ನಾ ಕಂಡ ನ್ಯೂಯಾರ್ಕ್

ನಾ ಕಂಡ ನ್ಯೂಯಾರ್ಕ್

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ್ನ ಬಳಿ ಸಾಧ್ಯವಾದಷ್ಟು ಕನ್ನಡ ಪದ ಬಳಸಲು ಪ್ರಯತ್ನಿಸೋದು. ಅಂದುಕೊಂಡಂತೆ ಗೆಳೆಯನೊಬ್ಬ ಮೊನ್ನೆಯಷ್ಟೇ ಬಿಡುಗಡೆ ನ್ಯೂ ಯಾರ್ಕ್ ಚಿತ್ರಕ್ಕೆ ಚೀಟಿ(ಟಿಕೆಟ್) ಮುಂಗಡ ಕಾಯ್ದಿರಿಸಿದ್ದ(ರಿಸರ್ವ್).
ಆಸ್ಟ್ರೇಲಿಯದಲ್ಲಿ ಜಾನಂಗಿಯ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ ಅದೇ ಆಧಾರದ ಕಥಾವಸ್ತು ಇಟ್ಟುಕೊಂಡು ಈ ಚಿತ್ರ ನಿರ್ಮಾಣವಾಗಿದೆ. ೯/೧೧ ನೆಡೆದ ನಂತರ ಅಮೆರಿಕದ ಎಫ್ ಬಿ ಐ ಹೇಗೆ ಅಲ್ಲಿರುವ ಪರದೇಶದವರನ್ನು(ಮುಖ್ಯವಾಗಿ ಏಷ್ಯ ಖಂಡದ ಜನರನ್ನ ) ಈ ಘಟನೆಗೆ ಗುರಿಯಾಗಿಸಲು ಪ್ರಯತ್ನಿಸಿತು ಅನ್ನೋದು.
ಹೇಳಹೊರಟಿರುವ ವಿಷಯ ಸರಿಯಾಗೇ ಕಂಡರೂ , ಇದು ದೇಶ ದೇಶಗಳ ನಡುವಿನ ಜನರ ವೈಮನಸಿಗೆ ಮತ್ತಷ್ಟು ಪ್ರಚೋದನೆ ಕೊಟ್ಟತ್ತಾಗುತ್ತದೆ ಅನ್ನೋದು ನನ್ನ ಅಭಿಪ್ರಾಯ. ಹಾಗೆಯೇ ಚಿತ್ರದ ವಿಷಯಕ್ಕೆ ಬಂದರೆ ಹಾಡುಗಳು ಪರವಾಗಿಲ್ಲ ಅನ್ನಬಹುದು , ಚಿತ್ರಕಥೆ ಚೆನ್ನಾಗಿದೆ . ಅಂತ್ಯದಲ್ಲೇ (ಕ್ಲೈಮ್ಯಾಕ್ಸ್ ) ಎಡವಿದ್ದಾರೆ ಅನ್ಸುತ್ತೆ . ಉಳಿದಂತೆ ಕ್ಯಾಟ್ (ಕತ್ರೀನಾ ) ಮುದ್ದಾಗಿ ಮಿಂಚಿದ್ದಾರೆ. ಜಾನ್ ಅಭಿನಯದಲ್ಲಿ ಸೈ ಎನಿಸಿದ್ರು , ಒಂದೆರಡು ಸನ್ನಿವೇಶದಲ್ಲಿ ಮಲ್ಲಿಕಾಳೆ ನಾಚಿಕೊಳ್ಳಬೇಕು ಹಾಗೆ ಧರಿಸು ಇದೆ .ಎಂದಿನಂತೆ ಇರ್ಫಾನ್ ಖಾನ್ ತಮ್ಮ ಪ್ರಭುದ್ದ ನಟನೆಯಿಂದ ಎಲ್ಲರ ಮನ ಸೆಳೆಯುತ್ತಾರೆ ,ನಿಲ್ ನಿತಿನ್ ಮುಕೇಶ್ ಅಭಿನಯ ಕೂಡ ಚೆನ್ನಾಗಿದೆ .ಒಟ್ಟಿನಲ್ಲಿ ಚಿತ್ರವನ್ನು ಒಮ್ಮೆ ನೋಡುವುದಕ್ಕೆ ತೊಂದರೆಯಿಲ್ಲ.

ಇನ್ನೊಂದು ಇಂದು ಬೆಳಿಗ್ಗೆ ವೃತ್ತಪತ್ರಿಕೆ ಒಂದರಲ್ಲಿ ಓದಿದೆ ."ಭಾರತೀಯರು ಜಾನಂಗೀಯವಾದಿಗಳೇ" ಅಂತ ಅದು ಕೇಳಿದ ಪ್ರಶ್ನೆಗೆ ಶೇಕಡಾ ೬೯ ರಷ್ಟು ಜನ ಹೌದು ಎಂದು , ೨೯% ಜನ ಅಲ್ಲ ಎಂದು ಮತ್ತು ೨% ಜನ ಹೇಳಲಾಗುವುದಿಲ್ಲವೆಂದು ಉತ್ತರಿಸಿದ್ದಾರೆ ಅಂತ ಪ್ರಕಟಿಸಿದೆ(ಆ ಉತ್ತರಿಸಿದ ಮಹಾನುಭಾವರು ಯಾರೋ ?) .

Rating
No votes yet