ನಡೆ ನನ್ನೊಂದಿಗೆ

Submitted by Manjula N Harihar on Tue, 07/31/2012 - 15:31
ಬರಹ

ನಡೆ ನನ್ನೊಂದಿಗೆ


ಗುರಿಯಿರದ ಈ ಮನಸ್ಸು ಹರಿದಿತ್ತು ಎತ್ತೆತ್ತಲೋ
ಕಾನನದ ಕತ್ತಲೆಯ ಹರುವಿನಲಿ ಕಳೆದಿತ್ತು


ಜ್ಞಾನದ ದೀಪವನ್ಹಿಡಿದು ಬಂದೆ ನೀ ಹುಡುಕುತ್ತ
ಚೆಲ್ಲಿದೆ ಬೆಳಕನ್ನು ಬಾಳೆಂಬ ಹಾದಿಯಲಿ


ಆಶೆ ನಿರೀಕ್ಷೆಗಳ ಅಂದಕಾರದಲಿ ಮಿಂದ ಮನಕ್ಕೆ
ಬಾಳಿನ ಗುರಿಯನು ಅರಿಯುವ ಹಾದಿಯು ತಿಳಿದಿಲ್ಲ ಗೆಳೆಯ


ನನ್ನ ಮನದ ಕನ್ನಡಿಯಾಗಿ ತೋರಿದೆ ಗುರಿಯನ್ನ
ಜೊತೆ ಜೊತೆಯಾಗಿ ನಡೆ ನನ್ನೊಂದಿಗೆ ಗುರಿ ತಲುಪುವ ಕಡೆಗೆ


ಮಂಜುಳಾ ಏನ್ ಹರಿಹರ್- Copyright©

Comments