ಬಾಳು ಒಂದು ಬೆಳಕಿನಾಟ - ರಾಜು ಅನಂತಸ್ವಾಮಿ

ಬಾಳು ಒಂದು ಬೆಳಕಿನಾಟ - ರಾಜು ಅನಂತಸ್ವಾಮಿ

ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ

ಹಕ್ಕಿ ರೆಕ್ಕೆ ಬಿಚ್ಚಿ ತಾನು ... ಹರುಷದಲ್ಲಿ ಹಾರುವಂತೆ
ಮನಸು ತನ್ನ ಆಸೆ ಹೊತ್ತು , ಸಾಗುತಿಹುದು ಎತ್ತರಕೆ
ಎಲ್ಲೆ ಇಲ್ಲ ಬಾನಿಗಲ್ಲಿ, ಹಕ್ಕಿಗಿಲ್ಲ ನೆಲೆಯು ಅಲ್ಲಿ ..
ಕೊನೆಯೇ ಇಲ್ಲ ಆಸೆಗೆಂದು, ತಿಳಿಯದೇಕೆ ಮನಸಿಗಿಂದು ...

ನದಿಯು ಕಡಲ ಸೇರಲೆಂದು, ತವಕದಲ್ಲಿ ಓಡುವಂತೆ..
ಓಡುತಿಹುದು ಮನಸು ಏಕೆ, ಆಸೆ ಎಂಬ ಕಡಲಿಗಿಂದು..
ಯಾವ ನದಿಯು ಆದರೇನು, ಕಡಲಿನೊಳಗೆ ಸಿಗುವುದೇನು..
ಆಸೆ ತನ್ನ ಮಿತಿಯು ಮೀರಿ, ನೂಕುತಿಹುದು ಆಳದಲ್ಲಿ...

ಬಾನಿಗಿಲ್ಲ ಎಲ್ಲೆ ಅಲ್ಲಿ, ಆಸೆಗಿಲ್ಲ ಕೊನೆಯು ಇಲ್ಲಿ
ಏಕೆ ಕನಸು ಕಾಣುತಿಹುದು, ಮನಸು ತಾನು ನೋವಲಿಂದು
ನಿಜವನರಿತು ಸಾಗುತಿರಲು, ಹರುಷವಿಂದು ಬಾಳಿನಲ್ಲಿ
ತಾಪವಿಲ್ಲ ಸೆಳೆಸವಿಲ್ಲ, ಆಸೆತೋರೆದ ಮನಸಲೆಂದು

ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ

-- ರಾಗ ಸಂಯೋಜನೆ ಮತ್ತು ಗಾಯನ ರಾಜು ಅನಂತಸ್ವಾಮಿ

Rating
No votes yet

Comments