಟಿದ ಅದೆಷ್ಟೊ ರೀಲ್ ಗಳನ್ನು ಸುತ್ತಿದ ನಿರ್ದೇಶಕರಿದ್ದಾರೆ...ಅವರಿಗೆಲ್ಲಾ ಯಾಕೆ ಹೀಗೆ ಕಾಡುತ್ತವೆ.

ಹಾಗೆ ಮರೆಯಬಾರದ ಇನ್ನೊಂದು ವಿಶಯವೇನೆಂದರೆ ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಕೆವಿನ್ ಕಾರ್ಟನ್ ಆ ಸೂಡಾನ್ ಚಿತ್ರಗಳನ್ನು ತೆಗೆದು ಪ್ರಶಸ್ತಿ ಪಡೆದ ನಂತರ, ಆ ಚಿತ್ರಗಳು ಮೂಡಿಸಿದ ಶಾಶ್ವತ ಗುರುತುಗಳಿಂದ ಹೊರಗೆ ಬರಲಾರದೆ, ಮತ್ತೆ ಸೂಡಾನಿಗೆ ಬಂದು ಅಲ್ಲೇ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ.

ಕಲಾವಿದರಲ್ಲಿ ಕೆಲವರು ಇಂತಹ ವಿಶಯಗಳಿಂದ ಸ್ಪೂರ್ತಿಯಾಗಿ ತಮ್ಮ ಹೆಸರನ್ನು ಬೆಳೆಸಿಕೊಳ್ಳುತ್ತಾರೆ. ಇನ್ನು ಕೆಲವರು ಅಂತಹ ಸನ್ನಿವೇಶಗಳಿಗೆ ಮಿಡಿದು ಅದರಲ್ಲೆ ಮರುಗುತ್ತಾ ತಮ್ಮನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾ ಕಳೆದು ಹೋಗುತ್ತಾರೆ. ಇದಕ್ಕೆ ಚಿತ್ರ ಕಲಾವಿದರಲ್ಲಿ ಗಾಗಿನ್ ಒಳ್ಳೆಯ ಉದಾಹರಣೆ.

ನಾನು ಈ ಎರೆಡು ಗುಂಪುಗಳಲ್ಲಿ ಎಲ್ಲಿಗೆ ಸೇರುತ್ತೇನೊ ನನಗೆ ತಿಳಿಯದಾಗಿದೆ.

Rating
No votes yet

Comments