ಕವನಗಳು

ವಿಧ: ಕವನ
June 05, 2024
ಒಂದು ಕಾಲದಿ ಮೆರೆದ ಮನೆಯಿದು ಚಂದ ಪ್ರಕೃತಿಯು ಸುತ್ತಲು ಬಂಧು ಬಳಗವು ಸೇರಿ ನಲಿದಿಹ ಬಂಧ ಬೆಳೆಸಿದ ದೇಗುಲ   ಹೆಂಚು ಹಾಸಿದ ಸೂರು ಮೇಲ್ಗಡೆ ಅಂಚು ಸುಂದರ ಕಂಡಿದೆ ಸಂಚು ಮತ್ಸರವಿರದ ತಾಣವು ಕೊಂಚ ಹಳೆಯದು ಇಂದಿಗೆ   ಎಷ್ಟು ಮಂದಿಯ ಜನನವಾಯಿತು ಇಷ್ಟು ಚಂದದ ಮನೆಯಲಿ ಕಷ್ಟವಾದರು ಜೊತೆಯಲಿದ್ದರು ನಿಷ್ಠೆಯಿದ್ದಿತು ಬಾಳಲಿ   ಮಾಡು ನಾಲ್ಕಿದೆ ಬಹಳ ಸುಂದರ ಮೂಡು ದಿಕ್ಕಿಗೆ ಮುಖವಿದೆ ನೋಡುತಿದ್ದರೆ ಮನವ ಸೆಳೆವುದು ಬೀಡು ಪರಿಸರ ನಡುವಿದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
June 04, 2024
ಹೂಮಾಲೆ ಹಾಕುವೆನಯ್ಯ ಶ್ರೀಗಂಧ ಹಚ್ಚುವೆನಯ್ಯ ತುಪ್ಪದ ದೀಪವನು ಹಚ್ಚಿ ಆರತಿ ಯನು ಬೆಳಗುವೆ ನಯ್ಯ "ರಾಮ ಶ್ರೀ ರಾಮ ರಾಮ ರಘು ರಾಮ "   ನಿನ್ನ ಕಂಡ ಒಡನೆ ತಂದೆ ಸ್ವರ್ಗವಾಯ್ತು ಭೂಮಿಯು ಇಂದೇ ಕಣ್ಣ ನೀರ ಹನಿಯೂ ಕೂಡ ಪುಷ್ಪವಾಗಿ ತಾನು ಜಾರಿತಯ್ಯ "ರಾಮ ಶ್ರೀ ರಾಮ ರಾಮ ರಘುರಾಮ"   ಕಂಡೆ ನಿನ್ನ ಕಂಗಳಲ್ಲಿ ಮುಕ್ತಿ ನೀಡೋ ಬೆಳಕಾ ನಾನು ಭಕ್ತಿಯಿಂದ ಬೇಡಿ ಕೊಂಬೆ ಬಾರೋ ಬೇಗನೆ ತಂದೆ "ರಾಮ ಶ್ರೀ ರಾಮ ರಾಮ ರಘುರಾಮ "   ನನ್ನದೊಂದು ಕೂರಿಕೆ ದೇವ ಕೇಳಲೊಮ್ಮೆ ಬಾರೋ ನೀನು ಕಂದನಾಗಿ ಹುಟ್ಟು ಒಮ್ಮೆ…
ವಿಧ: ಕವನ
June 03, 2024
ಸೂತ್ರವನರಿಯೆನು ಕವನವ ರಚಿಸಲು ರಾತ್ರಿಯ ಕಾನನ ಪಯಣವಿದು ಮಾತ್ರೆಯು ಗಣಗಳು ಲೋಹದ ಕಡಲೆಯು ನೇತ್ರದಿ ತುಂಬಿದೆ ಕಂಬನಿಯು   ಬರೆಯುವ ಗೀತೆಗೆ ವಿಷಯವನರಸಲು ಕೊರತೆಯು ನನ್ನನು ಕಾಡುತಿದೆ ದೊರೆಯದೆ ಹೋಯಿತು ಕವನಕೆ ಪದಗಳು ಕರುಣೆಯ ವಾಣಿಯು ಹರಿಯಿಸದೆ   ಶಾರದೆ ಹರಸಿರೆ ಕವನಗಳುದಿಪವು ಬಾರದು ಪದಗಳ ಬರಗಾಲ ತೋರಲಿ ದಯೆಯನು ಅಕ್ಷರ ಮಾತೆಯು ಕೋರುವೆ ಪೂಜಿಸಿ ಚರಣಗಳ   ಎಲ್ಲಾ ಕಲೆಗಳ ದಾತೆಸರಸ್ವತಿ ಗೆಲ್ಲಿಸಿ ಬಿಡುವಳು ಲೋಕದೊಳು ಸಲ್ಲುವ ಮಂದಿಯನಾರಿಸಿ ಕೊಡುವಳು ಬಲ್ಲವರೀನುಡಿ ನುಡಿಯುವರು||   -…
ವಿಧ: ಕವನ
June 02, 2024
