ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ...
ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ...
'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ...
ನಿಮ್ ಗೆಳೆಯರಿಗೂ ಹೇಳ್ತೀರಾ..ನಾನು 'ಸಂಪದದಲ್ಲಿ ಬರೀತಿನಿ ಕಣೋ!(ಕಣೇ!)' ಅಂತ

ಮೊದ ಮೊದಲು ತುಂಬಾ ಜೋಶ್...
ಯಾರೂ ಪ್ರತಿಕ್ರಿಯೆ ಹಾಕ್ದೇ ಹೋದ್ರೂ, ಬರಹದ ಮೇಲೆ, ಬರಹ ಹಾಕ್ತಾ ಇರೋದು...
ಸಂಪದಕ್ಕೆ ಬಂದು ಕೆಲವೇ ದಿನದಲ್ಲಿ ಗೊತ್ತಾಗತ್ತೆ, ಜನ ಬರೀ ಪ್ರತಿಕ್ರಿಯೆ ಬಂದ ಬರಹಗಳನ್ನ ಹೆಚ್ಚು ಓದ್ತಾರೆ ಅಂತ...
ಎಷ್ಟೋ ಜನಕ್ಕೆ http://www.sampada.net/view/comments ಲಿಂಕೇ ಹೋಮ್ ಪೇಜ್ ಅಂತ ಗೊತ್ತಾಗತ್ತೆ!

ನಿಮ್ ಬರಹಕ್ಕೆ ಎಷ್ಟು ಪ್ರತಿಕ್ರಿಯೆ ಬಂತೂ? ಅಂತ ಲೆಕ್ಕ ಹಾಕಕ್ಕೆ ಶುರು ಮಾಡ್ತೀರ...
ಎಷ್ಟೊಂದು ಸರತಿ ಒಂದು ಪ್ರತಿಕ್ರಿಯೆ ಕೂಡ ಬರಲ್ಲ...ನಿಮಗೆ ಸಕತ್ ಬೇಜಾರು ಆಗತ್ತೆ...
ಛೇ! ಏನಪ್ಪಾ, ನಾನು ಸೂಪರ್ ಹಿಟ್ ಆಗತ್ತೆ ಅಂದುಕೊಂಡ ಬರಹಕ್ಕೆ ಒಂದು ಕಾಮೆಂಟ್ ಬರಲಿಲ್ಲ ಅಂತ...

ಸರಿ! ಸ್ವಲ್ಪ ದಿನ ಆದ ಮೇಲೆ, ವಿಶೇಷ ಬರಹಕ್ಕೆ ಅಂತ ಹೆಚ್ಚು ಕಾಳಜಿ ವಹಿಸಿ ಬರೆದು, ಯಾವಾಗ್ಲೂ ಬ್ಲಾಗ್‍ನಲ್ಲಿ ಹಾಕೋಂತ ಬರಹ, 'ಲೇಖನ' ವಿಭಾಗಕ್ಕೆ ಹಾಕ್ತೀರ..."ವಿಶೇಷ ಲೇಖನ" ಅಂದ್ರೆ ಕನಿಷ್ಟ ಪಕ್ಷ ಮಾಡರೇಟರ್‍ಗಳು ಈ ಬರಹ ಗ್ಯಾರಂಟಿ ಓದಿದ್ದಾರೆ ಅಂತ :p
ಆದರೂ ಸಂಪದದ ಮಾಡರೇಟರ್‍ ಅದನ್ನ ನೋಡೋದೇ ಇಲ್ಲ...ನೋಡಿದ್ರೂ ಅದನ್ನ 'ವಿಶೇಷ ಬರಹ' ಅಂತ ಮಾಡಿರಲ್ಲ...
ನಿಮ್ ಲಕ್ ತುಂಬಾನೆ ಸರಿ ಇಲ್ಲ ಅಂದ್ರೆ, ನೀವೇ 'ವಿಶೇಷ ಲೇಖನ" ಅಂತ ಬಿರುದು ಕೊಟ್ಟ "ವಿಶೇಷ ಲೇಖನ" ಹಾಕಿದ ದಿನ, ಮಾಡರೇಟರ್‍ಗಳೆಲ್ಲ ತಮ್ಮ ಕಾರ್ಯದಲ್ಲಿ ತುಂಬಾ ಬಿಜಿ ಆಗಿ, ವಿಶೇಷ ಲೇಖನ ಲಿಸ್ಟ್ ಅಪ್ಡೇಟ್ ಮಾಡೋದೆ ಇಲ್ಲ...
ಸಕ್ಕತ್ ನಿರಾಶೆ ಆಗತ್ತೆ ಅಲ್ವಾ?

