ಕವನಗಳು

ವಿಧ: ಕವನ
May 26, 2024
ಚಿಂದಿಯನಾರಿಸಿ ಬದುಕುವ ಬಾಲಕ ನೊಂದಿಹ ಕಂಬನಿ ಕಣ್ತುಂಬ ಬಂದನು ಕನ್ನಡಿ ಎದುರಲಿ ನಿಂದನು ಕಂಡನು ಕಲ್ಪಿತ ಪ್ರತಿಬಿಂಬ   ಬಣ್ಣದ ಕನಸಿಗೆ ರೆಕ್ಕೆಯು ಮೂಡಿದೆ ತನ್ನನೆ ಕಲ್ಪಿಸಿ ದರ್ಪಣದೆ ಸಣ್ಣನೆ ನೋವಿನ ನಡುಕವು ತನುವಲಿ ಬಣ್ಣನೆಗೆಟುಕದ ಮಿಡಿತವಿದೆ   ಬಡವನ ಬಾಳಲಿ ಬರವಿದೆ ತಿನಿಸಿಗೆ ಗಡಿಯನು ಮೀರಿದ ಕನಸುಗಳು ದಡವನು ಸೇರಲು ನೌಕೆಯು ದೊರೆವುದೆ ತುಡಿತವು ತುಂಬಿದ ಬಯಕೆಗಳು   ಹಣೆಯಲಿ ಪದವಿಯು ಬರೆದಿಹುದಾದರೆ ಕನಸಿನ ಕದಗಳು ತೆರೆಯುವುದು ಮನದಲಿ ಮೂಡಿದ ವಿದ್ಯೆಯ ದೊರೆತರೆ ತನುಮನ ನೆಮ್ಮದಿ…
ವಿಧ: ಕವನ
May 25, 2024
ಮದವೂರ ಗಣಪತಿ ದಯೆದೋರು ವರನೀಡು ನೀ ಶ್ರೀಮದವೂರ ಗಣಪತಿ ದಯೆದೋರು||ಪ||   ಚರಣದೆ ಮಣಿದಿಹೆ ಜಗದೋದ್ದಾರನೆ ಮಾಡುತಲಿರುವೆನು ನಿನ್ನಾರಾಧನೆ ಕರಿಮುಖ ಗಣಪಗೆ ಭಕ್ತಿಯ ವಂದನೆ ಮಾಡಿಸು ನನ್ನಲಿ ಉತ್ತಮ ಸಾಧನೆ   ಸಿದ್ಧಿಯ ಕರುಣಿಸು ಸಿದ್ಧಿವಿನಾಯಕ ಬುದ್ಧಿಯ ಕರುಣಿಸು ಬುದ್ಧಿಪ್ರದಾಯಕ ವಿದ್ಯೆಯ ಕರುಣಿಸು ವಿದ್ಯಾದಾಯಕ ಸದ್ಗುಣ ಕರುಣಿಸು ಗಣಗಳ ನಾಯಕ||೧||   ಮೋದಕ ಪ್ರಿಯನಿಗೆ ಮೋದಕವಿರಿಸಿದೆ ತುಪ್ಪದಿ ಮಾಡಿದ ಅಪ್ಪವನಿರಿಸಿದೆ ಚಕ್ಕುಲಿ,ಉಂಡೆಯ ಇರಿಸಿದೆ ಮರೆಯದೆ ಈ ಜಗದೊಡೆಯನೆ ಕಾವುದು ಪ್ರೇಮದೆ…
ವಿಧ: ಕವನ
May 24, 2024
ಚೆಲುವು ಮಾಸಲಿಲ್ಲ ಗೆಳತಿ ಚೆಲುವು ಮಾಸಲಿಲ್ಲ ಚೆಲುವಿನೊಳಗೆ ಸವಿಯ ಗೆಲುವು ಸಿಹಿಯ ತಂದಿತಲ್ಲ   ಚೆಲುವಿನಾಳದೊಳಗೆ ಒಳಗೆ ಇಳಿದು ಬಂದಿತಲ್ಲ ಚೆಲುವೆಲ್ಲ ಮನಸಿನೊಳಗೆ  ಇಳಿದು ಹಾಡಿತಲ್ಲ ಚೆಲುವೆಂಬ ಬಯಕೆಗಳೂ ಕುಣಿದು ನಿಂತವಲ್ಲ ಚೆಲುವಿಕೆಯ ಕನಸುಗಳೂ ಸುತ್ತ ನಲಿದುವಲ್ಲ   ಚೆಲುವೆಗಾಗಿ ನನ್ನ ಮನವು ಸುತ್ತ ತಿರುಗಿತಲ್ಲ ಚೆಲುವಾಗಿಹ ಬನದ ಸುತ್ತ ಕಣ್ಣು ನಾಟಿತಲ್ಲ ಚೆಲುವಿಹುದು ಹೃದಯದ ಆಳ ಪ್ರೇಮ ಚಿಗುರಿತಲ್ಲ ಚೆಲುವಿರುವ ನಯನದ ಮಾತು ನನ್ನ ಹೊಕ್ಕಿತಲ್ಲ    ಚೆಲುವಾದ ಮಾತಿನಲ್ಲಿ ನನಸು…
ವಿಧ: ಕವನ
May 23, 2024
