ತುಂಗೆಯ ಮಡಿಲಲ್ಲಿ

ತುಂಗೆಯ ಮಡಿಲಲ್ಲಿ

ಮೊನ್ನೆ ಊರಿಗೆ ಹೋದಾಗ ಬೈಕಲ್ಲಿ ಒಬ್ನೆ ಶೃಂಗೇರಿಗೆ ಹೋಗಿದ್ದೆ..
ದೇವಸ್ಥಾನದ ಬಾಗಿಲು ತೆಗೆಯಲು ಸ್ವಲ್ಪ ಸಮಯ ಇತ್ತು. ಅದಕ್ಕಾಗಿ ಅಲ್ಲೆ ಹರಿಯುತ್ತಿದ್ದ ತುಂಗೆಯ ತಟದಲ್ಲಿ ಕುತ್ಕೊಂಡೆ.
ಅಬ್ಬ... ನಮ್ಮ ಜನ ಎಂತಾ ನಾಗರೀಕತೆಯ ಉತ್ತುಂಗಕೇರಿದ್ದಾರೆ. ಭಕ್ತಿಯಿಂದ ಅಲ್ಲಿನ ಮೀನುಗಳಿಗೆ ಮಂಡಕ್ಕಿ ಹಾಕೋದೇನು.. ಅವರ ಮುಖದಲ್ಲಿನ ಸಂತೃಪ್ತಿ ಏನೂ...
ಆದರೆ ಕಾಲಿಯಾದ ಪ್ಲಾಸ್ಟಿಕ್ ಪೊಟ್ಟಣಗಳೆಲ್ಲ ನದಿ ದಂಡೆ ಮೆಲೆ...ಅಥವಾ ನದಿಗೆ ಎಸೆಯುತ್ತಿದ್ದರು.. ಇದನ್ನ ಕಂಡು ಮೈಯೆಲ್ಲ ಉರಿದು ಹೋಯ್ತು.. ಅಲ್ಲೆ ಪಕ್ಕದಲ್ಲಿ ಇದಕ್ಕಾಗಿಯೆ ಇಟ್ಟ ಕಸದ ಡಬ್ಬ ಉಪಯೋಗಿಸಲು ಈ ಡಬ್ಬಾಗಳಿಗೆ ಏನು ಧಾಡಿ ಗೊತ್ತಾಗ್ಲಿಲ್ಲ. ಏನು ಹೇಳ್ಲಿಲ್ಲ... ಸುಮ್ನೆ ಹೋಗಿ ಅಲ್ಲಿ ಬಿದ್ದ ಕಸವನ್ನೆಲ್ಲ ಹೆಕ್ಕಿ ಕಸದ ಡಬ್ಬಕ್ಕೆ ತುಂಬಿಸತೊಡಗಿದೆ....
ಆಗ ಬಂತು ನೋಡಿ ಮಜ.. ಒಬ್ಬೊಬ್ಬರೆ ಮಹಾನುಭಾವರು ಕಾಲಿಯಾದ ಪೊಟ್ಟಣಗಳನ್ನ ಕಸದ ಡಬ್ಬಕ್ಕೆ ಹಾಕತೊಡಗಿದರು..
ದೇವಳದವರು ಕಸ ಹೆಕ್ಕಲು ನೇಮಿಸಿದ್ದವ ನನ್ನ ನೋಡಿ ಮುಗುಳ್ನಕ್ಕ..

ಅಲ್ಲಿಗೆ ನನ್ನ ಹಿಡನ್ ಅಜೆಂಡ ಕೆಲಸ ಮಾಡಿತು.. ಖುಶಿಯಾಗಿ ವಾಪಾಸಾಗುವಾಗ ದೇವಳದ ಅಂಗಳದಲ್ಲಿ ಮೋಬಾಯ್ಲ್ ನಲ್ಲಿ ಮಾತನಾಡುವವನನ್ನು ಹಂಗೆ ಗುರಾಯ್ಸಿ.. ದೇವರ ದರ್ಶನ ಪಡೆದು ಮನೆಗ್ ಹೋದೆ..

Rating
No votes yet

Comments