S = 1/2 gt2 : ವೈಜ್ಞಾನಿಕ ವಿಡಂಬನಾ ಲೇಖನ

4

      ಈ ಕತೆ ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಎಂಭತ್ತರ ದಶಕದಲ್ಲಿ ಓದಿದ ನೆನಪು. ಈ ಕತೆಯ ಸ್ವಾರಸ್ಯವೇನೆಂದರೆ, ನಮ್ಮ ಪರೀಕ್ಷೆ ಪದ್ಧತಿಯಲ್ಲಿ ನಾವು ಪ್ರಶ್ನೆ ಕೇಳುವ ರೀತಿ ಮತ್ತು ಅದಕ್ಕೆ ತರಲೆ ಆದರೂ ಆಲೋಚಿಸಿ ವಿವಿಧ ರೀತಿಯ ಉತ್ತರಗಳನ್ನು ಕೊಟ್ಟ ತುಂಟ ವಿದ್ಯಾರ್ಥಿಯದು. ಹೈಸ್ಕೂಲು ವಿದ್ಯಾರ್ಥಿಗಳಿಗೆ ಭೌತ ಶಾಸ್ತ್ರದ ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ ಕೇಳಲಾಗಿರುತ್ತದೆ. ಭೌತ ಶಾಸ್ತ್ರದ (Physics)ನಿಯಮವನ್ನು ಅಳವಡಿಸಿಕೊಂಡು ವಾಯುಭಾರ ಮಾಪಕ(Barometer)ದಿಂದ ಒಂದು ಎತ್ತರವಾದ ಕಟ್ಟಡದ ಉದ್ದವನ್ನು ಹೇಗೆ ಕಂಡು ಹಿಡಿಯಬಹುದು? ಒಬ್ಬ ಬೆರಿಕಿ, ಚಾಲೂ ಅಥವಾ ತರಲೆ ಮತ್ತು ಬುದ್ಧಿವಂತನಾದ ಹುಡುಗನೊಬ್ಬನಿದ್ದ ಅವನು ಈ ಪ್ರಶ್ನೆಗೆ ಹೀಗೆ ಉತ್ತರಿಸಿದ. ವಾಯುಮಾಪಕವನ್ನು ಆ ಎತ್ತರದ ಕಟ್ಟಡದ ಪಕ್ಕದಲ್ಲಿ ಇಡಿ ಮತ್ತು ಬಿಸಿಲು ಬಿದ್ದಾಗ ವಾಯುಮಾಪಕದ ನೆರಳನ್ನು ಅಳೆಯಿರಿ ಮತ್ತು ಆ ಕಟ್ಟಡದ ನೆರಳನ್ನು ಅಳೆಯಿರಿ. ವಾಯುಮಾಪಕದ ಎತ್ತರ ನಮಗೆ ಗೊತ್ತಿರುವುದರಿಂದ ಈ ಕೆಳಗಿನ ಸೂತ್ರವನ್ನು ಅಳವಡಿಸಿ ಅದರ ಎತ್ತರವನ್ನು ಕಂಡುಹಿಡಿಯಿರಿ.



                                                                         x= (K X V)/ W

    ಇಲ್ಲಿ ವಾಯುಮಾಪಕದ ಎತ್ತರ= v , ವಾಯುಮಾಪಕದ ನೆರಳಿನ ಉದ್ದ = w, ಕಟ್ಟಡದ ನೆರಳಿನ ಉದ್ದ= K ಮತ್ತು ಕಟ್ಟಡದ ಎತ್ತರ= x ಯೆಂದು ಇಟ್ಟುಕೊಂಡು ಮೇಲಿನ ಸಮೀಕರಣವನ್ನು ಉಪಯೋಗಿಸಿ ಆ ಕಟ್ಟಡದ ಉದ್ದವನ್ನು ಕಂಡು ಹಿಡಿಯಬಹುದು ಎಂದು ಉತ್ತರಿಸಿದ್ದ.

