ನುಡಿಮುತ್ತುಗಳು

July 08, 2014
4

ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ... ಇದು ತಪ್ಪಾದ ಉಚ್ಚಾರಣೆ .

"ಶಿವಪೂಜೆ ನಡುವೆ ಕರಡಿಗೆ(ಲಿಂಗವೊತ್ತಿಗೆ - ಲಿಂಗವನ್ನು ಇಟ್ಟುಕೊಳ್ಳುವ ಒಂದು ಪುಟ್ಟ ಪೆಟ್ಟಿಗೆ ) ಬಿಟ್ಟ ಹಾಗೆ " - ಇದು ಸರಿಯಾದ ಉಚ್ಚಾರಣೆ

ಕರಡಿಗೆ ಅನ್ನುವುದು ಬಹಳ ಜನಕ್ಕೆ ಪರಿಚಯವಿಲ್ಲದಿರುವುದು(ವೀರಶೈವದವರನ್ನು ಹೊರತುಪಡಿಸಿ) ಮತ್ತು ಕಾಲಕ್ರಮೇಣ ಇದು ಕರಡಿಗೆಯಿಂದ ಕರಡಿ ಅಯಿತು.

ವಿವರಣೆ : ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಶಿವಲಿಂಗ, ಇದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಅದನ್ನು ಶಿವದಾರದಿಂದ ಪೋಣಿಸಿ ಅದನ್ನು ಸದಾಕಾಲ ಕೊರಳಲ್ಲಿ ಧರಿಸುತ್ತಾರೆ.

ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇಯಿರುವ ಕರಡಿಗೆಯಿಂದ ಶಿವಲಿಂಗವನ್ನು(ಇಷ್ಟಲಿಂಗ) ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಇದರಿಂದ ತಿಳಿಯುತ್ತೆ - ಶಿವಪೂಜೆ ಮಾಡಿಕೊಳ್ಳಲು ಕರಡಿಗೆ ಮುಖ್ಯ ಕರಡಿ ಅಲ್ಲಾ.

ಈ ಗಾದೆಯ ಮೂಲ ಉಚ್ಚಾರಣೆ ನನಗೆ ತಿಳಿದಿದ್ದು - ರಾಜಕುಮಾರ್ ಅವರ ಒಂದು ಹಳೆಯ ಚಿತ್ರ ನೋಡುವಾಗ, ಅಲ್ಲಿಯ ತನಕ ನಾನು ಕೂಡ ಎಲ್ಲರಂತೆ ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ಎಂದು ತಿಳಿದಿದ್ದೆ!

‪#‎ಸರಿಯಾದಅರ್ಥ‬

May 02, 2014
0

ಯೋಗ ಮಾಂತ್ರಿಕ ವಿದ್ಯೆಯಲ್ಲ.
ಅದರಲ್ಲಿ ರಹಸ್ಯವೇನಿಲ್ಲ !
ಮನುಷ್ಯನನ್ನು ಪೂರ್ಣ ಸ್ವಸ್ಥನನ್ನಾಗಿಸುವ್ುದೇ
ಯೋಗದ ಮುಖ್ಯ ಉದ್ಯೇಶ !
-ನಾನಾ ,ಕೊಳ್ಳೇಗಾಲ !
.

May 02, 2014
0

ಪರಮಾತ್ಮನಲ್ಲಿ ಜೀವಾ ತ್ಮನು
ಸಮರಸಗೊಳ್ಳುವ್ುದೇ ಯೋಗ !
-ನಾನಾ ,ಕೊಳ್ಳೇಗಾಲ !

April 29, 2014
0

ಯೋಗ ಆತ್ಮದ ವಿಜ್ನಾನ.ಪೂರ್ಣವಾಗಿ ವಿಕಸಿತ
ಹೊಂದಿದ ವ್ಯಕ್ತಿಯೇ ಯೋಗಿ !
ಉತ್ಕ್ರುಷ್ಟ ಪರಿಪೂರ್ಣತೆಯನ್ನು ಸಾಧಿಸುವ
ಕಾರ್ಯವೇ ನಿಜವಾದ ಯೋಗ !
-ನಾನಾ ,ಕೊಳ್ಳೇಗಾಲ !

