ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3

ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈಯುತ್ತಿದ್ದ ಈ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು". ಹೆಚ್ಚಿನ ಮಾಹಿತಿ ಬೇಕಾಗಿರುವವರು http://www.msnbc.msn.com/ ಅಲ್ಲಿ ಪಡೆದುಕೊಳ್ಳಬಹುದು (ಡೈರೆಕ್ಟ್ ಲಿಂಕ್ ಅಲ್ಲ ಇದು ಸರ್ಚ್ ಮಾಡಿ ).೧೮೭೨ರ ನಂತರ ಹಲವಾರು ವಿಮಾನ , ಹಡಗು ಮತ್ತು ಬೋಟ್ಗಳು ಕಾಣಿಯಾಗಿದ್ದರು ಎಲ್ಲರ ಗಮನ ಸೆಳೆದ F19 ವಿಮಾನದ ವಿಚಾರಕ್ಕೆ ನೇರವಾಗಿ ಬರೋಣ , ಮಧ್ಯೆ ಬರುವ ಹಲವು ಕಾಣಿಯಾದ ಪ್ರಕರಣಗಳ ಪಟ್ಟಿಯನ್ನು ಮುಂದೆ ಹಾಕುತ್ತೇನೆ . ಈ ತ್ರಿಕೋನಕ್ಕೆ ಬರ್ಮುಡ ತ್ರಿಕೋನ ಅಂತ ಹೆಸರು ಬರುವ ಹಿಂದೆ ಇರುವುದೇ ಇದು . ೨ ನೇ ಜಾಗತಿಕ ಯುದ್ಧದ ಸಮಯದಲ್ಲಿ ಜಗತ್ತಿಗೆ ತನ್ನ ಶೌರ್ಯವನ್ನು ತೋರಿಸಲು ಅಮೇರಿಕ ಎಲ್ಲ ರೀತಿಯಲ್ಲೂ ಸಿದ್ಧವಾಗುತ್ತಿತ್ತು . ಅದರ ಅತ್ಯಂತ ಶಕ್ತಿಯುತವಾದ ಸೇನೆಯೇ ವಾಯುಸೇನೆ .ಇದಕ್ಕಾಗೆ ಫ್ಲೋರಿಡಾದ ಫೋರ್ಟ್ ಲುಡೆರ್ದಲೇ ಅಲ್ಲಿಂದ ತನ್ನ ನೌಕೆಗಳ ಅಭ್ಯಾಸದಲ್ಲಿ ತೊಡಗಿತ್ತು ಅದು. ಅಂದು ಡಿಸೆಂಬರ್ ೫ , ೧೯೪೫ ತನ್ನ ಅತ್ಯಂತ ಪ್ರಭಾಲಶಾಲಿ ೫ ಯುದ್ಧ ವಿಮಾನಗಳ ಅಭ್ಯಾಸಕ್ಕೆ ಅಣಿಯಾಗುತ್ತಿತ್ತು.ಅಪರಾಹ್ನ ೨.೧೦ ಕ್ಕೆ ಅದರ ಹಾರಾಟ ಶುರುವಾಗಬೇಕಿತ್ತು ,ಕಾರಣಾಂತರಗಳಿಂದ ೫ ನಿಮಿಷ ತಡವಾಗಿ ೨.೧೫ ಕ್ಕೆಂದು ನಿಗದಿಯಾಗಿತ್ತು . ಅಂದು ಅಲ್ಲಿಂದ ಹಾರಲಿದ್ದ ೧೯ ನೇ ವಿಮಾನಗಳು ಇವಾಗಿದ್ದರಿಂದ ಇವಕ್ಕೆ F ೧೯ ಅಂತ ಹೆಸರು ಬಂದಿದ್ದು .ಅಂದು ಹಾರಾಟಕ್ಕೆ ತಯಾರಾಗಿದ್ದ ವಿಮಾನಗಳು ಮತ್ತು ಅವುಗಳ ಮುಖ್ಯಸ್ಥರ ಹೆಸರು ಕೆಳಗಿದೆ :ವಿಮಾನದ ಹೆಸರು ಮುಖ್ಯಸ್ಥರ ಹೆಸರು ೧) FT - 28 ಚಾರ್ಲ್ಸ್ . ಸಿ . ಟೇಲರ್ (ಇವನೇ ಇಡೀ ತಂಡದ ಮುಖ್ಯಸ್ಥ )೨)FT - 36 ಎಡ್ವರ್ಡ್ . ಜೆ . ಪವರ್ ೩)FT -3 ಜೋಸೆಫ್ . ಟಿ. ಬೋಸ್ಸಿ ೪) FT- 117 ಜಾರ್ಜ .ಡಬ್ಲ್ಯೂ . ಸ್ಟಿವರೆಸ್ ೫) FT - ೮೧ ರಾಬರ್ಟ್ . ಜೆ . ಗೇರ್ಬೇರ್

