ಗಣೇಶ ಮತ್ತು ಪ್ರೀತಿ ಎಂಬ ಅಕ್ಷಯ ಪಾತ್ರೆ.

ಗಣೇಶ ಮತ್ತು ಪ್ರೀತಿ ಎಂಬ ಅಕ್ಷಯ ಪಾತ್ರೆ.

ಇವತ್ತೊಂದು ತಮಿಳು ಸಿನಿಮಾ ನೋಡಿದೆ... ಅದನ್ನು ನೋಡಿದಾಗ ಹೊಳೆದಿದ್ದು..

ಚಿತ್ರಕಲಾವಿದರಿಗೆ "ಗಣಪ" ..... ಸಿನಿಮಾ ದವರಿಗೆ "ಪ್ರೀತಿ"...... ಎರೆಡೂ ಅಕ್ಷಯ ಪಾತ್ರೆ ಇದ್ದಂಗೆ...
ನಾನು ನೋಡಿದ ಸಿನಿಮಾ ಮೊದಲಿಗೆ ಪ್ರೀತಿಯ ಕುರಿತಾಗಿ ಶುರುವಾದರೂ ಅದು ಮುಗಿಯುವುದು ಪ್ರೀತಿಯಲ್ಲಿ ಬರುವ ಇನ್ನೊಂದು ಕೋನದಲ್ಲಿ... ಇಂದಿಗೂ ಜಗತ್ತಿನಲ್ಲಿ ಸಾವಿರಾರು ಸಿನಿಮಾಗಳು ಗೆದ್ದಿರುವುದು.. ಹಣಮಾಡಿರುವುದು, ಪ್ರಶಸ್ತಿ ಪಡೆದಿರುವುದು..ಎಲ್ಲಾ ಈ ಪ್ರೀತಿಯ ಪರಮಾನ್ನದಿಂದಲೇ... ಪರಮಾನ್ನ ಸ್ವಲ್ಪ ಹೆಚ್ಚಾದರೂ ತಿನ್ನೋದಿಕ್ಕೆ ಆಗೋದಿಲ್ಲಾ .. ಆದರೆ ಈ ಪಿರೀತಿ ಅಲ್ಲೂ ಹೋಲಿಕೆಯಲ್ಲಿ ಮೀರಿಸಿ ಬಿಡುತ್ತೆ.. :(
ಪ್ರಕೃತಿಯ ಬೇಸಿಕ್ ಪ್ರೀತಿ ಬೆಸುಗೆಯಲ್ಲಿ ಅಂತ್ಯಗೊಂಡರೂ.. ನಾಗರೀಕತೆಯ ಹೆಸರಲ್ಲಿ ಹಾಕಿಕೊಂಡಿರುವ ಸರ್ಕಲ್ಗಳಲ್ಲಿ... ಇದೂ "ಗಣಪ" ನಂತೆ ನೂರಾರು ರೂಪಗಳನ್ನು... ಪಡೆದುಕೊಂಡಿದೆ... ಆ ಕಾರಣದಿಂದಲೇ ಅದನ್ನು ಬೆಸುಗೆಗಷ್ಟೇ ಸೀಮಿತಗೊಳಿಸಲು ಶಿಷ್ಟ ಮನಸ್ಸುಗಳು ಒಪ್ಪುವುದಿಲ್ಲಾ...
ನಮ್ಮ ಜನರಿಗೆ ನನ್ನ ಅನಭವಕ್ಕೆ ಬಂದಂತೆ ಸಿನಿಮಾ, ಕತೆಗಳಲ್ಲಿ ಎಲ್ಲಾ ರೂಪಗಳಿಗಿಂತಲೂ ವಿರಹದ ಪ್ರೀತಿ ತುಂಬಾ ಇಷ್ಟ ಮತ್ತು ತುಂಬಾ ಕಾಡುವಂತದ್ದು... ಅದಕ್ಕೂ ನಮ್ಮ ಪ್ರೀತಿಯ ಪೂಜಾರಿಗಳು ನೂರಾರು ತರಹಗಳಲ್ಲಿ ಅಭಿಶೇಕಿಸುತ್ತಾರೆ..
"ವಿರಹ ನೂರು ನೂರು ತರಹ"
ಅದಕ್ಕೆ ಎರೆಡು ಉದಾಹರಣೆಗಳೆಂದರೆ ..." ಕೃಷ್ಣ ಮತ್ತು ರಾದೆ"....
ಮತ್ತೊಂದು ಮುಂಗಾರು ಮಳೆಯ "ಪ್ರೀತಮ್ ಮತ್ತು ನಂದಿನಿ"...
ಕೃಷ್ಣ ರಾದೆ ಬೆಸುಗೆಯ ನಂತರ ಬೇರೆ ಬೇರೆಯಾಗಿದ್ದರೆ ಅವರು ಅಷ್ಟು ತೀವ್ರವಾಗಿ ಜನರನ್ನು ಕಾಡುತ್ತಿರಲಿಲ್ಲವೇನೂ..
ಮಳೆಯಲ್ಲಿ ಇಂದಿನ ’ಕೃಷ್ಣ’ ’ಭಟ್ಟ’ ರು ನೆಂದಿದ್ದು, ಗೆದ್ದಿದ್ದು... ಜನರಿಗೆ ಈ ವಿರಹದ ಮಳೆಯಲ್ಲಿ ಬೇಯಿಸಿ.
ಅಕಸ್ಮಾತ್ ಈ ಮಳೆಯಲ್ಲಿ ’ಪ್ರೀತಮ್’ ’ನಂದಿನಿ’ ಯ ಬೆಸುಗೆಯಾಗಿದ್ದರೆ.. ಆಪ್ರೀತಿ ದಾಖಲೆ ಬರೆಯಲಾಗುತ್ತಿರ್ಲಿಲ್ಲ.

