ತಪ್ಪು ಆಕ್ಸಿಸ್(ದಾರಿ) ಅಲ್ಲಿ ಹೋಗುತ್ತಿರೊ ಆಕ್ಸಿಸ್ ಬ್ಯಾಂಕ್

ತಪ್ಪು ಆಕ್ಸಿಸ್(ದಾರಿ) ಅಲ್ಲಿ ಹೋಗುತ್ತಿರೊ ಆಕ್ಸಿಸ್ ಬ್ಯಾಂಕ್

 

 

ಗೆಳೆಯರೆ,

 

ಮೊನ್ನೆ ಕಾವೇರಿ ಚಿತ್ರಮಂದಿರದ ಬಳಿ ಹಾದಿ ಹೋಗುತ್ತಿದ್ದಾಗ ಒಂದು ದೊಡ್ಡದಾಗಿ ಬರೆಸಿದ ಜಾಹಿರಾತು ನನ್ನ ಕಣ್ಣಿಗೆ ಬಿತ್ತು. ಆಕ್ಸಿಸ್ ಬ್ಯಾಂಕ್ ತನ್ನ ಒಂದು ಮ್ಯೂಚುಯಲ್ ಫಂಡ್ ಬಗ್ಗೆ ತುಂಬಾ ದೊಡ್ಡವಾದ ಪೋಸ್ಟರ್ನಲ್ಲಿ ಬರೆಸಿದ್ದರು. ಅದನ್ನು ನೋಡಿದ ಕೂಡಲೆ ನನಗೆ ಕರ್ನಾಟಕದಲ್ಲಿದ್ದೀನೊ ಅಥವ ಬೇರೆ ರಾಜ್ಯದಲಿದ್ದೀನೋ ಎಂಬ ಸಂಶಯ ಮೂಡಿತು.

 

ಕಾರಣ ಏನಪ್ಪ ಅಂದ್ರೆ, ನೀವೇ ನೋಡುವ ಹಾಗೆ ಜಾಹಿರಾತಿನಲ್ಲಿ ಹಿಂಗ್ಲಿಶ್ ಬಳಸಲಾಗಿದೆ. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೋಳ್ಳುವ ಮೂಲ ಧ್ಯೆಯವನ್ನು ಇಟ್ಟುಕೊಳ್ಳೊ ಈ ಬ್ಯಾಂಕುಗಳು, ಮೂಲ ತತ್ವವನ್ನೆ ಮರೀತಿರೊ ಹಾಗೆ ಕಾಣತ್ತೆ. ಅಲ್ಲಾ ಗ್ರಾಹಕರ ನಾಡಿಯನ್ನು ಹಿಡಿಯುವುದರಲ್ಲೇ ಎಡವಿದರೆ ಹೆಂಗೆ ಅನ್ತೀನಿ. ಇಲ್ಲಿನ ಗ್ರಾಹಕರಿಗೆ ಅನುಕೂಲವಾಗಲೆಂದೇ ನಮ್ಮ ಬಿ.ಬಿ.ಎಮ್.ಪಿ ಅವ್ರೂ ಕೊಡ ಒಂದು ಕಾನೂನು ಮಂಡಿಸಿದ್ದಾರೆ, “ಎಲ್ಲಾ ಜಾಹಿರಾತುಗಳನ್ನೂ ಕನ್ನಡದಲ್ಲೂ ಹಾಕಿಸಬೇಕು” ಅಂತ. ಕಾನೂನನ್ನೂ ಗಾಳಿಗೆ ತೂರಿರುವುದಲ್ಲದೆ ಆಕ್ಸಿಸ್ ಬ್ಯಾಂಕ್ ಈ ರೀತಿಯ ಜಾಹಿರಾತನ್ನು ಹಾಕುವ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವುದರಲ್ಲಿ ವಿಫಲವಾಗಿದೆ. ನನಗನಿಸುವ ಪ್ರಕಾರ ಗ್ರಾಹಕರೆಲ್ಲರೂ ಅವರ ಜಾಹಿರಾತಿನ ಮುಂದೆ ಕನಿಷ್ಟ ೧೫ ನಿಮಿಷಗಳ ಕಾಲ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿ ಅಂತಾನೋ ಯೇನೊ. ಮೇಲಾಗಿ ಕನ್ನಡಿಗರೇ ಹೆಚ್ಚು ಸಂಖ್ಯೆಯಲ್ಲಿರೊ ಬೆಂಗಳೂರಿನಲ್ಲಿ ಯಾರನ್ನ ಮೆಚ್ಚಿಸಲು ಹೊರಟು ನಿಂತಿದ್ದಾರೊ ಗೊತಿಲ್ಲ.

 

ಇಂತಹ ನಡುವಳಿಕೆಗೆ ನಾವು ಸುಮ್ನೆ ಕೂತ್ರೆ, ನಾಳೆ ಕನ್ನಡದ ಬದುಲು ಬೇರೆ ಭಾಷೆ ಎಲ್ಲಾ ಜಾಗದಲ್ಲೂ (ಸರ್ಕಾರಿ ಖಛೇರಿ, ಬಸ್ಸು, ಸಾರ್ವಜನಿಕ ಸ್ಥಳಗಳಲ್ಲಿ ಬೋರ್ಡುಗಳು, ಹೀಗೆ ಪಟ್ಟಿ ತುಂಬಾನೆ ಉದ್ದ) ಬರುವುದು ಖಂಡಿತ. ಇಂತಹ ಪರಿಸ್ಥಿತಿ ಬಂದರೆ ನಮ್ಮ ಮಾರಿಕಟ್ಟೆಯಲ್ಲೇ ನಾವು ಪರದೇಸಿಗಳಾಗುವ ಸಂದರ್ಭ ಎದುರಿಸಬೇಕಾಗುತ್ತದೆ. ಒಂದು ಜಾಹಿರಾತನ್ನು ಅರ್ಥ ಮಡಿಕೊಳ್ಳಲು ನಾವು ಬೇರೆಯವರ ಮೊರೆ ಹೋಗಬೇಕಾದೀತು. ನಾನಂತೂ ಇದನ್ನು ಖಂಡಿಸಿ ಆಕ್ಸಿಸ್ ಬ್ಯಾಂಕಿಗೆ ಒಂದು ಮಿಂಚೆ (ಈ-ಮೇಲ್) ಬರ್ದೇ ಬಿಟ್ಟೆ. ಬನ್ನಿ ನೀವೂ ಈ ಕೆಳಗಿನ ಮಿಂಚೆಗೆ ಒಂದು ದೂರ್ಮಿಂಚೆ ಕಳುಹಿಸಿ.

 

cmt.co@axisbank.com

 

ಇಂತಿ,

ನಂದನ್

Rating
No votes yet