 

            

            F19 ವಿಮಾನ                                                   ಟೇಲರ್

ಒಟ್ಟು ಒಂದೊಂದು ವಿಮಾನದಲ್ಲಿ ೩ ಜನರಂತೆ ೧೫ ಪೈಲೆಟ್ಗಳು ಹಾರಾಟಕ್ಕೆ ಸಿದ್ದರಾಗಿದ್ದರು , ಆದರೆ ಕೊನೆ ಕ್ಷಣದಲ್ಲಿ ರಾಬರ್ಟ್ ವಿಮಾನದ ರೇಡಿಯೋ ಸಂದೇಶ ನಿರ್ವಾಹಕ ಬರದೆ ಇದ್ದುದ್ದರಿಂದ ಅದರಲ್ಲಿ ಮಾತ್ರ ೨ ಮಾತ್ರ ಪ್ರಯಾಣಿಸುವುದು ಅಂತ ನಿರ್ಧರಿಸಲಾಯಿತು .ಮೊದಲು ಪೂರ್ವಾಭಿಮುಖವಾಗಿ ೫೬ ಮೈಲಿ ಗಳಷ್ಟು ಹೋಗಿ ಬಾಂಬ್ ಎಸೆಯುವ ಅಭ್ಯಾಸವಾದ ನಂತರ ಮತ್ತೆ ಅದೇ ದಿಕ್ಕಿನಲ್ಲಿ ೬೭ ಮೈಲಿ ಪ್ರಯಾಣಿಸಿ , ನಂತರ ಅಲ್ಲಿಂದ ಉತ್ತರಕ್ಕೆ ೭೦ ಮೈಲಿ ಹೋಗಿ ಕೊನೆಗೆ ಅಲ್ಲಿಂದ ೧೨೦ ಮೈಲಿ ದೂರವಾಗುವ ಹೊರಟ ಜಾಗಕ್ಕೆ ಮತ್ತೆ ಹಿಂದಿರುಗುವುದು ಎಂದು ನಿರ್ಧರಿಸಲಾಗಿತ್ತು.ಎಲ್ಲ ವಿಮಾನಗಳಿಗೂ ೧೦೦೦ ಮೈಲಿ ಪ್ರಯಾಣಿಸುವಷ್ಟು ಇಂಧನವನ್ನು ತುಂಬಿಸಲಾಗಿತ್ತು .ಎಲ್ಲ ಪೈಲೆಟ್ಗಳು ೩೫೦ ಘಂಟೆಗಳಿಗಿಂತಲೂ ಹೆಚ್ಚು ಕಾಲ ಹಾರಾಟ ಮಾಡಿದವರಾಗಿದ್ದರು . ಮುಖ್ಯ ಪೈಲೆಟ್ ೧೯೪೧ ರಿಂದಲೂ ಕಾರ್ಯದಲ್ಲಿದ್ದನು . ಆದರೆ ಈಗ ಹಾರಾಟಕ್ಕೆ ಹೊರಟಿರುವ ಪ್ರದೇಶದ ಬಗ್ಗೆ ಅವನಿಗೆ ಅಂಥಹ ಹೇಳಿಕೊಳ್ಳುವಂತ ಅರಿವು ಇರಲಿಲ್ಲ .

