ಕರಾಳ ಭವಿಷ್ಯ ನುಡಿದ ವಿಜಯ ಕರ್ನಾಟಕದ ವ್ಯಂಗ್ಯ ಚಿತ್ರಕಾರ - ಚಂದ್ರ ಗಂಗೊಳ್ಳಿ!

ಕರಾಳ ಭವಿಷ್ಯ ನುಡಿದ ವಿಜಯ ಕರ್ನಾಟಕದ ವ್ಯಂಗ್ಯ ಚಿತ್ರಕಾರ - ಚಂದ್ರ ಗಂಗೊಳ್ಳಿ!

 


chandru_gangolli


ವಿಜಯ ಕರ್ನಾಟಕದಲ್ಲಿ ಚಂದ್ರ ಗಂಗೊಳ್ಳಿಯವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತವೆ.


ಮೊನ್ನೆ ಭಾನುವಾರವೂ ಪ್ರಕಟವಾಗಿತ್ತು. ಯಾವಾಗಲೂ ನೋಡಿ ಓದುವಂತೆ, ನೋಡಿ ಓದಿ ಮುಂದುವರಿದೆ.


ಆದರೆ ಅದ್ಯಾಕೋ ಪುಟ ತಿರುವಿ ಮತ್ತೊಮ್ಮೆ ನೋಡಿದೆ ... ಓದಿದೆ.


ವಿಶೇಷ ಏನೆಂದರೆ, ಚಂದ್ರ ಗಂಗೊಳ್ಳಿ ಆ ದಿನ ನುಡಿದ ಮಾತುಗಳು ದುರದೃಷ್ಟವಶಾತ್ ಸತ್ಯವಾಗಿತ್ತು.


ಒಟ್ಟಾರೆ ಅಂದರೆ, ವಿಮಾನ ದುರಂತ ಆಯ್ತು, ರೈಲ್ವೇ ದುರಂತ ಆಯ್ತು .. ಮುಂದೆ ಬಸ್ ದುರಂತ ಕಾದಿದೆ ಅನ್ನುವುದರ ಮುನ್ಸೂಚನೆ ನೀಡುವಂತಿತ್ತು. ಆಗಲೇ ದೂರದರ್ಶನದ ಹೆಚ್ಚಿನೆಲ್ಲಾ ಸುದ್ದಿ ವಾಹಿನಿಗಳಲ್ಲೂ ಚಳ್ಳಕೆರೆ ಸಮೀಪ ನಡೆದ ಭೀಕರ ಬಸ್ ಅಪಘಾತದ ವರದಿ ಬರುತ್ತಲಿತ್ತು.


ಕೆಲವೊಮ್ಮೆ... ಹಾಸ್ಯವೂ ಎಷ್ಟೊಂದು ಭಯಂಕರವಾಗಿ ನಿಜವಾಗಿ ಬಿಟ್ಟಿರುತ್ತದೆ ಅನ್ನೋದಕ್ಕೆ ಸಾಕ್ಷಿ ಹೇಳುವಂತಿತ್ತು.


ಛೆ! ಇದೆಂತಹ ದುರ್ವಿಧಿ!


- ಆತ್ರಾಡಿ ಸುರೇಶ ಹೆಗ್ಡೆ


 


 


 


 

Rating
No votes yet

Comments