ಪ್ರವೀಣ!  ಜನಪ್ರಿಯ ಗಾದೆ- ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ...   ಇದನ್ನು ಅಕ್ಷರಶಃ ಸಾಧಿಸಿದವನೇ ನಮ್ಮೂರ ರಾಜಕೀಯ ಪ್ರವೀಣ! *** ಚಾಪ್ಲಿನ್-ಉವಾಚ  ಸುರಿವ ಮಳೆಯೊಳಗೆನ್ನ ನಿಲ್ಲಿಸಿಬಿಡು- ಮಳೆಯ ಜೊತೆಗೆ ಕಣ್ಣೀರ ಹನಿಗಳನೂ ಸುರಿಸಿಬಿಡುವೆ...   ಈ ಜಗದ ಜನಕೆ ಅದು ಗೊತ್ತಾಗದಿರಲಿ; ಆ ಮಳೆ ನಿಂತೊಡೆನೆಯೇ ನಾ ನಕ್ಕುಬಿಡುವೆ! *** ಏಕ ಪತ್ನೀ ವೃತಸ್ಥ... ಸೀತೆಯನು ಕಾಡಿಗಟ್ಟಿ ಪರೀಕ್ಷೆಗೊಳಪಡಿಸಿದರೂ ಆದನು ಶ್ರೀರಾಮ ಪುರುಷೋತ್ತಮ...   ರಾವಣನನ್ನು ಕೊಂದದ್ದಕ್ಕಲ್ಲ; ಸದಾಚಾರ ಸಂಪನ್ನ ಏಕ…
ವಿಧ: ಕವನ
June 01, 2024
ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು   ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲೆ ಕಾಡಿದ ನೋವುಗಳೆ   ದಿನಗಳು ಉರುಳಿದೆ ಬಾಗಿಲು ತೆರೆದಿದೆ ಇಂದಿಗೆ ಮುಗಿಯಿತು  ವನವಾಸ ಕಲರವದೊಂದಿಗೆ ಸಿಗಲಿದೆ ಶಾಲೆಗೆ ಹೂಮನ ಮಕ್ಕಳ ಸಹವಾಸ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
May 31, 2024
ಇಲ್ಲಿದೆ ಷಣ್ಮುಖ ದೇವಾಲಯ ಅನುವಾವಿಯಲ್ಲಿರುವ ಕಾರ್ತಿಕೇಯ ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/   ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ ಮೆಟ್ಟಿಲನು ಏರುತ್ತ ತುದಿ ಸೇರಬೇಕು ಮನದೊಳಗೆ ಬತ್ತದಿಹ ಭಕ್ತಿ ಇರಬೇಕು/   ಸಂಜೀವಿನಿ ಬೆಟ್ಟ ಹೊತ್ತಿರಲು ಹನುಮ ಗಗನದಲಿ ಸಂಚಾರ ಅವಸರದ ಯಾನ ಬಾಯಾರಿ ಬಳಲಿರಲು ಬೇಡಿದನು ಹನುಮ ಶ್ರೀ ಕುಮಾರ ಸ್ವಾಮಿಯನು ಜಪಿಸುತ್ತ ಜಲವ/   ಷಣ್ಮುಖನು ಆಯಧವ ನೆಲಕೊಮ್ಮೆ ಕುಕ್ಕಿ…
ವಿಧ: ಕವನ
May 30, 2024
ನೆರಳನು ನೀಡುವ ಸೂರನು ನೆನೆವುದು ಹೊಣೆಯದು ನಮ್ನದು ತಪ್ಪಲ್ಲ ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ ರಕ್ಷಣೆ ಕೊಡುವುದು ನಮಗೆಲ್ಲ   ಸೂರಿಗೆ ನಮಿಸುತ ತಳವನು ಮರೆತರೆ ಈ ನಡೆ ಎಂದುಗು ಸರಿಯಲ್ಲ ನೆಲೆಸಲು ಭದ್ರದ ತಳವನು ಮರೆತರೆ ದೇವರು ನಮ್ಮನು ಕ್ಷಮಿಸಲ್ಲ   ಪೀಠವನೂರಿದ ನೆಲವದು ಕುಸಿಯದೆ ರಕ್ಷಿಸುತಿರುವುದು ತಳಪಾಯ ನೆರಳನು ನೀಡುವ ಅಮ್ಮನ ಜೊತೆಯಲಿ ಬದುಕನು ನೀಡುವ ಅಪ್ಪಯ್ಯ   ಬಾಳಿಗೆ ಭದ್ರಬುನಾದಿಯ ನೀಡುವ ಅಪ್ಪನು ಬದುಕಿನ ಆಧಾರ ಅಪ್ಪನು,ಅಮ್ಮನು ಹರಸಿದರಾದರೆ ಗೆಲುವಿನ ಹಾಡಿಗೆ ಶ್ರೀಕಾರ…
