ಕರ್ನಾಟಕದಲ್ಲಿ ಬಂಡವಾಳ + ಉದ್ದಿಮೆ ===> ಕನ್ನಡಿಗರಿಗೆ ಕೆಲಸ

ಕರ್ನಾಟಕದಲ್ಲಿ ಬಂಡವಾಳ + ಉದ್ದಿಮೆ ===> ಕನ್ನಡಿಗರಿಗೆ ಕೆಲಸ

ಬರಹ

ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ ೩ ಮತ್ತು ೪ ರಂದು ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ನಡೀತಿದೆ. ನಾನಾ ಕಂಪನಿಗಳು ಓಟ್ಟಾರೆಯಾಗಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹಾಕ್ತಿದ್ದಾರೆ.
ಪ್ರತಿಯೊಬ್ಬ ಹೂಡಿಕೆದಾರನೂ ಸಾವಿರಾರು ಕೋಟಿಯಷ್ಟು ಬಂಡವಾಳ ಕರ್ನಾಟಕದಲ್ಲಿ ಹಾಕ್ತಿದ್ದಾರೆ ಅಂದರೆ ಅದರ ಅರ್ಥ ಏನು?
ನಮ್ಮ ಊರು, ನಮ್ಮ ಜನ, ನಮ್ಮ ನಿಸರ್ಗ, ನಮ್ಮ ವಾತಾವರಣ ಅತ್ಯಂತ ಶ್ರೇಷ್ಠ ಅಂತ ತಾನೆ?
ಇದು ಬೆಂಗಳೂರಿನ ಜೊತೆ ನಮ್ಮ ಇತರೆ ಜಿಲ್ಲೆಗಳನ್ನು, ಸಮಗ್ರ ಕರ್ನಾಟಕವನ್ನೂ ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಈ ಉದ್ದಿಮೆಗಳು ಕರ್ನಾಟಕದಲ್ಲಿ ಸ್ಥಾಪನೆ ಆಗುತ್ತಿರಿವುದರಿಂದ ಕನ್ನಡಿಗರಿಗೆ, ಈ ಮಣ್ಣಿನ ಮಕ್ಕಳಿಗೆ ಅನುಕೂಲವಾಗಬೇಕು ಅನ್ನೋದು ಸಹಜ ಧರ್ಮವಲ್ವಾ?
ಹಾಗಾಗಿ ನಮ್ಮ ಸರ್ಕಾರಕ್ಕೆ ಇರುವ ದೊಡ್ಡ ಜವಾಬ್ದಾರಿ ಅಂದ್ರೆ "ಸರೋಜಿನಿ ಮಹಿಷಿ" ವರದೀನಾ ಅನುಷ್ಠಾನ ಮಾಡೋದು. ಕನ್ನಡಿಗರಿಗೆ ಕೆಲಸ, ಕರ್ನಾಟಕ ಸರ್ಕಾರಕ್ಕೆ ಆದಾಯ ಬರುವುದಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಏಳಿಗೆ ಆಗುತ್ತದೆ.
ಇಲ್ಲದಿದ್ದರೆ ಸದ್ಯದ ಐ.ಟಿ ಕ್ಷೇತ್ರ ದಲ್ಲಿ ಆಗಿರೋ ತರ ವಲಸಿಗರ ಸಂಖ್ಯೆ ವಿಪರೀತ ಆಗುತ್ತದೆ.
ಒಂದೊಳ್ಳೆ ವಲಸೆ ಕಾಯಿದೆನ ರೂಪಿಸೋದು ಹಾಗು ಸರೋಜಿನಿ ಮಹಿಷಿ ವರದಿಯ ಅನುಷ್ಠಾಮ ತಕ್ಷಣ ಆಗಬೇಕು ಅನ್ನುವುದು ಪ್ರತಿಯೊಬ್ಬ ಕನ್ನಡಿಗನ ಮನದಾಳದ ಮಾತು.


 ತಾವುಗಳು ಬಂಡವಾಳ ಹೂಡಿಕೆಯಿಂದ ಕನ್ನಡಿಗರ ಬದುಕಿಗೆ ಒಳ್ಳೆಯದಾಗಬೇಕೆಂದು ಪತ್ರ ಬರೆರು ಆಗ್ರಹಿಸಿ. ಮತ್ತು ಹೀಗೆ ಮಾಡಲು ತಮ್ಮ ಸ್ನೇಹಿತರನ್ನು ಸಹ ಒತ್ತಾಯಿಸಿ.


 1. B S Yediyurappa - cm@kar.nic.in


2. Karnataka Udyoga Mitra, M.D. --> md@kumbangalore.com


3. Commissioner, Directorate of Industries & Commerce
    -->  commissioner@karnatakaindustry.gov.in
 4. Principal Secretary, Commerce & Industries Department
    -->  prs_ci@karnataka.gov.in