ಬಂಧ

ಬಂಧ

ಮುಳ್ಳಿನ ಮೇಲೆ ಒಣ ಹಾಕಿದ
ಅರಿವೆಯಂತೆ ಈ ಸಂಭಂದ
ಜೋರಾಗಿ ಎಳೆಯುವ ಹಾಗು ಇಲ್ಲ
ಅಲ್ಲೇ ಬಿಡಲು ಸಾಧ್ಯವಿಲ್ಲ

ಬಿಡಿಸ ಬೇಕಿದೆ ನಾನಿಂದು
ಒಂದೊಂದೇ ಮುಳ್ಳುಗಳ
ನಿಧಾನವಾಗಿ ತೋರಬೇಕಿದೆ
ನಾ ನೀ ಬಿಟ್ಟರು
ನಾ ಬಿಡೆನು ಈ ಬಂಧವೆಂದು

ಒಮ್ಮೊಮ್ಮೆ ಆಗಲೂಬಹುದು
ಸಣ್ಣ ಸಣ್ಣ ತೂತಗಳು
ಅಷ್ಟಕ್ಕೆ ಅದೇ ಆಗಬೇಕಾಗಿಲ್ಲ
ಈ ಬಂಧದ ಬಿಡುಗಡೆಗೆ

ಅರಿಯಬೇಕಿದೆ ಮನ
ಒಮ್ಮೆ ಹರಿದರೆ ಅರಿವೇ
ನೀ ಹೊಲಿಯಬಹುದಷ್ಟೇ ಅದನ್ನು
ಮತ್ತೆ ಮೂಡುವುದು ಅಲ್ಲಿ ಸೂಜಿಯ
ತೂತಗಳು ಈ ಬಂಧದಲ್ಲಿ .

Rating
No votes yet