ಹ್ಯಾಕರ್ ಅಂದ್ರೆ ಯಾರು?

ಹ್ಯಾಕರ್ ಅಂದ್ರೆ ಯಾರು?

"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆಯುವವರೆಂದು ನಮ್ಮಲ್ಲನೇಕರು ತಿಳಿದು ಕೊಂಡಿದ್ದೇವೆ ಅಲ್ಲವೇ? 

 ಹ್ಯಾಕರ್ ಎಂದಾಕ್ಷಣ, ಪಟಪಟನೆ ಕಂಪ್ಯೂಟರಿನಲ್ಲಿ ಕೆಲವೊಂದು ಸಂಕೇತಗಳನ್ನು ಕುಟ್ಟಿ, ಅದು ಉಸುರುವ ಅಕೌಂಟ್ ನಂಬರುಗಳನ್ನು, ಗೌಪ್ಯ ಮಾಹಿತಿಗಳನ್ನೂ ಮಾನಿಟರಿನ ಮೂಲಕ ಪಡೆಯುವ ಕಂಪ್ಯೂಟರ್ ವಿಜ್.. ನಮ್ಮ ಕಣ್ಮುಂದೆ ಬರ್ತಾನೆ. ಇದನ್ನೇ ಅಲ್ವೇ ಎಷ್ಟೋ ಚಲನಚಿತ್ರಗಳಲ್ಲಿ ತೋರಿಸ್ತಾ ಬಂದಿರೋದು..

ಆದ್ರೆ ನಿಜಾಂಶ ಅದಲ್ಲ... ಒಬ್ಬ ಒಳ್ಳೆಯ ಹ್ಯಾಕರ್ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತೆ ಅನ್ನುವ ಮಾಹಿತಿ ತಿಳಿದು ಕೊಂಡಿರುತ್ತಾನಲ್ಲದೆ, ಕಂಪ್ಯೂಟರಿನಲ್ಲಿರುವ ಸುರಕ್ಷತಾ ದೋಷಗಳನ್ನು (ಸೆಕ್ಯೂರಿಟಿ ವೀಕ್ನೆಸ್)  ಯಾವ ತಂತ್ರಾಂಶಗಳನ್ನು ಉಪಯೋಗಿಸಿ ಕಂಡು ಹಿಡಿಯಬಹುದು ಅನ್ನೋ ಮಾಹಿತಿ ಕೂಡ ಅವನಿಗೆ ತಿಳಿದಿರುತ್ತದೆ ಅಷ್ಟೆ. ನಿಮ್ಮ ಪೋನ್, ಅಥವಾ ಸ್ಕೂಟರ್ ಇತ್ಯಾದಿ ಕೊಟ್ಟಾಗ ಅದನ್ನು ಕುಟ್ಟಿಯೋ, ಇಲ್ಲ ಮತ್ತದ್ಯಾವುದೋ ನಟ್ಟು ಬೋಲ್ಟುಗಳನ್ನು ಲೂಸ್ ಅಥವಾ ಟೈಟ್ ಮಾಡಿ ಸರಿ ಮಾಡ್ಲಿಕ್ಕೆ ನಮಗೇ ಬರುತ್ತದಲ್ಲ ಹಾಗೆ..

 ಕಂಪ್ತ್ಯೂಟರ್ ಮತ್ತು ಸೆಕ್ಯೂರಿಟಿ ತಜ್ಞರಿಗೂ ಕೆಲವೊಮ್ಮೆ ಹ್ಯಾಕರ್ ಗಳು ಹೇಗೆ ಕೆಲಸ ನಿರ್ವಹಿಸುತ್ತಾರೆ ಅಂತ ಗೊತ್ತಾಗುವುದೇ ಇಲ್ಲ ನೋಡಿ..ಇವರು ಅಂಥಾ ನಿಪುಣರಿರುತ್ತಾರೆ...

ಹ್ಯಾಕರ್ ಬಗೆಗಿನ ಹೆಚ್ಚಿನ ಮಾಹಿತಿಗಳು:-

೧. ಸ್ವತಂತ್ರ ತಂತ್ರಾಂಶ ಪಿತಾಮಹ ರಿಚರ್ಡ್ ಸ್ಟಾಲ್ಮನ್ ರೊಡಗಿನ ಒಂದು ಸಂವಾದ ಇಲ್ಲಿದೆ.

೨. ಜರ್ಮನಿಯ ಚಾವೋಸ್ ಕಂಪ್ಯೂಟರ್ ಕ್ಲಬ್  ಅತಿದೊಡ್ಡ ಹ್ಯಾಕಿಂಗ್ ಸಮುದಾಯಗಳಲ್ಲೊಂದಾಗಿದೆ.

 

 ಹ್ಯಾಕಿಂಗ್ ಬಗ್ಗೆ ರಿಚರ್ಡ್ ಸ್ಟಾಲ್ಮನ್ ರಿಂದಲೇ ತಿಳಿದು ಬಿಡಿ:- ವಿಡಿಯೋ

 

 ಮುಂದಿನ ಸಂಚಿಕೆಗಳಲ್ಲಿ, ಹ್ಯಾಕರ್ ಗಳ ಚಿನ್ಹೆ, ಕೆಲವು ನೀವೇ ಮಾಡಿನೋಡಬಹುದಾದ ಹ್ಯಾಕ್ ಇತ್ಯಾದಿಗಳ ಬಗ್ಗೆ ತಿಳಿಯೋಣ... ಈಗಾಗಲೇ ಸಂಪದದಲ್ಲಿ ಅನೇಕ ಹ್ಯಾಕರ್ ಗಳಿದ್ದು ಅವರೂ ಹ್ಯಾಕಿಂಗ್ ಬಗ್ಗೆ ಬರೆದು ಎಲ್ಲರೊಡನೆ ಮಾಹಿತಿ ಹಂಚಿಕೊಳ್ಳಲಿ ಎಂದು ಕೇಳಿಕೊಳ್ಳುತ್ತಾ...

Rating
No votes yet

Comments