ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.

 

ಇದೆಲ್ಲ ಇರಲಿ. ಹೆಚ್ಚು ಬರೆಯಕ್ಕಾಗದಿದ್ರೇನಂತೆ- ಒಂದು ನಾಕು ಒಳ್ಳೇ ಹಾಡುಗಳನ್ನಾದರೂ ಕೇಳಬಹುದಲ್ಲ ಈ ಸಮಯದಲ್ಲಿ ಅನ್ನಿಸಿತು. ಅದಕ್ಕೇ ನನ್ನ ಕಂ(ಇಂ)ಗ್ಲಿಷ್ ಬ್ಲಾಗಿನಲ್ಲಿ ಬರೆದ ಒಂದು ಪುಟಾಣಿ ಬರಹಕ್ಕೆ ಇಲ್ಲಿಂದ ಕೊಂಡಿ ಹಾಕಿದೇನೆ. ಆಸಕ್ತರು ಈ ಕೆಳಗಿರುವ ಕೊಂಡಿಯನ್ನು ಚುಟುಕಿಸಿ, ಹೋಗಿ, ಕೇಳಿ ಸಂತೋಷಿಸಿ.

 

ಗಾನಮೂರ್ತಿ - ಕೃಷ್ಣಾಷ್ಟಮಿಯ ಸಮಯಕ್ಕಿಷ್ಟು ಹಾಡುಗಳು.

 

ಎಲ್ಲರಿಗೂ ಕೃಷ್ಣಾಷ್ಟಮಿ ಚೆನ್ನಾಗಿ ಕಳೆಯಲೆಂಬ  ಹಾರೈಕೆಗಳು.

 

-ಹಂಸಾನಂದಿ

Rating
No votes yet