ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

(೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ!


(೯೨) ನಾವಿಬ್ಬರೂ ಪರಸ್ಪರ ಅಪರಿಚಿತರಾದರೂ ಸಹ, ಇದನ್ನು ಸಾವಿರ ವರ್ಷದ ನಂತರ ನೀವು ಓದಿದರೂ ಸಹ, ನಮ್ಮಿಬ್ಬರ ಸಂಬಂಧವು ಹದಿನಾರು ಪದಗಳ ಹಿಂದೆ ಪ್ರಾರಂಭಗೊಂಡಿದೆ. ಹಲೋ!


(೯೩) ಸ್ಪೂರ್ತಿ ಅನ್ನುವುದರ ವ್ಯಾಖ್ಯೆ ಬರೆಯಲು ಕಾಯುತ್ತಿದ್ದೇನೆ...


(೯೪) ಸರಿಯಾಗಿ ತೊಡಗಿಸಿಕೊಳ್ಳದೆ ದೊರಕಿದ ಸಾಫಲ್ಯವು ಸೋಲು. ಅಪೂರ್ಣವಾದರೂ ಯೋಜನೆಯೊಂದರ ಮನಃಪೂರ್ವಕ ಅನುಷ್ಠಾನವೇ ಗೆಲುವು!


(೯೫) ಸೀರೆಯೊಂದು ದೇಹದ ಅನಗತ್ಯ ಭಾಗಗಳನ್ನೆಲ್ಲ ಮುಚ್ಚುತ್ತದೆ. ಮತ್ತು ಮುಚ್ಚಿರುವ ಅಂಗಗಳು ತಮಗಿಂತಲೂ ಅರ್ಥಪೂರ್ಣವೆಂದು ಸೂಚಿಸುವ ಅಂಗಗಳನ್ನು ಬಿಚ್ಚಿಡುತ್ತವೆ ಅವು!


 


 

Rating
No votes yet