ಮುತ್ತಿಡಲೆ ನಾನೊಮ್ಮೆ ಮುಕ್ಕಣ್ಣ ನಿನಗೆ ಮತ್ತೇನು ಬೇಕಿಲ್ಲ ಬಯಕೆಯದು ನನಗೆ ಮಕ್ಕಳನು ನೀ ಹರಸಿ ಮತಿ ಕೊಡುವೆಯಂತೆ ನಾನೊಬ್ಬ ಎಳೆಬಾಲ ನಾ ಬಂದು ನಿಂತೆ   ಮಗ್ಧತೆಯ ಶಿಶುವೆಂದು ನನ್ನಾಸೆ ಅರಿತು ಈ ದಿವ್ಯ ಕರದಲ್ಲಿ ಕಂದನನು ಎತ್ತು ತಪ್ಪಾಯ್ತೆ ನನ್ನಿಂದ ನನ್ನಾಸೆಯಿಂದ ಮನ್ನಿಪುದು ಪರಶಿವನೆ ನೀ ಕರುಣೆಯಿಂದ   ಗಣಪತಿಯ, ಷಣ್ಮಖನ ಪಿತ ನೀನು ಅರಿತೆ ಈ ಜಗವ ನಡೆಯಿಸುವ ಹೊಣೆ ನಿನ್ನದಂತೆ ಬಿಡುವಿನಲಿ ಕರುಣದಲಿ ನೀನಿತ್ತ ಬಂದೆ ನನ್ನಾಸೆ ತೀರಿಸುತ ಮುದನೀಡು ತಂದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (…
ವಿಧ: ಕವನ
May 22, 2024
ಹಸಿರಿನ ಗಿಡವಿದು ಬಸಿರನು ಹೊತ್ತಿದೆ ಕಸಿಯುವ ಬಯಕೆ ಬೇಡಪ್ಪ   ಸಸಿಗಳ ಫಲಗಳ ಕಸಿಯಲು ಬಂದರೆ ಬುಸು ಬುಸು ಎಂಬ ನಾಗಪ್ಪ   ಕಾವಲು ಕಾಯಲು ಹಾವಿದು ನಿಂತಿದೆ ಕೋವಿಯ ಬಳಕೆ ಬೇಕಿಲ್ಲ   ಗೊಂಚಲು ಸೇಬಿಗೆ ಹೊಂಚನು ಹಾಕುವ ಸಂಚದು ಮುಂದೆ ನಡೆಯಲ್ಲ   ಫಲಗಳ ನಡುವಲಿ ಮಲಗಿದೆ ನಾಗರ ಚೆಲುವಿನ ನೋಟ ಕಣ್ಗಳಿಗೆ   ತಾಪಕೆ ಬೆಚ್ಚಿತೆ,ಲೋಪವ ಕಂಡಿತೆ ಕೋಪಕೆ ಸಿಲಕಿ ಬಂದಿಹುದೆ?   ಗರಳವನುಗುಳುವ ನರರಿಗೆ ಹೋಲಿಸೆ ಬರದದು ಸಮಕೆ ಮನುಜರಿಗೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
May 21, 2024
ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//   ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/ ಹಿರಣ್ಯಕಶ್ಯಪುವಿಗೆ ಮೋಕ್ಷದಾರಿ ತೋರಿದೆ ಮುದ್ದು ಬಾಲಕ ಪ್ರಹ್ಲಾದನ ರಕ್ಷಿಸಿದೆ//   ಅಹಂಕಾರ ಮದಗಳ ಕುಟ್ಟಿ ಪುಡಿ ಗೈದೆ ನಾನೇ ಎಂಬ ಅಹಮನ್ನು ನಾಶ ಮಾಡಿದೆ/ ತಾಯಿ ಕಯಾದು ದೇವಿಗೆ ಅಭಯ ನೀಡಿದೆ ಲೋಕೋತ್ತರ ಪುಣ್ಯ ಪಾಪಗಳ ಎಣಿಸಿ ಪೊರೆದೆ//   ಮಹಾಬಲ…
ವಿಧ: ಕವನ
May 20, 2024
ನಗುವೆಂ‌ಬ ಸಿರಿಯೊಂದು ಮೊಗದಲ್ಲಿ ಅರಳಿರಲಿ ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ   ಚಿಗುರೆಲೆಯ ತಳಿರಂತೆ ಮಿಗಿಲೆನಿಪ ಬೆಳೆಯಂತೆ ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ   ಅವಸರದ ಬದುಕಿನಲಿ ಬೆವರಿಳಿವ ದುಡಿಮೆಯಲಿ ಅವನೆಲ್ಲ ಮರೆತೊಮ್ಮೆ ನಗು ಮೂಡಿಬರಲಿ   ಕಾಸಿದಕೆ ಖರ್ಚಿಲ್ಲ ತಾಸಿದಕೆ ಬೇಕಿಲ್ಲ ಕೂಸಂತೆ ಒಳಗಿಂದ ನಗು ಮೂಡಿಬರಲಿ   ಕುಪಿತರಾಗಲು ಬೇಡಿ ಶಪಿಸಿ ತೆಗಳಲು ಬೇಡಿ ಜಿಪುಣತನ ತೊರೆದೀಗ ನಗು ನೂಡಿಬರಲಿ   ಹಗಲಿರುಳ ಕಾಯಕದೆ ದೊರಕಿರುವ ಯಶದಂತೆ ಹಗುರಾಗಿ ಮನಸಾರೆ ನಗು ಮೂಡಿಬರಲಿ||   -…
