ಮ೦ಜು ಮುಸುಕಿದ ಮಬ್ಬು...

ಮ೦ಜು ಮುಸುಕಿದ ಮಬ್ಬು...

ಶಿಖರದ ಮೇಲೆ  ನಿ೦ತು ಒಮ್ಮೆ


ಕೆಳಗೆ ಕಣ್ಣು ಹಾಯಿಸಿದಾಗ


ಕ೦ಡದ್ದು ನನಗೊ೦ದು ಮಹಾಪ್ರಪಾತ!


ಮನುಜರ ನಡುವಿನ ಬೀಭತ್ಸ ಹೋರಾಟ! 


ನೆತ್ತರ ನದಿಯ ಭೋರ್ಗರೆತ!


ಮೂಗಿಗೆ ಬಡಿದದ್ದು


ನೆತ್ತರ ಕಮಟು ವಾಸನೆ!


ಶವಗಳ ಸಾಲು ಸಾಲು!


ತನಗಾಗಿ, ತನಗಲ್ಲದ್ದಕ್ಕಾಗಿ


ಕಣ್ಣೀರು ಸುರಿಸುವ ಧರೆ!


ನೆತ್ತರ ನಡುವೆ ಅಡಗಿಹ


ಕಣ್ಣೀರ ಬಿ೦ದುಗಳು!  


ಶಿಖರ ಮುಟ್ಟುವ ತವಕದಲಿ


ತಳವನೇ ಕೊರೆದ ಆಸೆ-ಆಕಾ೦ಕ್ಷೆಗಳು!


ನಾನು-ನನ್ನದೆ೦ಬ ಹುಸಿ ನಿರೀಕ್ಷೆಯಲ್ಲಿ


ವ್ಯಾಪ್ತಿಯನರುಹುತಿಹ ಗಡಿರೇಖೆಗಳು!


 


ಎಲ್ಲಿ ಹೋದವು ಮಾನವೀಯತೆಯಿ೦ದ


ಮಿಡಿಯುವ ಹೃದಯಗಳು?


ಪ್ರತಿ ಮು೦ಜಾವಿನ ಅರುಣ ಕಿರಣಗಳಲಿ


ಹೊಸತೊ೦ದನ್ನು ಹುಡುಕುವ ತವಕ!


ಎಲ್ಲಿಹುದು ಬಾಳಿನ ದಾರಿದೀಪವಿ೦ದು?


ಒಮ್ಮೆಯಾದರೂ ಕ೦ಡೇನೇ  ಮ೦ದಹಾಸದ


ಶಾ೦ತ ಮುಖ ಮುದ್ರೆಯನು?


ಮ೦ಜು ಮುಸುಕಿದ ಮಬ್ಬಿನಲಿ


ಕೈ ಹಿಡಿದು ನಡೆಸುವ ಆ ನ೦ಬಿಕೆಯನು?

Rating
No votes yet

Comments