"ಅಂಗಡಿಯಲ್ಲಿ ಕನ್ನಡ ನುಡಿ" ಹೊತ್ತಗೆ ಪಡೆದುಕೊಳ್ಳಿ
ಜಾಗ್ರುತ ಗ್ರಾಹಕರು ಎಂಬ ಹೆಸರಿನಲ್ಲಿ "ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮ"ದ ಬಗ್ಗೆ ಸುಮಾರು ಒಂದು ವರ್ಷದಿಂದ ಮೂಡಿಬಂದ ಬ್ಲಾಗುಗಳನ್ನು ನೀವು ನೋಡಿದ್ದೀರಾ. ಬ್ಲಾಗುಗಳ ಮೂಲಕ ಹರಡಿದ ಜಾಗ್ರುತಿಯು ಇನ್ನೂ ಹೆಚ್ಚು ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ ಬನವಾಸಿ ಬಳಗವು "ಅಂಗಡಿಯಲ್ಲಿ ಕನ್ನಡ ನುಡಿ" ಎಂಬ ಕೈಪಿಡಿಯನ್ನು ಇತ್ತೀಚೆಗೆ ಹೊರತಂದಿತು.
ದಿನನಿತ್ಯ ನಾವೆಲ್ಲರೂ ಬಳಸುವ ಉತ್ಪನ್ನಗಳಲ್ಲಿ, ಮಾರುಕಟ್ಟೆಯಲ್ಲಿ ಕನ್ನಡದ ಬಳಕೆ ಎಷ್ಟಿದೆ? ಎಷ್ಟಿರಬೇಕು? ಇಲ್ಲದೇ ಇದ್ದಲ್ಲಿ ಗ್ರಾಹಕರಾಗಿ ನಾವೇನು ಮಾಡಬಹುದು? ಎಂಬ ವಿಚಾರದ ಸುತ್ತಲೂ ಈ ಕೈಪಿಡಿಯನ್ನು ಹೆಣೆಯಲಾಗಿದೆ. ಓದುಗರಿಗೆ ಬೋರ್ ಆಗದಂತೆ, ಸುಲಭವಾಗಿ ಓದಿಸಿಕೊಂಡು ಹೋಗುವಂತೆ, ವ್ಯಂಗ್ಯಚಿತ್ರಗಳ ಮೂಲಕ ಸಂದೇಶ ತಲುಪಿಸುವ ಪ್ರಯತ್ನವನ್ನು ಈ ಕೈಪಿಡಿಯಲ್ಲಿ ಕಾಣಬಹುದಾಗಿದೆ.
ಹೆಚ್ಚು ಜನರು ಬಳಸುವ ಗ್ಯಾಸ್ ಸಿಲಿಂಡರ್ ಮೇಲಿನ ಸುರಕ್ಷಾ ಮಾಹಿತಿ ಜನರ ಭಾಷೆಯಾದ ಕನ್ನಡದಲ್ಲಿಲ್ಲದೇ ಇರುವುದು ಸಾಮಾನ್ಯ ಜನರಿಗೆ ಯಾವ ರೀತಿ ತೊಂದರೆ ಕೊಡುತ್ತಿದೆ ಎಂಬುದನ್ನು ಈ ಕೆಳಗಿನ ವ್ಯಂಗ್ಯಚಿತ್ರ ತೋರಿಸುತ್ತಿದೆ. ಇಂತದೇ ಇನ್ನೂ ಹಲವಾರು ಸನ್ನಿವೇಶಗಳನ್ನು ಕೈಪಿಡಿಯಲ್ಲಿ ನೋಡಬಹುದಾಗಿದೆ.
ಈ ಹೊತ್ತಗೆಯ ಒಂದು ಪ್ರತಿ ಬೇಕಾದಲ್ಲಿ ಈ ಮಿಂಚೆ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಿ: graahaka@gmaildotcom
ಇದುವರೆಗೆ ಜಾಗ್ರುತ ಗ್ರಾಹಕರು ತಂಡವು ತನ್ನ ಮಿಂಚೆ ಅಭಿಯಾನದ ಮೂಲಕ ಹಲವಾರು ಬದಲಾವಣೆಗಳನ್ನು ಸಾಧಿಸಿದೆ. ಕೆಲವು ಕಂಪನಿಗಳ ಹಿಂದಿ ಇಂಗ್ಲಿಷ್ ಜಾಹೀರಾತುಗಳು, ಕೆಲವು ವೆಬ್‍ಸೈಟ್‍ಗಳಲ್ಲಿ ತಪ್ಪು ಮಾಹಿತಿ ಹೀಗೆ ಹಲವೆಡೆ ರಿಪೇರಿಗಳಾಗಿವೆ. ಈ ಕೆಲಸಗಳಲ್ಲಿ ಕೈಜೋಡಿಸಬೇಕೆಂಬ ಆಸೆ ನಿಮಗೂ ಇದ್ದಲ್ಲಿ ಇಲ್ಲಿ ನೊಂದಾಯಿಸಿಕೊಳ್ಳಿ: http://groups.google.com/group/jaagruta_graahakaru?hl=en_US
ಅಥವಾ "ನಿಮ್ಮ ಹೆಸರು, ಮಿಂಚೆ ವಿಳಾಸ, ಇರುವ ಊರು ಮತ್ತು ಫೋನ್ ನಂಬರ್" ವಿವರಗಳನ್ನು ಈ ಮಿಂಚೆ ವಿಳಾಸಕ್ಕೆ ಕಳಿಸಿ: jaagruta_graahakaru-subscribe@googlegroupsdotcom
--
ಪ್ರಿಯಾಂಕ್
(ಜಾಗ್ರುತ ಗ್ರಾಹಕರು)