ಮಗುವೆಂಬ ಮುತ್ಸದ್ಧಿತನದ ಧಾರಾವಾಹಿಯು ಸಾವಿನ ನಂತರ ಜೀವನದಂತೆ, ಸ್ವಾನುಭವದಿಂದ ಮಾತ್ರ ಸಾಧ್ಯ!
(೭೬) ಮಗುವು ಎಂತಹ ಮುತ್ಸದ್ಧಿ ಮಾನವಜೀವಿ ಎಂದರೆ, ಮತ್ತೊಂದು ಮಗುವನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಅದರ ನಡವಳಿಕೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ!
(೭೭) ನಾನೆಂದರೆ ನೀವು ಏನೆಂದು ಭಾವಿಸಿದ್ದೀರೆಂದು ನಾನು ಭಾವಿಸಿದ್ಡೇನೋ ಅದು ನಾನಲ್ಲ!
(೭೮) ಕೆಟ್ಟ ಧಾರಾವಾಹಿಗಳು ಇರುವವರೆಗೂ ಜಾಹಿರಾತುಗಳು ಇರುತ್ತವೆ.
(೭೯) ತಮ್ಮನ್ನು ಕೊಲ್ಲಲು ಬಯಸುವವರನ್ನು ಕೊಲ್ಲುವ ಸಲುವಾಗಿ ಸೈನ್ಯಕ್ಕೆ ತೆರಿಗೆ ಮುಖೇನ ಹಣ ನೀಡುವವರನ್ನು ನಾಗರೀಕರೆನ್ನುತ್ತೇವೆ.
(೮೦) ಸಾವಿನ ನಂತರ ಏನಾಗುತ್ತದೆಂದು ತಿಳಿಯಲಿರುವ ಒಂದೇ ಒಂದು ಮಾರ್ಗವೆಂದರೆ ಅದರ ಪ್ರಾಥಮಿಕ ಅನುಭವ ಪಡೆಯುವುದಾಗಿದೆ!
Rating