ಸಮಯ ೩. ೩೦ : ತನ್ನ ಎರೆಡು ದಿಕ್ಸೂಚಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಟೇಲರ್ ,ರಾಬರ್ಟ್ ನೊಂದಿಗೆ ಸಂಪರ್ಕ ಸಾಧಿಸಿ ತಿಳಿಸುತ್ತಾನೆ .ತಕ್ಷಣ ಎಲ್ಲ ಪೈಲೆಟ್ಗಳು ತಮ್ಮ ದಿಕ್ಸೂಚಿಯನ್ನು ಸಮೀಕರಿಸಿದಾಗ ಅದು ಅವರಲ್ಲೇ ಇನ್ನೊಂದು ರೀತಿಯ ಗೊಂದಲಕ್ಕೆ ಎಡೆಮಾಡಿಕೊಟ್ಟಿತು .ಆದರೆ ಟೇಲರ್ ತಾನು ಫ್ಲೋರಿಡಾದ ದಕ್ಷಿಣಕ್ಕೆ ಇರುವ ದ್ವೀಪಸಮೂಹದ ಹತ್ತಿರದಲ್ಲೆಲ್ಲೋ ಇದ್ದೇನೆಂದು ಊಹಿಸಿಕೊಂಡು ಹೇಳುತ್ತಾನೆ .ಅದು ನಿಜವೇ ಆಗಿದ್ದಲ್ಲಿ ಅಲ್ಲಿಂದ ಉತ್ತರಕ್ಕೆ ಚಲಿಸಲು ರಾಬರ್ಟ್ ತಿಳಿಸುತ್ತಾನೆ .

ಈಗಿನ ವಿಮಾನಗಳಿಗೆ ತಾವಿರುವ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಬೇಕಾದಷ್ಟು ಸೌಲಭ್ಯಗಳಿವೆ ಅದರಲ್ಲಿ GPS (Global Positioning Satellites) ಕೂಡ ಒಂದು , ಹಾಗಾಗಿ ಪೈಲೆಟ್ ದಿಕ್ಕು ತಪ್ಪುವ ಸಂಭವ ಬಹಳ ಕಡಿಮೆ , ಆದರೆ ೧೯೪೫ ರಲ್ಲಿ ಹಾಗಲ್ಲ . ನೀರ ಮೇಲೆ ಹಾರುವಾಗ ಚಾಲಕ ತಾನು ಹೊರಟಿರುವ ಜಾಗ , ಹೋಗುತ್ತಿರುವ ದಿಕ್ಕು ಮತ್ತು ವಿಮಾನ ಚಲಿಸುತ್ತಿರುವ ವೇಗ ಮೂರರ ಮೇಲು ಗಮನ ವಿಟ್ಟಿರಬೇಕಿತ್ತು , ಒಂದು ತಪ್ಪಿತು ಅಂದ್ರು ಆತ ದಿಕ್ಕು ತಪ್ಪಿದ ಅಂದೇ ಲೆಕ್ಕಾಚಾರ . ಮೊದಲೇ ತಿಳಿಸಿದಂತೆ ಈ ಭಾಗದಲ್ಲಿ ಹಾರಾಟ ಮಾಡಿ ಅಷ್ಟೇನೂ ಅಭ್ಯಾಸವಿಲ್ಲದ ಟೇಲರ್ , ತನ್ನಲ್ಲೇ ಊಹಿಸಿಕೊಂಡು ಫ್ಲೋರಿಡಾ ದ್ವೀಪಗಳ ದಕ್ಷಿಣಕ್ಕೆ ತನ್ನ ವಿಮಾನವನ್ನು ಚಲಾಯಿಸುತ್ತೇನೆ , ಆದರೆ ಆತ ಹೋಗಬೇಕಾಗಿದ್ದು ಪೂರ್ವವಾಗಿತ್ತು .ಆತನ ಈ ನಿರ್ಧಾರ ಉಳಿದ ವಿಮಾನಗಳ ಧಾರುಣ ಕಥೆಗೂ ಕಾರಣವಾಯಿತು .

