ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !

ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !

ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !

ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಲ್ಲಿ ದಯವಿಟ್ಟು ನಿಮ್ಮ ಖಾತೆಯಲ್ಲಿರುವ ಮೊತ್ತದ ಬಗ್ಗೆ ಸದಾ ಎಚ್ಚರದಿಂದಿರಿ, ಯಾಕೆಂದರೆ ಐಸಿಐಸಿಐ ಬ್ಯಾಂಕ್ ಖಾತೆದಾರರಿಗೆ ಯಾವ ಮುನ್ಸೂಚನೆಯನ್ನೂ ಕೊಡದೆ ಖಾತೆಯಲ್ಲಿರುವ ಹಣವನ್ನು ಬ್ಲಾಕ್ ಮಾಡುತ್ತಾರೆ ಮತ್ತು ಹಿಂದಿರುಗಿಸಲು 1 ವಾರದ ಅವಧಿ ಕೇಳುತ್ತಾರೆ. ಈಗ ನನ್ನ ಅನುಭವ ಕೇಳಿ,

ನಾನು ಈ ಬ್ಯಾಂಕ್ ನಲ್ಲಿ 2007 ಸೆಪ್ಟಂಬರ್ ನಲ್ಲಿ ಉಳಿತಾಯ ಖಾತೆ ತೆರೆದೆ ಅದಕ್ಕೆ ಮುಂಚೆ ಸುಮಾರು 5 ವರ್ಷಗಳು ದೇಶದಿಂದ ಹೊರಗೆ ಇದ್ದೆ ಇಲ್ಲಿಯವರೆಗೂ ಯಾವುದೇ ತೊಂದರೆ ಇರಲಿಲ್ಲ (ಕೊಡೈಕೆನಾಲ್ ನಲ್ಲಿ ಮೇ ತಿಂಗಳಲ್ಲಿ ಪ್ರವಾಸ ಹೋದಾಗ ಆದ ಒಂದು ತೊಂದರೆ ಬಿಟ್ಟು - ಅದರ ಬಗ್ಗೆ ನಂತರ ಬರೆಯುತ್ತೇನೆ) . ನೆನ್ನೆ ಅಂದರೆ 26 ಜೂನ್, ನನ್ನ ಖಾತೆಗೆ ನಮ್ಮ ಕಂಪನಿಯಿಂದ ಸಂಬಳ ವರ್ಗಾವಣೆ ಆಯಿತು ಮೊಬೈಲ್ ಗೆ ಸಂದೇಶ ಬಂತು ನೋಡಿದರೆ ಸಂದಾಯವಾಗಿರುವ ಮೊತ್ತ ಹಾಗು ಉಪಲಭ್ದವಿರುವ ಮೊತ್ತದಲ್ಲಿ ವೆತ್ಯಾಸ !! ಸುಮಾರು 45000 ರುಪಾಯಿಗಳು. ಘಾಬರಿಯಿಂದ Phone Banking ಗೆ ಕಾಲ್ ಮಾಡಿದರೆ ಅವರು ಹೇಳ್ತಾರೆ ನಿಮ್ಮ Credit Card Outstanding ಗೆ ಈ ಹಣ ಜಮಾ ಮಾಡಬೇಕಿದೆ ಆದ್ದರಿಂದ ಆ ಮೊತ್ತವನ್ನ ಬ್ಲಾಕ್ ಮಾಡಲಾಗಿದೆ ಎಂಬ ಉತ್ತರ ಬಂತು...ನನಗೋ ಪರಮ ಆಶ್ಚರ್ಯ.. !!! ಕೇಳಿದೆ, ತಾವು ನನಗೆ ಯಾವಾಗ Credit Card ವಿತರಣೆ ಮಾಡಿದ್ರಿ ಯಾಕೆಂದ್ರೆ ನನ ಹತ್ರ ಐಸಿಐಸಿಐ ಒಂದೇ ಅಲ್ಲ ಬೇರೆ ಯಾವ ಬ್ಯಾಂಕ್ ಗಳಿಂದಲೂ ಸಹ ಯಾವುದೇ Credit Card ಇಲ್ಲ ಹಾಗಿದ್ದ ಮೇಲೆ ನೀವು ಹೇಗೆ ಹಣವನ್ನು ಬ್ಲಾಕ್ ಮಾಡ್ತೀರ ಅಂತಾ...!!!!

ಅದಕ್ಕೆ ಅವರ ಉತ್ತರ ಎನು ಗೊತ್ತೆ ? ನನ್ನದೇ ಹೆಸರು ಮತ್ತು ನನ್ನ ಜನ್ಮ ದಿನಾಂಕ ಹೊಂದಿರುವ ಯಾರದೊ Credit Card ಇಸವಿ 2001 ರಿಂದ Outstanding ಇದೆಯಂತೆ ಅದಕ್ಕೆ ಅದು ನನ್ನದೇ ಇರಬಹುದು ಅಂತಾ ಬ್ಲಾಕ್ ಮಾಡಿದ್ರಂತೆ....!!!!

ಸರಿ ನನ್ನಲ್ಲಿ ಯಾವ Credit Card ಇಲ್ಲ ಮತ್ತು ನಾನು ICICI Bank ಗೆ ಯಾವ ರೀತಿಯಿಂದಲೂ ಸಾಲಗಾರನಲ್ಲ ದಯಮಾಡಿ ನನ್ನ ಹಣವನ್ನು ಹಿಂದಿರುಗಿಸಿ ಎಂದಾಗ, "ಒಂದು ವಾರ ಕಾಯಿರಿ ನಾವು ಮತ್ತೆ ಪರಿಶೀಲಿಸಿ ನಿಮಗೆ ತಿಳಿಸುತ್ತೇವೆ" ಎಂಬ ಉತ್ತರ ಬಂತು.

" ಮತ್ತೆ ಹಣ ಬ್ಲಾಕ್ ಮಾಡುವ ಮೊದಲು ನನ್ನ ಬಳಿ ವಿಚಾರಿಸಬಹುದಿತ್ತಲ್ಲ ಅದೂ ಅಲ್ಲದೆ ನಾನು ನಿಮಗೆ ಈ ರೀತಿ ಹಣ ಬ್ಲಾಕ್ ಮಾಡಿಕೊಳ್ಳಬಹುದು ಅಂತಾ ಯಾವ ಅರ್ಜಿಯಲ್ಲು ಸಹಿ ಹಾಕಿರಲಿಲ್ಲವಲ್ಲ ನೀವು ನನ್ನ ಖಾತೆಯಿಂದ ಹೇಗೆ ಹಣ ಬ್ಲಾಕ್ ಮಾಡುವಿರಿ" ಎನ್ನುವ ನನ್ನ ಪ್ರೆಶ್ನೆಗೆ ಅವರ ಉತ್ತರ.. " ಒಂದು ವೇಳೆ ನೀವೆ ಸಾಲಗಾರರಾಗಿದ್ದಲ್ಲಿ..ನಿಮಗೆ ನಾವೆ ಮುಂಚಿತವಾಗಿ ತಿಳಿಸಿದ ಪಕ್ಶದಲ್ಲಿ ನೀವು ಎಲ್ಲ ಹಣವನ್ನು Withdraw ಮಾಡ್ತಿರಲ್ಲ ಅದಕ್ಕೆ ಹೇಳಿಲ್ಲ" ಎಂಬ ಉತ್ತರ ಬಂತು !!!

ನನ್ನ ಇನ್ನೊಂದು ಪ್ರೆಶ್ನೆ.. "ಸರಿ ಹಾಗೊಂದು ವೇಳೆ ನಾನು ನಿಮ್ಮ ಬ್ಯಾಂಕ್ ಗೆ ನಾನು 2001 ರಲ್ಲಿ ಸಾಲಗಾರನಾಗಿ ಮತ್ತು ಹಣ ಹಿಂದಿರುಗಿಸದೆ ಮೋಸ ಮಾಡಿದ್ದಲ್ಲಿ 2007 ಗೆ ಮತ್ತೆ ಬಂದು ಸೇವಿಂಗ್ಸ್ ಖಾತೆ ಯಾಕೆ ತೆಗೆಯುತ್ತಿದ್ದೆ ಮತ್ತು ನಮ್ಮ ಕಂಪನಿಯವರಿಗೆ ಇಲ್ಲಿ ನನ್ನ Salary ಹಾಕಿ ಅಂತ ಯಾಕೆ ಹೇಳುತ್ತಿದ್ದೆ ? ಹಾಗೂ 2 ವರ್ಶದಿಂದ ಗೊತ್ತಾಗದಿದ್ದಿದ್ದು ಈಗ ಹೇಗೆ ? " ಅಂದರೆ ಅದಕ್ಕೆ ಅವರ ಬಳಿ ಸಮಂಜಸ ಉತ್ತರ ಬರಲಿಲ್ಲ. ಅದೂ ಅಲ್ಲದೆ ಸಾಧಾರಣವಾಗಿ ದೂರುಗಳನ್ನ ದೂರವಾಣಿ ಮುಖಾಂತರ ಕೊಟ್ಟಾಗ ಬ್ಯಾಂಕ್ ನವರು ನೀಡುವ Reference Number/Complaint Number ಸಹ ಅವರು ಕೊಡರು ಸಿದ್ದರಿಲ್ಲ.

" ನೀವು ಒಂದು ವಾರದ ನಂತರ ನಿಮ್ಮ Account Check ಮಾಡಿ ಒಂದು ವೇಳೆ ನಿಮ್ಮ ಹಣ ಬಿಡುಗಡೆ ಆಗಿಲ್ಲದಿದ್ದರೆ ಮತ್ತೆ ನಮಗೆ Phone ಮಾಡಿ" ಎಂದು ದೂರವಾಣಿ ಸಂಭಾಷಣೆ ಮುಗಿಸಿದರು.

ಇದು ಒಬ್ಬ ಗ್ರಾಹಕನೊಂದಿಗೆ ಬ್ಯಾಂಕ್ ನಡೆದು ಕೊಂಡ ರೀತಿ ಎಷ್ಟು ಸರಿ ?

ಯಾವ ಮುನ್ಸೂಚನೆಯನ್ನೂ ಕೊಡದೆ, ಸರಿಯಾಗಿ ಪರಿಶೀಲನೆ ಮಾಡದೆ, 2 ವರ್ಷಗಳಿಂದ ಚಾಲ್ತಿಯಲ್ಲಿರುವ ಖಾತೆಯಿಂದ ಏಕಾಏಕಿ 45000 ದಷ್ಟು ಹಣವನ್ನು ಈ ರೀತಿ ಬ್ಲಾಕ್ ಮಾಡಿ 1 ವಾರ ಕಾಯಿರಿ ಎನ್ನುವ ಉತ್ತರ ನೀಡುವುದು ಎಷ್ಟು ಸರಿ?

ಪುಣ್ಯಕ್ಕೆ ನನ್ನ ಯಾವ ಚೆಕ್ ಗಳು Clearance ಗೆ ಬರುವವು ಇಲ್ಲ, ಆದರೆ ಒಂದು ವೇಳೆ ಯಾವುದಾದರೂ ಚೆಕ್ ಬರುವುದು ಇದ್ದರೆ (PDC) ಅದು ಬಂದು ಬೌನ್ಸ್ ಆದರೆ ಮುಂದಿನ ಪರಿಣಾಮಗಳಿಗೆ ಯಾರು ಹೊಣೆ ?

Written Complaint ತೆಗೆದುಕೊಂಡು Branch Manager (ICICI Bank - Langford Road branch) ನೋಡಲು ನಾಳೆ ಹೋಗುತ್ತಿದ್ದೇನೆ. ಅಲ್ಲಿ ಏನಾಯಿತು ಎಂದು ನಂತರ ಇಲ್ಲಿ ಬರೆಯುತ್ತೇನೆ.

ಒಂದು ವೇಳೆ ನನ್ನ ಹಣ ಹಿಂದಿರುಗದಿದ್ದಲ್ಲಿ ನಾನು ಅದನ್ನ ಹೇಗೆ ವಾಪಸ್ ಪಡೆಯಬೇಕು ಅಂತ ಯಾರಾದರೂ ಸಂಪದಿಗರು ಸಲಹೆ / ಮಾರ್ಗದರ್ಶನ ಕೊಟ್ಟರೆ ಅವರಿಗೆ ನಾನು ಚಿರ ಋಣಿ.

Rating
No votes yet

Comments