April 27, 2014
0

ಎಲ್ಲ ಚಿಂತೆಗಳನ್ನು ಬಿಟ್ಟು
ನಿಶ್ಚಿಂತೆಯಿಂದಿರುವುದೇ ಯೋಗ
ಧಾರಣ ,ಧ್ಯಾನ ,ಸಮಾಧಿಗಳು ಕೂಡಿದ
ಸಂಯಮವೇ ಯೋಗ !
. -ನಾನಾ,ಕೊಳ್ಳೇಗಾಲ !

April 26, 2014
0

ಸಿದ್ದಿ ಅಸಿದ್ದಿಗಳಲ್ಲಿ ಸಮರೂಪವಾಗಿರುವ
ಚಿತ್ತ ಸಮಾಧಾನವೇ ಯೋಗ !
-ನಾನಾ,ಕೊಳ್ಳೇಗಾಲ !

April 25, 2014
0

ಮನುಷ್ಯನ ಬುದ್ದಿ ವಿರುದ್ಧ ತತ್ವಗಳಿಂದ ಹೊಯ್ದಾಡುತ್ತದೆ .
ಆದರೆ ಅವುಗಳ ನಡುವೆಯೂ ಆತನು ಸಮತೋಲನದಲ್ಲಿದ್ದರೆ
ಅವನನ್ನು ಯೋಗ ನಿರತನೆನ್ನುವರು !
-ನಾನಾ,ಕೊಳ್ಳೇಗಾಲ !

April 22, 2014
0

ಮಾವನ ಮನೆಯೇ ಸ್ವರ್ಗ !
ಮೂರು ದಿವಸಕ್ಕೆ ಮಾತ್ರ !
-ನಾನಾ,ಕೊಳ್ಳೇಗಾಲ !

March 17, 2014
0

ಎಲ್ಲರನ್ನು ನಂಬುವುದು ಅಪಾಯ, ಹಾಗೆ ಯಾರನ್ನು ನಂಬದೇ ಇರುವುದು ಇನ್ನು ದೊಡ್ಡ ಅಪಾಯ.

February 22, 2014
0

ಇಲ್ಲದಿರುವುದ ನೆನೆದು

ನೋವುಣುವುದಕ್ಕಿಂತ‌

ತಂಗಳಾದರು ತಿಂದು 

ತೇಗುವುದು ಉತ್ತಮ‌.......

February 17, 2014
0

ಪ್ರೀತಿಸಿದವರು ಸಿಗದಿದ್ದರೆ !

ಪ್ರೀತಿಯೆ ನೋವು,

ಸಿಕ್ಕವರನ್ನು ಪ್ರೀತಿಸದಿದ್ದರೆ !

ಜೀವನವೆ ಸಾವು.

February 04, 2014
0

ಮೆದುಳಿನಂತೆ ನಡೆಯುವವರು ಸ್ವಾವಲಂಬಿಗಳು

ಮನಸ್ಸಿನಂತೆ ನಡೆಯುವವರು ಆವಲಂಬಿಗಳು

ಮೆದುಳು ಅಚಲ‌, ಮನಸ್ಸು ಚಂಚಲ‌,

 

ನಿರ್ದಾರ ನಿಮ್ಮದೇ ಆಗಿರಲಿ!

 

 

January 29, 2014
0

ದೇಹವೇ ದೇಗುಲ ! ಆಸನಗಳೇ ಪ್ರಾರ್ಥನೆ !
-ನಾನಾ ,ಕೊಳ್ಳೇಗಾಲ !

January 28, 2014
0

ಯೋಗ ಮಾಡುವುದರಿಂದ ನಾವು ದ್ಯೆಹಿಕವಾಗಿ ,ಮಾನಸಿಕವಾಗಿ ನ್ಯೆತಿಕವಾಗಿ ,ಆಧ್ಯತ್ಮಕವಾಗಿ ಬೆಳವಣಿಗೆಯನ್ನು ಹೊಂದಬಹುದು !

January 01, 2014
0

ಯಾರನ್ನಾದರು  ಮರೆವುದಾದರೆ ಮರೆತುಬಿಡಿ, ಆದರೆ!