ವಿಧ: ಕವನ
May 29, 2024
೧. ಅವನು ಅಂದುಕೊಂಡಿದ್ದ ತಾನೊಂದು ಆಲದ ಮರ! ಈಗ ಗೊತ್ತಾಗಿದೆ ತಾನು ಹಾಳಾದ ಮರ!! ೨. ಅಳೆದೂ ತೂಗಿ ಬದುಕಿದರೆ  ಒಂದು ಚಂದ! ಲೆಕ್ಕ ತಪ್ಪಿ ನಡೆದರೆ  ಎತ್ತಬೇಕು ಚಂದಾ!! ೩. ದೇವರ ಭಯವಿಲ್ಲದವನ ಬದುಕು  ಭೂಮಿಯಲ್ಲೇ ನರಕ! ಎಲ್ಲಿ ನಡೆದರೂ ಮನುಜನಿಗೆ ನೋವಿನದೇ ಎರಕ!! ೪. ವಿಧಿಯಾಡಿಸುವಾಗ ಸುಮ್ಮನಿರು ಸೋತು! ಅಧಿಕಾರ ತೋರಿಸಿದೆಯೋ ನಿನ್ನ ಕಥೆ ಮುಗೀತು!! ೫. ಅವನು ಕರುಣಿಸದಿರುವ ಯಾವುದೇ  ಪದವಿಗೆ ಬೆಲೆಯಿರದು..! ಅನುಗ್ರಹಿಸಲ್ಪಡದಿರುವುದು ಎಂದಿಗೂ ಬಳಿಯಿರದು!! ೬. ನೋವು ಎಲ್ಲರದೂ ಒಂದೇ!…
ವಿಧ: ಕವನ
May 28, 2024
ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ ಭಾವ ತುಂಬಿದ ಮನದೊಳು ದೇವ ಕನ್ನಿಕೆಯಂಥ ಚೆಲುವಿಕೆ ಕಾವರಿಲ್ಲವೆ ನಾಡೊಳು   ಕೊರಳು ಬಳಸಿದ ದಾರ ಹೊಂದಿದೆ ಕರದಿ ನುಡಿಸುವ ಮದ್ದಳೆ ಕರವನೊಂದನು ಮೇಲಕೆತ್ತಿದೆ ಶಿರದ ಹಿಂಬದಿ ಹಿಡಿದಳೆ   ಹಸಿರು ಲತೆಗಳು ಸುತ್ತುವರಿದಿವೆ ಕುಸುಮ ಕೋಮಲೆ ಬಾಲೆಯ ಮಸುಕುಗೊಳಿಸಿದೆ ಶಿಲ್ಪದಂದವ ಹೊಸಕಿ ಹಾಕದೆ ಬಿಡುವುದೆ?   ಸೊರಗತೊಡಗಿದೆ ಕಾವರಿಲ್ಲದೆ ಮರುಕ ತರಿಸುವ ತರವಿದೆ ಕರಗಿ ಹೋಗುವ ಮುನ್ನ ರಕ್ಷಿಸಿ ಪೊರೆವ ಮಂದಿಯ ಕಾಣದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
May 27, 2024
ಏಕೆ ಸಿಟ್ಟು ಮಳೆ ರಾಯ ಧರೆಯ ಮೇಲೆ ಉಳಿಯುವುದೇ ಪ್ರಾಣಿಗಳು ಭುವಿಯ ಮೇಲೆ ದಯೆತೋರಿಸಿ ಬಾ ನೀನು ಇಳೆಯ ಮೇಲೆ ಹಸಿರಾಗಿಸು ಒಮ್ಮೆ ನೆಲದ ಮೇಲೆ   ಬತ್ತಿ ಹೋಗುತಿವೆ ನದಿಗಳೆಲ್ಲಾ ಮತ್ತೆ ಬಾಗುತಿವೆ  ಮ಼ಗಗಳೆಲ್ಲಾ ಮೆತ್ತಗಾಗುತಿವೆ ಸಸಿ ಗಳೆಲ್ಲಾ ಅತ್ತು ಕರೆಯುತಿವೆ ಜೀವಿ ಗಳೆಲ್ಲಾ   ಹೊಸ ವರುಷ ಬಂದರೂ ಹರುಷವಿಲ್ಲ ಕಸವೆ ತುಂಬಿದೆ ಬುವಿಯಲೆಲ್ಲಾ ಹಸುನೀಗುತಿವೆ ದನಕರು ಗಳೆಲ್ಲಾ ತುಸು ಮುನಿಸು ಮಾಡದೇ ನೀ ಬರಬೇಕಲ್ಲ -ಕೆ. ವಾಣಿ ಚಿತ್ರ ಕೃಪೆ: ಇಂಟರ್ನೆಟ್ ತಾಣ