ಪ್ರಸಾದನದ ಹಿಂದಿನ ಮುಖದ ಖಿನ್ನತೆಯ ದಿನಚರಿಯನ್ನು ಕಲಾವಿದೆ ಸ್ವಾದಿಷ್ಟಗೊಳಿಸಬಲ್ಲಳು!
(೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ.
(೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವುದನ್ನು ನಿಲ್ಲಿಸುವುದು. ಇದನ್ನು ಕುರಿತು ಚಿಂತಿಸಿ ನೊಡಿ!
(೮೮) ದಿನಚರಿ ಬರೆಯುವುದೆಂದರೆ ನಿನ್ನೆಯ ದಿನವನ್ನು ನಾಳೆ ಮತ್ತೆ ಬದುಕುವ ಅವಕಾಶವನ್ನು ಪಡೆದುಕೊಳ್ಳುವುದು!
(೮೯) ಹೆಣ್ಣೊಬ್ಬಳು ಕಲಾವಿದೆಯಾದರೆ ಆಕೆ ಮಹಿಳಾ-’ಕಲಾವಿದೆ’ಯಾಗುತ್ತಾಳೆ. ತದ್ವಿರುದ್ಧವಾಗಿ ಗಂಡು ಕಲಾವಿದನಾದರೆ ಆತ ಕೇವಲ ’ಕಲಾವಿದ’ನಾಗುತ್ತಾನೆ. ಆ ಕಲಾವಿದನೊಳಗಿನ ಗಂಡು ಮಂಗಮಾಯವಾಗುತ್ತಾನೆ!
(೯೦) ಅದರೊಳಗೇ ಅಡಗಿಕೊಂಡಿರುವ ’ಸ್ವಾದ’ವನ್ನು ಗುರ್ತಿಸಿದಾಗಲೇ ಖಿನ್ನತೆ ಉಂಟಾಗುವುದು! ವಿನಾಕಾರಣ ವೈದ್ಯರು ಅದನ್ನೊಂದು ’ಖಾಯಿಲೆ’ಯೆಂದು ಗುರ್ತಿಸದಿದ್ದರೆ ಅವರಿಗೆ ವೃತ್ತಿಪರವಾದ ಖಿನ್ನತೆ ಉಂಟಾಗಿಬಿಡುತ್ತದೆ!
Rating