    ಇವನ ಉತ್ತರ ಪತ್ರಿಕೆಯನ್ನು ನೋಡಿದ ಆ ಭೌತಶಾಸ್ತ್ರದ ಮಾಸ್ತರರು ಕೆಂಡಾಮಂಡಲವಾಗಿ ಆ ಪ್ರಶ್ನೆಗೆ "ಸೊನ್ನೆ" ಅಂಕಗಳನ್ನು ಕೊಟ್ಟರು. ಆಗ ಆ ವಿದ್ಯಾರ್ಥಿ ಗುರುಗಳನ್ನು ತರಾಟೆಗೆ ತೆಗೆದುಕೊಂಡು ತಾನು ಉತ್ತರಿಸಿದ್ದು ಸರಿಯೆಂದು ವಾದಿಸಿ ತನಗೆ ಪೂರ್ತಿ ಅಂಕಗಳನ್ನು ಕೊಡಬೇಕಾಗಿ ಹೇಳಿದ, ಏಕೆಂದರೆ ನಾನು ಕೊಟ್ಟ ಉತ್ತರದಲ್ಲಿಯೂ ಭೌತ ಶಾಸ್ತ್ರದ ನಿಯಮವಿದೆ ಎಂದ. ಗುರುಗಳಿಗೆ ಅವನಿಗೇನು ಉತ್ತರ ಕೊಡಬೇಕೆಂದು ತಿಳಿಯದೆ ಅವನನ್ನು ಪ್ರಿನ್ಸಿಪಾಲರ ಬಳಿಗೆ ಕರೆದೊಯ್ದರು.

    ಪ್ರಿನ್ಸಿಪಾಲರು ಇಬ್ಬರ ವಾದಗಳನ್ನು ಕೇಳಿದ ಬಳಿಕ ನಿನಗೆ ನಿಜವಾದ ಉತ್ತರ ಗೊತ್ತಿದೆಯೇ ಎಂದು ಆ ಹುಡುಗನನ್ನು ಪ್ರಶ್ನಿಸಿದರು. ಆಗ ಆ ತರಲೆ ಹುಡುಗ ಉತ್ತರಿಸಿದ ಅದು ಬಹಳ ಸರಳವಾದ ಉತ್ತರ ಸರ್, ಅದು ಹೀಗಿದೆ. ಆ ಕಟ್ಟಡದ ತಳಭಾಗದಲ್ಲಿ ವಾಯುಭಾರ ಮಾಪಕವನ್ನಿಟ್ಟು ಗಾಳಿಯ ಸಾಂದ್ರತೆಯನ್ನು ಅಳಿಯಬೇಕು ಮತ್ತು ಆ ಮಾಪಕವನ್ನು ಕಟ್ಟಡದ ಛಾವಣಿಯ ಮೇಲಕ್ಕೆ ಒಯ್ದು ಅಲ್ಲಿಯೂ ಕೂಡ ಗಾಳಿಯ ಸಾಂದ್ರತೆಯನ್ನು ಅಳಿಯಬೇಕು. ನಮಗೆ ಗೊತ್ತಿರುವ ಹಾಗೆ ಗಾಳಿಯ ಒತ್ತಡ ಒಂದು ನಿರ್ಧಿಷ್ಠ ಕ್ರಮದ ಪ್ರಕಾರ ಕಡಿಮೆಯಾಗುವುದರಿಂದ, ಕಟ್ಟಡದ ಮೇಲೆ ಗಾಳಿಯ ಸಾಂದ್ರತೆಯೆಷ್ಟು ಕಡಿಮೆಯಾಗಿದೆಯೆನ್ನುವುದನ್ನು ಆಧರಿಸಿ ಆ ಕಟ್ಟಡದ ಎತ್ತರವನ್ನು ಕಂಡು ಹಿಡಿಯಬಹುದು.