ಹಾಗೇ ಪಾಶ್ಚಿಮಾತ್ಯರು ಆದುನಿಕ ಎಂಬ ಹಿಂದಿನ ದಿನದ ಅನ್ನಕ್ಕೆ ಇಂದಿನ ಒಗ್ಗರಣೆ ಹಾಕಿ ಫ್ರೆಷ್ ರೈಸ್ ಬಾತ್ ನಂತೆ ತಂದ ಮಾಡ್ರನ್ ಆರ್ಟ್ನಲ್ಲಿ ಅವರಿಗೆ ಇಲ್ಲಿ ಸಿಕ್ಕಿದ್ದು ಯಾವುದೇ ತೊಂದರೆಯಿಲ್ಲದೆ ಇಲ್ಲಿನ native sourceನ್ನು ತಮಗೆ ತಕ್ಕಂತೆ ಬಳಸಿಕೊಳ್ಳಬಹುದಾದ source ನಮ್ಮ ಗನೇಸ...
ಅದನ್ನೇ ಅವರು ಬಳಸಿಕೊಳ್ಳಲು ಕಾರಣ ಅವರು ವಿರೂಪಗೊಳಿಸುವ ಮೊದಲೇ ಪುರಾಣಗಳ ನೆರವಿಂದ ಪಾಶ್ಚಿಮಾತ್ಯ ನೀತಿಯ ಆದಾರದಿಂದ ಗುರುತಿಸುವ ವಿರೂಪ ’ರೂಪ’ದಲ್ಲಿ ನಮ್ಮ ವಕ್ರತುಂಡನಿದ್ದ...
೨೦ ನೇ ಶತಮಾನದ ಆದಿಯಲ್ಲಿ ಚಿತ್ರದಲ್ಲಿ ಸರ್ರಿಯಲ್ ಅಂಶಗಳನ್ನು ಗುರುತಿಸಿ ಬಳಕೆಗೆ ಪಾಶ್ಚಿಮಾತ್ಯರು ಪ್ರಯತ್ನಿಸುತ್ತಿದ್ದರೆ.... ನಮ್ಮಲ್ಲಿನ ಪುರಾಣಗಳು ದೇವರ ಚಿತ್ರಗಳಲ್ಲಿ ನಿಜಕ್ಕೂ ಅತೀತವಾದ ’ನಿಜಾತೀತ’ ಚಿತ್ರಗಳನ್ನು ಸೃಷ್ಟಿಸಿಬಿಟ್ಟಿದ್ದರು...

ಆದರೆ ಇವ್ಯಾವಗುಳನ್ನು ಮುಟ್ಟಲು ಧೈರ್ಯವಿಲ್ಲದ ಪಾಷ್ಚಿಮಾತ್ಯರಿಗೆ..
ಮೂಶಿಕ ನ ಮೇಲೆ ’ಸವಾರಿ’ .... ನಾಗರಹಾವಿನ ’ನಡುಪಟ್ಟಿ ’ ’belt’.... ಬಲೂನಿನಂತ ಹೊಟ್ಟೆ ... ಆನೆಯ ಮುಖದಿಂದ .. ಕೋಟಿ ಸೂರ್ಯಗಳಿಗೆ ಸಮಾನವಾಗಿ ’ಪ್ರಕಾಶಿ’ಸುತ್ತಿದ್ದ Vನಾಯಕ... ಅವರ ಭಾರತದಲ್ಲಿ ತಮ್ಮ ಕಲೆಯ ಪ್ರಚಾರಕ್ಕೆ ನಿಜವಾಗಿಯೂ ನಾಯಕನಾಗಿ ಕಂಡ...

ಯಾಕೆಂದರೆ ಇವನ ಬಗ್ಗೆ ಆಕ್ಷೇಪಿಸಲು ಇಲ್ಲಿನವರು ಯಾವ chanceಉ ತಮ್ಮ ಬಳಿ ಇರಿಸಿಕೊಂಡಿರಲಿಲ್ಲಾ... ಎಲ್ಲಾ ಇವರೇ ಮಾಡಿಬಿಟ್ಟಿದ್ದರು...
ಅಷ್ಟು ಸಾಕಿತ್ತು... ತಮ್ಮ ಶೈಲಿಗೆ ಇವನನ್ನು convert ಮಾಡಲು....
ಇವೆರೆಡೂ ನನಗೆ ಅಕ್ಷಯ ಪಾತ್ರೆನೆ... ಬರೆದಷ್ಟೂ ಬರೆಯಬೇಕೆನಿಸುತ್ತದೆ... ಯೋಚಿಸಿದಷ್ಟೂ ಯೋಚಿಸಬೇಕೆನಿಸುತ್ತದೆ...

Rating
No votes yet