ವಿಧ: ಕವನ
May 19, 2024
ನೀ ಬಾರೋ ಬಳಿಗೆ ಕೈಹಿಡಿದು ಅನುದಿನವು ಕಾಪಾಡುಯೆಂದೆಂದೂ ಮುದದಿ ಸೆಳೆಯುತ ಒಲವಿನಲಿ ಮುದ್ದಿಸೆ ಬೆಸುಗೆಯಿಂದಲಿ ತಬ್ಬುತ ವಿರಹವನು ಮರೆಸುತಿರು ನಾನು ನೀನಾಗುತಲೆ ಬದುಕಿಂದು ನೀನು ನಾನಾಗುತಲೆ ಸವಿಯಾಗೆಂದೂ ಚೆಲುವು ಮೂಡುತಲೆ ರಾಗವು ಹೊಮ್ಮಿದೆ ಹರುಷವು ಕಾಣುತಲೆ ಪ್ರೀತಿಯರಳಿದೆ ಜೀವನದೊಳು ಉಲ್ಲಾಸವದು ಮಿನುಗುತಲೆ ಹೊಸತು ಜೀವವು ಉದಯಿಸಿತು ಒಡಲೊಳಗೆ ! *** ನಾನು ಬರೆ ದ ಸುಂದರ ಭಾಮಿನಿ ಗೆ ನನ್ನವಳು ಕಾ ಮಿನಿ ಹೇಳುವುದೇನು ಈಗ ನಮ್ಮ ಜೊ ತೆ ಗೆ ಎರಡು ಮಿಣಿ ಮಿ ಣಿ ! *** ಹುಟ್ಟು ಸಾವುಗಳ…
ವಿಧ: ಕವನ
May 18, 2024
ಅರಿಯದೆ ನೋಟವು ನಿನ್ನೆಡೆ ಬಿತ್ತು ನಿನ್ನಯ ಅಂದವ ನೋಡಿದ ಹೊತ್ತು ಮೂಗಿಗೆ ತೊಟ್ಟಿಹ ಚಂದದ ನತ್ತು ಅದರಲಿ ಜೋಡಿಸಿ ಹೊಳೆಯುವ ಮುತ್ತು   ಚೆಲುವೆಯ ನಿಲುವಿನ ಸೆಳೆಯುವ ಗತ್ತು ಕಿರುನಗೆ ಬೀರುತ ತರಿಸಿದೆ ಮತ್ತು ನೆಮ್ಮದಿ ಕೆಡಿಸಿದೆ ತಂದಿದೆ ಕುತ್ತು ಮದನನ ಬಾಣಕೆ ಆದೆನು ಚಿತ್ತು   ಪ್ರೀತಿಗೆ ಒಪ್ಪಿಗೆ ಮುದ್ರೆಯನೊತ್ತು ಒಲವನು ತೋರೆಯ ಬಳಿಯಲಿ ನಿತ್ತು ನನ್ನಲಿ ಅವಿತಿಹ ದುರ್ಗುಣ ಕಿತ್ತು ಸದ್ಗುಣ ತುಂಬಿದ ಮೂರ್ತಿಯ ಕೆತ್ತು   ಮುಂದಕೆ ನಾನಿದೊ ನಿನ್ನಯ ಸೊತ್ತು ಬಯಸಿದೆ ಕೆಂಪಿನ ಅಧರದ ಮುತ್ತು…
ವಿಧ: ಕವನ
May 17, 2024
ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ   ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ   ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತೆ ಗುರಿಯುಯಿಲ್ಲದ ಸೇವೆ ಜನಕದು ಪ್ರಾಣ ಹಾರುತ ಹೋಯಿತೆ   ಉಳ್ಳ ಜನಕೇ ಬುವಿಯ ಸ್ವತ್ತದು ಸಣ್ಣ ರೈತಗೆ ದಕ್ಕಿತೆ ಹೀಗೆಯಾದರೆ ನೆಲವು ಸರಿಯುತ ಪರರ ಕೈಗದು ಸೇರದೆ *** ಬಾ ಎನ್ನ ಬೆಳಕೇ ಹೀಗೆ… ಬಾ ಎನ್ನ ಬೆಳಕೇ ಹೀಗೆ ನನ್ನೊಳಗೆ ನೀನೂ ಸೇರೆಯಾ…