ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ಹೊರತುಪಡಿಸಿದ ಸುದ್ಧಿಯಾಗುತ್ತದೆ!
(೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?!
(೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್‍ಕ್ಲಬ್ ಎನ್ನುತ್ತೇವೆ!
(೮೩) ಬದುಕಿಗೊಂದು ಗುರಿ ಇರಬೇಕು. ಅಸಂಗತವಾದ ಬದುಕನ್ನು ಹೇಗೆ ಎದುರಿಸಬೇಕೆಂಬ ಪರಿಹಾರ ಕಂಡುಕೊಳ್ಳುವ ಗುರಿಯಾಗಿರಬೇಕು ಅದು!
(೮೪) ನಮ್ಮ ಮನೆಯ ಆಗುಹೋಗುಗಳನ್ನು ಮಾತ್ರ ಬದಿಗಿರಿಸಿ ಜಗತ್ತಿನ ವ್ಯವಹಾರಗಳಿಗೆ ಕಣ್ತೆರೆದು ಕೂರುವ ತಂತ್ರವನ್ನು ದೂರದರ್ಶನ ಎನ್ನುತ್ತೇವೆ.
(೮೫) ನಿಮಗೇನಾದರೂ ಯಾವಾಗಲಾದರೂ ಗುಂಡು ತಗುಲಿದರೆ, ನಿಮಗೆ ಶುಭಾಶಯಗಳು! ಜಗತ್ತಿನಲ್ಲಿ ಒಬ್ಬರಾದರೂ ತಮ್ಮ ಗಮನವನ್ನು ಆಕಸ್ಮಿಕವಾಗಿಯೋ ಅಥವ ಮಾರಣಾಂತಿಕವಾಗಿಯೋ ನಿಮ್ಮೆಡೆ ’ಕೇಂದ್ರೀಕರಿಸಿದ್ದಾರೆ’ ಎಂದರ್ಥ!
Rating
Comments
ಉ: ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ...