ಮನಸು ಮೌನವಗಿದೆ ಇಂದು
ಕವನಗಳ ಬರೆಯುವ ತವಕ ನನಗಲ್ಲ
ಕವಿಯಂತೆ ಕಲ್ಪನೆಯು ನನಗಿಲ್ಲ
ಮುಂದಿರುವ ಮಧುರ ಮನಸನ್ನು ತಿಳಿಯಹೋದನಲ್ಲ
ಮಾತು ನಿಂತಿದೆ ಇಂದು ಮನವೆ ಮೌನವ ತಾಳಿದೆಯಲ್ಲ!!!
ಕಣ್ಣಂಚಿನಲಿ ನಾ ಕಂಡೆ ಕರಿದಾದ ಕಾಮನಬಿಲ್ಲು
ಆ ಕಾಮನಬಿಲ್ಲಿನಲ್ಲಿ ಕಂಡೆ ನನ್ನದೆ ಕನಸುಗಳ ಅಂದು
ಮರೆಯಾಗಿಹೋಗಿದೆ ಆ ಕಣ್ಗಗಳು ಆ ಕನಸಿನ ನೆನಪುಗಳು
ಮನಸೇ ಮೌನವಾಗಿದೆ ಇಂದು!!!
Rating