ಮರಳಿ ಓದಿಗೆ !

ಮರಳಿ ಓದಿಗೆ !

'ನಾನು ಸಂಪದಕ್ಕೆ ವಿದಾಯ ಹೇಳಲೇ' ಅಂತ ವಿದಾಯ ಹೇಳುವವರು ಮರಳಿ ಬಂದ ಹಾಗೆ ನಾನೂ ಓದು ಸಾಕಿನ್ನು ಅಂತ ನಿಲ್ಲಿಸುವ ವಿಚಾರ ಮಾಡಿದ್ದೆ . ಆದರೆ ನಾನೂ ಓದಿಗೆ ಮರಳಿ ಬರಲಿದ್ದೇನೆ !

ನಾನ್ಯಾಕೆ ಓದಬೇಕು ? ಎಲ್ರೂ ಓದ್ಕೊಂಡೇ ಇದ್ದಾರಾ ? ಸಾಕು ಓದಿದ್ದು ಅಂತೆಲ್ಲ ವಿಚಾರ ಮಾಡ್ತಿದ್ದೆ .

ಆದರೆ

ಓದಿನಿಂದಲೇ ಅಲ್ಲವೇ ನನಗೆ ಒಳ್ಳೆಯ ಮಾರ್ಕ್ಸ್ ಬಂದಿರೋದು ? ಒಳ್ಳೆಯ ಕೆಲ್ಸ ಸಿಕ್ಕಿರೋದು? ಓದಿನಿಂದಲೇ ಅಲ್ಲವೇ ನನಗೆ ಗೌರವ ಸಿಕ್ಕಿರೋದು ? ನೆಮ್ಮದಿಯ ಜೀವನ ಸಿಕ್ಕಿರೋದು? ಓದಿಕೊಂಡಿರಲು ಅನುಕೂಲ ಇರುವಾಗ ಓದಿಕೊಂಡೇ ಇದ್ದರಾಯ್ತು !

ನನಗೆ ದಿನಾಲೂ ಒಂದಿಷ್ಟು ಸಮಯ ಸಿಗುತ್ತದೆ. ಓದುವುದನ್ನು ಬಿಟ್ಟು ಆ ಸಮಯದಲ್ಲಿ ಬೇರೇನನ್ನೂ ಮಾಡಲು ನನಗೆ ಮನಸ್ಸಿಲ್ಲ; ಬೇರೇನನ್ನೂ ಮಾಡಲೂ ಆಗದು ಅಂತ ಇಟ್ಟುಕೊಳ್ಳಿ..

ನನ್ನ ಕೆಲ್ಸ/ಕಾರ್ಯಕ್ಷೇತ್ರದ ಬಗ್ಗೆ ಓದಬೇಕು.
ಡಿಜಿಟಲ್ ಲೈಬ್ರರಿಯಿಂದ ಪುಸ್ತಕ ಇಳಿಸಿ ಓದಬೇಕು.
ಅವಧಿ ಕೆಂಡಸಂಪಿಗೆ ತಾಣಗಳಲ್ಲಿ ಎಷ್ಟೊಂದೆಲ್ಲ ಓದೋದಿದೆ .
ನನ್ನ ಸುತ್ತ ಮುತ್ತ ಎಷ್ಟೆಲ್ಲ ಪುಸ್ತಕ ಸಿಗುತ್ತವೆ! ಎರಡು ಮೂರು ಲೈಬ್ರರಿ ಇವೆ .

ಕೇ.ಫ. ಅವರ ಶೌರಿ ಪಾತ್ರ ನಿಮಗೆ ಗೊತ್ತಿದೆಯೋ ಇಲ್ಲವೋ . 'ಶೌರಿ ಬಂದ' ಪುಸ್ತಕ ಓದಿದ್ದೆ . ( ಅದು ನನ್ನ ಹತ್ತಿರ ಈಗ ಇಲ್ಲ :( ) ವಿಶಿಷ್ಟ ವ್ಯಕ್ತಿತ್ವದ ಶೌರಿ ಒಬ್ಬ ಡಾಕ್ಟರರ ಹತ್ತಿರ ಕಂಪೌಂಡರ್ ಅಂತ ಕೆಲಸ ಮಾಡುತ್ತಿರುವಾಗ ಲೇಖಕರಿಗೆ ಪರಿಚಯ ಆಗುತ್ತಾನೆ . ಆಮೇಲೆ ಆ ಡಾಕ್ಟರರು ಪರದೇಶಕ್ಕೆ ಹೋಗಬೇಕಾಗಿ ಬಂದು ತಮ್ಮ ದವಾಖಾನೆಯನ್ನು ಮುಚ್ಚಿರುತ್ತಾರೆ . ಆಮೇಲೆ ಒಂದು ಸಲ ಈ ಶೌರಿ ಲೇಖಕರಿಗೆ ಪೇಟೆಯಲ್ಲಿ ಸಿಗುತ್ತಾನೆ . ' ಏನಯ್ಯ ಮಾಡ್ತಾ ಇದ್ದೀಯ ಈಗ ' ಅಂತ ಕೇಳಿದರೆ ಶೌರಿ ಏನು ಹೇಳ್ತಾನೆ ಗೊತ್ತೇನ್ರಿ ?
..
..
..
..
..
..
..
..
..
' ವಾರ್ ಅಂಡ್ ಪೀಸ್ ಮುಗ್ಸಿದೀನಿ; ಈಗ ಅನ್ನಾ ಕರೀನಾ ಓದ್ತಿದೀನಿ' ಅಂತ !
'ಅಲ್ಲಯ್ಯ , ಹೊಟ್ಟೆಗೆ ಏನ್ ಮಾಡ್ತಿದ್ದೀಯ? ಉದ್ಯೋಗ ಏನು ? ' ಅಂತ ಲೇಖಕರು ಸ್ಪಷ್ಟವಾಗಿ ಕೇಳಬೇಕಾಯ್ತು !!

ನಾನೂ ಇನ್ನು ಸ್ವಲ್ಪ ದಿನಕ್ಕೆ ಶೌರಿ ತರಹ ಹೇಳಿಯೇನು ! ( ಅಂದ ಹಾಗೆ ಈ 'ಅನ್ನಾ ಕರೀನಾ' - ೧೧೦೦ ಪುಟದ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿ ಇದೆ. ಅದರಲ್ಲಿ ಇರೋದಾದ್ರೂ ಏನು ? ಅಂತ ಓದಿ ನೋಡಬೇಕು. )

Rating
No votes yet

Comments