೪.೪೫ : ಟೇಲರ್ ವಿಮಾನವನ್ನು ನೈರುತ್ಯಕ್ಕೆ ಚಲಾಯಿಸಲು ವಿವರಿಸುತ್ತಾನೆ , ಈಗಲೂ ತಾನು ಫ್ಲೋರಿಡಾದ ದ್ವೀಪದ ಸುತ್ತಮುತ್ತ ಎಲ್ಲೋ ಇದ್ದೇನೆ ಅನ್ನೋ ನಂಬಿಕೆ ಮೇಲೆ , ಆದರೆ ನಿಜವಾಗಿ ಆತ ಅಟ್ಲಾಂಟಿಕ್ ಮಹಾಸಾಗರದ ಒಳಗೆ ಬಹುದೂರ ಹೋಗುತ್ತಿದ್ದಾನೆ ಅನ್ನೋದು ಅವನಿಗೆ ತಿಳಿದಿರಲಿಲ್ಲ .೫.೫೦ : ಫ್ಲೋರಿಡದ ನ್ಯೂ ಸ್ಮ್ಯಮ ಮುಖ್ಯ ಕೇಂದ್ರಕ್ಕೆ F 19 ವಿಮಾನದಿಂದ ಬರುತ್ತಿದ್ದ ಸಿಗ್ನಲ್ಗಳು ದುರ್ಬಲವಾಗ ತೊಡಗುತಿತ್ತು .ಎಷ್ಟು ದುರ್ಬಲವಾಯಿತು ಎಂದರೆ ಪರಸ್ಪರ ವಿಮಾನಗಳ ನಡುವೆ ಸಂಪರ್ಕ ಕಲ್ಪಿಸಲು ಕೂಡ ಆಗದಷ್ಟು .

೬.೨೦ ಕೇಂದ್ರ ನಿಲ್ದಾಣದಿಂದ ದುಮ್ಬೋ ಅನ್ನೋ ವಿಮಾನ F19 ವಿಮಾನಗಳಿಗೆ ಮಾರ್ಗದರ್ಶನ ನೀಡಿ , ಅವುಗಳನ್ನು ಹಿಂದೆ ಕರೆತರಲು ಹಾರಿತು . ಅದು ಅಲ್ಲದೆ ವಾತಾವರಣ ಬೇರೆ ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಮತ್ತು F19 ವಿಮಾನಗಳ ಇಂಧನ ಕೂಡ ಸ್ವಲ್ಪದರಲ್ಲಿ ಖಾಲಿಯಾಗುವುದರಲ್ಲಿತ್ತು .

೭.೦೪ : F 19 ನಿಂದ ಕೊನೆಯ ಬಾರಿ ಸಿಗ್ನಲ್ಗಳು ಸಿಕ್ಕಿದವು , ಅದು ಕೆಲ ಸೆಕೆಂಡ್ ವರೆಗೆ ಮಾತ್ರ.ಆಮೇಲೆ ಅವುಗಳ ಸುಳಿವು ಸಿಗಲಿಲ್ಲ .ಹಾಗೆಯೇ ಅವುಗಳನ್ನು ಹುಡುಕ ಹೋದ ಇನ್ನೊಂದು ವಿಮಾನದ್ದು ಕೂಡ .ನಂತರ ಇಡೀ ರಾತ್ರಿ ಮತ್ತು ಮಾರನೆಯದಿನ ಕಾರ್ಯಾಚರಣೆ ನಡೆಸಿದರು ಯಾವುದೇ ಸುಳಿವು ಮಾತ್ರ ಸಿಗಲಿಲ್ಲ .ಹಾಗಾದರೆ ಅವು ಎಲ್ಲಿ ಹೋದವು ? ತಮ್ಮಲ್ಲೇ ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕುರುಲಿದವೇ ? ಹಾಗೆ ಹಾಗೆ ಅನಾಮತ್ತಾಗಿ ೫ ವಿಮಾನಗಳು ಅಪಘಾತಕ್ಕೆ ಈಡಾಗಲು ಕಾರಣವೇನಿರಬಹುದು ? ಇವನ್ನು ಹುಡುಕಹೋದ ವಿಮಾನ ವೇನಾಯಿತು?ಮುಂದಿನ ಕಂತುಗಳಲ್ಲಿ ನೋಡುವ ......ಓಕೆ (ಮುಂದುವರೆಯುತ್ತದೆ )

ಚಿತ್ರ ಕೃಪೆ :crysatal.com , bermuda triangle.org

ಮಾಹಿತಿ :wikipedia , crysatal.com , bermuda triangle.org, Gian Qusars "Into the bermuda triangle "

 

Rating
No votes yet

Comments