ನಾವಿಕ ನಾನು, ಹಾಯಿದೋಣಿ ನೀನು...

Submitted by vishwanath B. H on Tue, 07/31/2012 - 09:55
ಬರಹ

ಯಾವ ರಾಗದಲ್ಲಿ ನನ್ನ ಹೃದಯಗೀತೆ ಹಾಡಲಿ.

ಮನಸು ತು೦ಬಾ ನೀನಿರಲು ಹೇಗೆ ಚಿತ್ರ ಬಿಡಿಸಲಿ.

ಬೆರಳ ಬೆಸುಗೆಯ ಕಾವು

ತಿಳಿಯುವ ಮೊದಲೇ

ಕ೦ಪಿಸಿ ನಾಚಿದ ತರುಣಿ ನೀನು

 ಕ್ಷಣದ ನಿನ್ನನ್ನು 

ಮನಸು ಚಿತ್ರಿಸುವ ಮೊದಲೆ

ನಿ೦ತು ಹೋದ ಸಮಯದ೦ತಾದೆ ನಾನು.

 

ದೊಡ್ಡ ಮನೆಯ ನಡುವಿನ

ಪುಟ್ಟಕೋಣೆಯಲ್ಲಿ ನಾವು.

ಮನೆಯ ತು೦ಬಾ

ಪ್ರಣಯ ಪಿಸುಮಾತುಗಳ ನಲಿವು.

ಯವ್ವನದ ಬಿಸಿಉಸಿರಲ್ಲಿ

ಉಸಿರುಕಟ್ಟಿ ಜೀವಿಸುತಿರಲು,

ನೆನಪಾಯಿತು ಮೊದಲ ನಾಚಿಕೆಯ ಪರಿ.

ಸಮುದ್ರ ಮಧ್ಯೆ ಈಜು ಬಾರದ

ನಾವಿಕನ೦ತಾದೆ ನಾನು.

ಮುಳುಗಿಸದೆ, ನಿನ್ನ ಮಡಿಲಲ್ಲಿ

ದಡ ಸೇರಿಸಿದ ಪುಟ್ಟ ಹಾಯಿದೋಣಿ ನೀನು.