ಸರಿ, ನೀವು ಬರೆದಿದ್ದನ್ನ ಯಾರು ಯಾರು ಓದ್ತಾರೆ ಅಂತ ಹೆಂಗಪ್ಪಾ ತಿಳ್ಕೊಳ್ಳೋದು?????
ಹಲವಾರು ಕಿಲಾಡಿ ಜನರು ಸೈಲೆಂಟ್ ಆಗಿ, ಕಾಮೆಂಟ್ ಹಾಕ್ದೀರ ಓದ್ತಾ ಇರ್ತಾರೆ...
ಇಂಥಾ ಕಿಲಾಡಿಗಳ ಹೆಸರನ್ನೆಲ್ಲ ಹೇಗೆ ಹೊರತೆಗೆಯೋದು???

ಕೊನೆಗೆ ಎಸೀರಿ 'ರಾಮ ಬಾಣ'! ಇದು ಸರಿಯಾಗಿ ನಾಟತ್ತೆ!
ಏನಪ್ಪಾ ಈ 'ರಾಮ ಬಾಣ' ಅಂದ್ರಾ??? ಒಂದು ಬ್ಲಾಗ್ ಬರೀರಿ, 'ಸಂಪದಕ್ಕೆ ವಿದಾಯ/ಸಂಪದಕ್ಕೆ ಬೈ ಬೈ, ಟಾ ಟಾ'!
ಆಗ ನೋಡಿ ನಿಮ್ ಬೀಸಣಿಗೆಗಳಿಂದ ಹೇಗೆ ಗಾಳಿ ಬರತ್ತೆ ಅಂತ :) 'ಸೈಲೆಂಟ್ ಕಿಲಾಡಿಗಳೂ' ಆಗ ಕಾಮೆಂಟ್ ಹಾಕ್ಬಿಡ್ತಾರೆ!
ಯಾವ ಬರಹಕ್ಕೆ ಕಾಮೆಂಟ್ ಬರದೆ ಹೋದ್ರೂ, 'ವಿದಾಯ/ಟಾ ಟಾ' ಬರಹಕ್ಕೆ ಪ್ರತಿಕ್ರಿಯೆ ಬರೋದು ಗ್ಯಾರಂಟಿ :)
'ಅಬ್ಬಾ! ಇದಪ್ಪ ಅಲ್ಟಿಮೇಟ್ ಟ್ರಿಕ್' ಅಂತ ಮನಸಲ್ಲೇ ಅಂದುಕೋತಾ, ಒಂದೊಂದೇ ಕಾಮೆಂಟ್ ಓದಿ ಉಬ್ಬಿ ಬಿಡಿ... !
(ಈ ಬಾಣ ಎಸೆಯೋರು, ಓದ್ಕೊಂಡ್ ಓದ್ಕೊಂಡ್ ಹಾರಾಡ್ತಾ ಅಟ್ಟದ ಮೇಲೆ/ಮಹಡಿ ಮೇಲೆ ಹೋಗ್ತಾರೆ ಅಂತ ಕಾಣತ್ತೆ...)

ಈಗ ನಿಮಗೆ ಗೊತ್ತಾಯ್ತಲ್ಲ, ಯಾರು ಯಾರು ನಿಮ್ ಬರಹ ಓದ್ತಾರೆ ಅಂತ! ಹೆಂಗಿದೆ ಈ ಐಡೀರಿಯ??? :)

ಹಾ, ಇನ್ನೊಂದು ವಿಷ್ಯ ಹೇಳೋದ್ ಮರೆತಿದ್ದೆ...ನಿಮ್ 'ಟಾಟಾ' ಬರಹಕ್ಕೆ ತಕ್ಷಣ ಉತ್ತರ ಹಾಕ್ಬೇಡಿ...ಒಂದೈದಾರ್ ದಿನನೋ, ವಾರನೋ ಬಿಟ್ಕೊಂಡ್ ಹಾಕಿ...ಇಲ್ಲ ಅಂದ್ರೆ ನಿಮ್ ಬಂಡ್ವಾಳ ಹೊರಕ್ಕೆ ಬೀಳತ್ತೆ :p
ಮತ್ತೆ ಸಂಪದದಲ್ಲಿ ನಿಮಗನಿಸಿದ್ದನ್ನ ಗೀಚಕ್ಕೆ ಶುರು ಮಾಡಿ!

--ಶ್ರೀ
(ಈಗ ಈ ಬರಹಕ್ಕೆ ಯಾರು ಯಾರು ಕಾಮೆಂಟ್ ಹಾಕ್ತಾರೆ ಅಂತ ನಾನು ಕಾಯ್ತಾ ಇದೀನಿ ;) :P )

Rating
No votes yet

Comments