ಯಾರನ್ನು ಮರೆತಿದ್ದೆವೆ ಎಂಬುದನ್ನು ನೆನಪಿಟ್ಟುಕೊಳ್ಳಿ.

 

December 12, 2013
0

ದೊಡ್ಡವರಾಗಲು

ದಡ್ಡರಾಗಲು

ವಯಸ್ಸಿನ ಅಂತರವಿರದು

December 06, 2013
0

ಕರ್ಮವನ್ನು ನಾನು ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಬಿಟ್ಟರೆ ಕರ್ಮದ ಬಂಧ ಅಥವಾ ಕರ್ಮ ತಾನಾಗಿಯೆ ಕಳಚಿ ಬೀಳುತ್ತದೆ ---- ಶ್ರೀ ರಮಣ ಮಹರ್ಷಿಗಳು

December 02, 2013
0

ಒಂದೊತ್ತು ಉಣ್ಣುವವನು 'ಯೋಗಿ'

ಎರಡೊತ್ತು ಉಣ್ಣುವವನು 'ಭೋಗಿ'

ಮೂರೋತ್ತೂ ಉಣ್ಣುವವನ 'ಹೊತ್ತುಕೊಂಡೊಗಿ'

November 26, 2013
0

ನೀವು ಯಾರನ್ನೆ ಕಾಪಿ ಮಾಡಿದರು

ಜನರು ನಿಮ್ಮನ್ನೆ ಕಾಪಿ ಮಾಡುವಂತಿದ್ದರೆ ಸಾಕು.

November 21, 2013
0

ನೀರಿಗಿಂತ ತಿಳಿಯಾದದ್ದು ‍; ಜ್ಣಾನ‌

ಭೂಮಿಗಿಂತ ಭಾರವಾದದ್ದು ; ಪಾಪ‌

ಕಾಡಿಗಿಂತ ಕಪ್ಪಾಗಿರುವುದು ; ಕಳಂಕ‌

ಸೂರ್ಯನಿಗಿಂತ ಪ್ರಖರವಾದದ್ದು ;ಕೋಪ‌

ಮಂಜಿಗಿಂತ ಹಗುರವಾದದ್ದು ; ಪುಣ್ಯ

ಗಾಳಿಗಿಂತ ವೇಗವಾಗಿರುವುದು ; ಮನಸ್ಸು.

 

November 21, 2013
0

ತಾನಾಗಿ ಬರುವುದು ; ತಾರುಣ್ಯ, ಮುಪ್ಪು

ಜೊತೆಯಲ್ಲೆ ಬರುವುದು ; ಪಾಪ, ಪುಣ್ಯ

ತಡೆಯಿಲ್ಲದೆ ಬರುವುದು ;ಆಸೆ, ದು:ಖ

ಅನಿವಾರ್ಯವಾಗಿ ಬರುವುದು ; ಹಸಿವು, ದಾಹ‌

ನಾಶಕ್ಕಾಗಿ ಬರುವುದು ; ದ್ವೇಷ‌, ಸಿಟ್ಟು

ಸಮಾನಾಂತರದಲ್ಲಿ ಬರುವುದು ; ಹುಟ್ಟು, ಸಾವು

November 18, 2013
0

ನಿನ್ನೆ ಮುಗಿದಿದೆ

ಇಂದು ನಿಮಗಿದೆ

ನಾಳೆ ಮತ್ತೊಬ್ಬರಿಗಿದೆ

ಅವಕಾಶ ಎಲ್ಲರಿಗೂ ಇದೆ

ಆದರೆ ಜನಸಂಖ್ಯೆ ಹೆಚ್ಚಿದೆ.

November 14, 2013
0

ಮನಸ್ಸಿದ್ದರೆ  "ಮಾರ್ಗ‌'

ಇಲ್ಲದಿದ್ದರೆ "ಸಲಹೆ"( ಉಚಿತವಾಗಿ)

 

November 14, 2013
0

ಓಡಲು ಸಾದ್ಯವಾಗದಿದ್ದಲ್ಲಿ

ನಿದಾನವಾಗಿ ನಡೆದರೂ 

ಗುರಿ ಮುಟ್ಟಬಹುದು

ಆದರೆ ಹಿಂದಿರುಗಬೇಡಿ.