    ನಿನಗೆ ಹೀಗೆ ಸರಿಯುತ್ತರ ಗೊತ್ತಿದ್ದರೂ ಕೂಡ ಹಾಗೇಕೆ ತಪ್ಪು-ತಪ್ಪಾಗಿ ಉತ್ತರಿಸಿರುವೆ ಎಂದು ಪ್ರಿನ್ಸಿಪಾಲರು ಆ ಹುಡುಗನನ್ನು ಮರುಪ್ರಶ್ನಿಸಿದರು. ಆಗ ಆ ಹುಡುಗ ಹೀಗೆ ಹೇಳಿದ, ಅವರು ಸರಿಯಾದ ರೀತಿಯಲ್ಲಿ ಪ್ರಶ್ನೆ ಕೇಳಿದ್ದರೆ ನಾನೂ ಸರಿಯಾದ ರೀತಿಯಲ್ಲೇ ಉತ್ತರಿಸುತ್ತಿದ್ದೆ. ಅಲ್ಲಾ ಸಾರ್, ಅವರು ಸುಮ್ಮನೆ ವಾಯುಭಾರ ಮಾಪಕವನ್ನುಪಯೋಗಿಸಿ ಒಂದು ಕಟ್ಟಡದ ಎತ್ತರವನ್ನು ಹೇಗೆ ಕಂಡುಹಿಡಿಯಬಹುದೆಂದು ಕೇಳಿದ್ದರೆ ನಾನು ಕೂಡ ಸರಳವಾಗಿ ಉತ್ತರಿಸುತ್ತಿದ್ದೆ. ಆದರೆ ಅವರು ಭೌತಶಾಸ್ತ್ರದ ನಿಯಮನ್ನುಪಯೋಗಿಸಿ ಎಂದು ಕೇಳಿದ್ದರಿಂದ ನಾನು ಹೀಗೆ ಉತ್ತರಿಸಿದೆ ಎಂದು ಸಮಜಾಯಿಷಿ ನೀಡಿದ. ಆಗ ಈ ಹುಡುಗನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡ ಪ್ರಿನ್ಸಿಪಾಲರು, ಅವನನ್ನು ಛೇಡಿಸುವ ಉದ್ದೇಶದಿಂದ, ಭೌತಶಾಸ್ತ್ರದ ನಿಯಮವೆಂದೆಯಲ್ಲ ಅದನ್ನು ಉಪಯೋಗಿಸಿ ಬೇರೆಯೇನಾದರೂ ಉತ್ತರ ಹೇಳಬಲ್ಲೆಯಾ ಎಂದು ಕೇಳಿದರು.

    ಆಗ ಆ ಹುಡುಗ ಹೇಳಿದ, ಆ ವಾಯುಭಾರ ಮಾಪಕವನ್ನು ಆ ಎತ್ತರದ ಕಟ್ಟಡದ ಮೇಲಿಂದ ಕೆಳಕ್ಕೆ ಒಗೆಯಬೇಕು. ಅದು ಕೆಳಗೆ ಬಿದ್ದ ಸಮಯವನ್ನಾಧರಿಸಿ s=1/2gt2 ಸೂತ್ರವನ್ನನುಸರಿಸಿ ಆ ಕಟ್ಟಡದ ಎತ್ತರವನ್ನು ಕಂಡುಹಿಡಿಯಬಹುದು. ಇಲ್ಲಿ s=ದೂರ ಅಥವಾ ಬಿಲ್ಡಿಂಗಿನ ಎತ್ತರ, t2 = t x t = ಕೆಳಗೆ ಬೀಳಲು ಅದು ತೆಗೆದುಕೊಂಡ ಸಮಯದ ವರ್ಗ ಮತ್ತು g=ಗುರುತ್ವಾಕರ್ಷಣೆಯ ಬೆಲೆ. ಇದರಲ್ಲಿ ಕೂಡ ಭೌತಶಾಸ್ತ್ರದ ನಿಯಮವಿದೆಯಲ್ಲವೆ ಸಾರ್ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡ.

