ಅನುಭವ-ಅಧ್ಯಯನ

ಅನುಭವ-ಅಧ್ಯಯನ

ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಸಂಪದಿಗರ ಗಮನಕ್ಕೆ ತಂದಿರುವೆ.
ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು ಜಾಳಾಗಿದೆ, ಮುಂತಾದ ಪ್ರತಿಕ್ರಿಯೆಗಳಿಂದ ಏನೂ ಪ್ರಯೋಜನವಿಲ್ಲ. ಇಲ್ಲಿ ಬುದ್ಧಿಗೆ ಮಹತ್ವವಿಲ್ಲ.
--------------------------------------------------------------------
ವಿಜ್ಞಾನ ಮತ್ತು ಅಧ್ಯಾತ್ಮ:

ಶಿಷ್ಯ:

ವಿಜ್ಞಾನ ಮತ್ತು ಅಧ್ಯಾತ್ಮ ದ ಲಾಭ ನಷ್ಟ ಗಳನ್ನು ಒಂದೆರಡು ಮಾತುಗಳಲ್ಲಿ ಹೇಳಿ.

ಗುರು:

ವಿಜ್ಞಾನ ಪ್ರಶ್ನೆಗಳನ್ನು ಕೊಡುತ್ತೆ. ಅಧ್ಯಾತ್ಮ ಸಮಾಧಾನವನ್ನು ಕೊಡುತ್ತೆ.
ಅಂಗಡಿಯಲ್ಲಿ  ಹಣಕೊಟ್ಟು ಸಮಾಧಾನವನ್ನು ಕೊಂಡುತರಲು ಸಾಧ್ಯವೇ? ಅದನ್ನು ಅಧ್ಯಾತ್ಮ ಕೊಡಬಲ್ಲದು.
ವಿಜ್ಞಾನವು ನಿಮ್ಮ ಭೋಗ ಜೀವನಕ್ಕೆ ಎಷ್ಟು ಬೇಕಾದರೂ ಸವಲತ್ತನ್ನು ಒದಗಿಸುತ್ತಲೇ ಇದೆ. ಅದರಿಂದ ಶಾಶ್ವತ ಆನಂದ ಸಿಕ್ಕಲು ಸಾಧ್ಯವೇ?
ಸವಲತ್ತುಗಳು, ಸಲಕರಣೆಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ಇನ್ನೇನೋ ಹೊಸ ಹೊಸ ಅನ್ವೇಶಣೆಗಳು ನಡೆಯುತ್ತಲೇ ಇವೆ. ಇದಕ್ಕೆ ಸ್ಟಾಪ್ ಅನ್ನುವುದು ಇಲ್ಲ. ವಿಜ್ಞಾನವೇ ಹಾಗೆ. ಹೊಸ ಹೊಸದನ್ನು ಕೊಡುತ್ತಲೇ ಇದೆ. ಆದರೆ ಮನುಷ್ಯನ ಚಿಂತೆ ದೂರವಾಗಲೇ ಇಲ್ಲ. ಹೆಚ್ಚು ಹೆಚ್ಚು ಸೌಕರ್ಯಗಳು ಸಿಕ್ಕಿದಂತೆಲ್ಲಾ ನೆಮ್ಮದಿ ಸಿಕ್ಕಬೇಕಿತ್ತಲ್ಲವೇ? ಸಿಕ್ಕಿದೆಯೇ? ಹಾಗಾದರೆ ಏನು ಪ್ರಯೋಜನ?
ಯಾವುದರಿಂದ ಮನುಷ್ಯನಿಗೆ ನೆಮ್ಮದಿ ಸಿಕ್ಕೀತು? ನೀವೀಗ ಒಂದು ಗಂಟೆ ಕುಳಿತು ಸಾಮೂಹಿಕವಾಗಿ ಭಜನೆ ಮಾಡಿದಿರಿ. ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದಿರಿ, ಧ್ಯಾನ ಮಾಡಿದಿರಿ. ಈಗ ನಿಮ್ಮ ಮನ:ಸ್ಥಿತಿ ಹೇಗಿದೆ?

ಶಿಷ್ಯ:

ಮನಸ್ಸು ಪ್ರಫುಲ್ಲವಾಗಿದೆ. ಹಗುರವಾಗಿದೆ.

ಗುರು:

ಎಷ್ಟು ಹಣ ಖರ್ಚಾಯ್ತು?

ಶಿಷ್ಯ:

ಹಣ ಖರ್ಚಾಗುವುದರ ಬದಲು ಇವತ್ತು ಇದೇ ಸಮಯದಲ್ಲಿ ನಾನು ಸ್ನೇಹಿತರೊಡನೆ ಖುಷಿಗಾಗಿ ಖರ್ಚುಮಾಡುತ್ತಿದ್ದ ೨೦೦ ರೂಪಾಯಿ ಉಳಿಯಿತು.

ಗುರು:

ಇಲ್ಲಿಯವರಗೆ ಸುಖ ಬೋಗಗಳಿಗಾಗಿ ಎಷ್ಟು ಖರ್ಚುಮಾಡಿದ್ದೀರಿ?

ಶಿಷ್ಯ:

ಕಳೆದ ಒಂದೆರಡು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಲಗ್ಶುರಿ ಐಟಮ್ಗಳನ್ನು ಕೊಂಡಿದ್ದೇನೆ. ಅವನ್ನು ಮನೆಯಲ್ಲಿ ಕಾಪಾಡಲು ಒಬ್ಬ ಮನೆಕೆಲಸದವರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಕೊಡುತ್ತೇನೆ. ಆದರೂ ನಿತ್ಯವೂ ಗಲಾಟೆ ತಪ್ಪಿದ್ದಲ್ಲ. ಅದು ಹಾಳಾಯ್ತು, ಇದರಮೇಲೆ ಧೂಳು ಒರೆಸಲಿಲ್ಲ, ಇತ್ಯಾದಿ, ಇತ್ಯಾದಿ. ಸತ್ಸಂಗಕ್ಕೆ ಬರಲು ಶುರುವಾಗಿ ಆರು ತಿಂಗಳಾಯ್ತು. ಅಲ್ಲಿಂದ ಒಂದು ರೂಪಾಯಿಯ ಸಲಕರಣೆಗಳನ್ನೂ ಕೊಂಡಿಲ್ಲ. ಹೆಚ್ಚಿನ ಖರ್ಚೇ ಇಲ್ಲ.

ಗುರು:

ಇನ್ನು ನಾನು ಹೇಳುವುದೇನಿದೆ? ಎಲ್ಲಾ ನೀವೇ ಅನುಭವಿಸಿದಿರಿ.
------------------------------------------------------------------
ಕೊಸರು:
ಇನ್ನು ನಾನೇನು ಬರೆಯಲಿ? ಅಲ್ಲಿ ನಡೆದ ಸಂಭಾಷಣೆಯನ್ನು ಕೇಳಿದವರ ಮೇಲೆ ಆದ ಪರಿಣಾಮ ಇಲ್ಲಿ ಓದಿದವರ ಮೇಲೆ ಆಗಲಾರದೆಂದು ನನಗೆ ಗೊತ್ತು.

Rating
No votes yet