ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :) :)

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :) :)

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :

೧) ಮುದುಕಿ : ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ : ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!

೨) ಸರ್ದಾರ್‌ನ ನೇಣು ಹಾಕಬೇಕಾದರೆ, ಜೈಲರ್ : ನಿನ್ನ ಕೊನೆ ಆಸೆ ಏನು ?ಸರ್ದಾರ್ : ನನ್ನ ನೇಣು ಹಾಕ್ತಿದ್ದೀರಲ್ಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ಹಾಕಿ ಸಾಕು !!!

೩) ಪೇದೆ : ರಾಮನವಮಿ ಪ್ರಯುಕ್ತ ನಿನ್ನೆ ಜೈಲಿನ ಖೈದಿಗಳು ’ಸಂಪೂರ್ಣ ರಾಮಾಯಣ’ ನಾಟಕ ಆಡಿದರು ಸಾರ್. ಜೈಲಿನ ಅಧಿಕಾರಿ : ಅದಕ್ಕೇನೀಗ ? ಪೇದೆ : ಹನುಮಂತನ ಪಾತ್ರ ವಹಿಸಿದ ಖೈದಿ ಸಂಜೀವಿನಿ ಸಸ್ಯ ತರಲು ಹೋದವನು ಇನ್ನೂ ಬಂದೇ ಇಲ್ಲ ಸಾರ್ !!!೪)ಕಳ್ಳರಿಬ್ಬರು ದರೋಡೆ ಮಾಡಿ ಬಂದು ಒಂದು ಕಡೆ ಕುಳಿತರು. ಒಬ್ಬ ಕಳ್ಳ : ಎಷ್ಟು ಹಣ ನೋಡೋಣವೇನೋ ? ಇನ್ನೊಬ್ಬ ಕಳ್ಳ : ನಂಗೆ ನಿದ್ದೆ ಬರುತ್ತಿದೆ ಮನೆಗೆ ಹೋಗೋಣಪ್ಪ. ಹೇಗಿದ್ದರು ನಾಳೆ ಪೇಪರ್‌ನಲ್ಲಿ ಬರುತ್ತಲ್ಲ.....!!

೫)"ನಾಳೆಯ ಕೆಲಸವನ್ನು ಇಂದೇ ಮಾಡಿ ಎಂದು ಆಫೀಸಿನಲ್ಲಿ ಬೋರ್ಡ್ ಹಾಕಿದ್ದು ತಪ್ಪಾಯಿತು....""ಯಾಕೆ? ಏನಾಯ್ತು..?""ನಾಳೆ ಭಾನುವಾರದ ಬದಲಿಗೆ ಇಂದೇ ಎಲ್ಲರೂ ಆಫೀಸಿಗೆ ಬರದೆ ಮನೇಲಿ ಉಳಿದ್ಬಿಟ್ಟಿದ್ದಾರೆ..!!"

೬)ಸರ್ದಾರ್ : ನಾನು ಕೆಲಸಕ್ಕೆ ಹೋಗುವ ಮುನ್ನ, ನನ್ನ ಹೆಂಡತಿಗೆ ಕಿಸ್ ಕೊಟ್ಟು ಹೋಗುತ್ತೇನೆ ! ಸ್ನೇಹಿತ : ನೀನು ಕೆಲಸಕ್ಕೆ ಹೋದ ಮೇಲೆ, ನಾನು ಕಿಸ್ ಮಾಡುತ್ತೇನೆ ! ! ! ಹ್ಹ... ಹ್ಹ... ಹ್ಹ..

೭)'ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?' ಎಂದು ಸೇಲ್ಸ್‌ಮ್ಯಾನ್ ಕೆಲಸಕ್ಕೆ ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು. 'ಓಹೋ... ಸಾಕಷ್ಟು ಇದೆ ಸಾರ್ ... ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ. ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ...' ! !

೮)ರಾಂಪ ಕೆಲಸಕ್ಕೆ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ ಸಂದರ್ಶಕ : ನೀನ್ಯಾಕೆ ಹಿಂದಿನ ಕೆಲಸ ಬೆಟ್ಟೆ ? ರಾಂಪ : ನನ್ನ ಕಂಪನಿ ಆಫೀಸನ್ನು ಸ್ಥಳಾಂತರಿಸಿತು. ಆದರೆ ನನಗೆ ಹೊಸ ವಿಳಾಸವನ್ನೇ ತಿಳಿಸಲಿಲ್ಲ...!!!

೯)ಬಾಸು : ಯಾಕೋ ಆಫೀಸಿಗೆ ಲೇಟು ? ಕ್ಲರ್ಕ್ : ಅಡಿಗೆ ಮಾಡಿ ಹೆಂಡ್ತಿಗೆ ಟಿಫಿನ್ ಕೊಟ್ಟು ಬಂದೆ ! ಬಾಸು : ನಾಚ್ಕೆ ಆಗಲ್ಲಾ........., ನಾನು ಅಡಿಗೆ ಮಾಡೀ, ಪಾತ್ರೆ ತೊಳೆದು ಬೇಗ ಬರಲ್ವಾ...!!!

೧೦)ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ : 'ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ' ಮಗ 'ಪ್ರಾಮಾಣಿಕತೆ ಎಂದರೆ?' ಅಪ್ಪ 'ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು' ಮಗ 'ಹಾಗಾದರೆ ವಿವೇಚನೆ ಎಂದರೇನು?' ಅಪ್ಪ 'ಮಾತು ಕೊಡದೇ ಇರೋದು' !!

Rating
Average: 5 (1 vote)

Comments