    ಆಗ ಪುನಃ ಪ್ರಿನ್ಸಿಪಾಲರು, ಸರಿ ಇದರಲ್ಲೂ ಭೌತಶಾಸ್ತ್ರದ ನಿಯಮವಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಇದಲ್ಲದೆ ಬೇರೆ ಯಾವುದಾದರೂ ವಿಧಾನದಿಂದ ಆ ಕಟ್ಟಡದ ಎತ್ತರವನ್ನು ಕಂಡು ಹಿಡಿಯಬಹುದೇ ಎಂದು ಪ್ರಶ್ನಿಸಿದರು. ಅದಕ್ಕೆ ಆ ತುಂಟ ವಿದ್ಯಾರ್ಥಿ ತನಗೆ ಇನ್ನೂ ಒಂದು ವಿಧಾನ ಗೊತ್ತಿದೆ ಸಾರ್, ಆದರೆ ಅದರಲ್ಲಿ ಭೌತಶಾಸ್ತ್ರದ ನಿಯಮವಿಲ್ಲ ಸರ್ ಎಂದು ಹೇಳಿದ. ಆಗ ಪ್ರಿನ್ಸಿಪಾಲರು ಸರಿ ಅದನ್ನೂ ಹೇಳಿಬಿಡು ಎಂದರು. ಅದೇನಿಲ್ಲ ಸರ್ ಆ ವಾಯುಭಾರ ಮಾಪಕವನ್ನು "ಗಿಫ್ಟ್ ಪ್ಯಾಕ್" ಮಾಡಿ ಒಂದು ಒಳ್ಳೆಯ ಶುಭದಿನ ಅದನ್ನು ಕಟ್ಟಿದ ಇಂಜಿನಿಯರ್ ಬಳಿ ಹೋಗಬೇಕು ಮತ್ತು ಅವರಿಗೆ ಹೇಳಬೇಕು, "ನೋಡಿ ಸರ್ ಆ ಕಟ್ಟಡದ ನಿಖರವಾದ ಎತ್ತರವನ್ನು ನೀವು ಹೇಳಿದರೆ ಈ ವಾಯುಭಾರ ಮಾಪಕವನ್ನು ನಿಮಗೆ ಕಾಣೆಕೆಯಾಗಿ ಕೊಡುತ್ತೇನೆ". ಆಗ ಬಹಳ ಸರಳವಾಗಿ ಉತ್ತರವನ್ನು ಕಂಡುಹಿಡಿಯಬಹುದು ಸಾರ್ ಎಂದನಂತೆ. ಈ ತುಂಟ ವಿದ್ಯಾರ್ಥಿಯನ್ನು ಮನದಲ್ಲೇ ಅಭಿನಂದಿಸುತ್ತ  ಆ ಪ್ರಿನ್ಸಿಪಾಲರು ಅವನಿಗೆ ಆ ಪ್ರಶ್ನೆಗೆ ಪೂರ್ಣ ಅಂಕಗಳನ್ನು ನೀಡೆಂದು ಆ ಭೌತಶಾಸ್ತ್ರದ ಮಾಸ್ತರರಿಗೆ ಆದೇಶಿಸಿದರೆಂದು ಹೇಳಬೇಕಿಲ್ಲವಷ್ಟೆ?

 ಬ್ಯಾರೋಮೀಟರಿನ ಚಿತ್ರಕ್ಕಾಗಿ ಈ ಕೆಳಗೆ ಕೊಟ್ಟುರುವ ಕೊಂಡಿಯನ್ನು ನೋಡಿ: http://en.wikipedia.org/wiki/File:Aneroid_barometer.JPG

ಚಿತ್ರ ಕೃಪೆ : David R Ingham

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಡೆಯದಾಗಿ ಕಂಡು ಹಿಡಿಯುವ ದಾರಿಯೇ ಸರಳವಾಗಿದೆ ಶ್ರೀದರ್ ರವರೇ !!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಸತೀಶ್, ಪ್ರಶ್ನೆ ಪತ್ರಿಕೆ ಕೊಳ್ಳುವ ಹಣದಲ್ಲಿ ಬ್ಯಾರೋಮೀಟರ್ ಕೊಳ್ಳಬಹುದು. ಈ ಪ್ರಶ್ನೆ ಮು0ಚೆಯೇ ಕೇಳುತ್ತಾರೆ0ದು ಗೊತ್ತಿದ್ದರೆ!? :)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಕನ ಚೆನ್ನಾಗಿದೆ ಆದರೆ........... ನಿಮ್ಮ ಲೇಕನವನ್ನು ಓದುವ ಎಲ್ಲರಿಗು ಬೌತಶಾಸ್ತ್ರದ ನಿಯಮಗಳೆಲ್ಲ ಅರಿವಿರಬೇಕಾಗುತ್ತೆ !!! ಇಲ್ಲದಿದ್ದಲ್ಲಿ ಅರ್ಥಮಾಡಿಸೋದು ಕಷ್ಟ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಹೇಳಿದ್ದು ನಿಜ ಪಾರ್ಥ ಸರ್, ಆದ್ದರಿ0ದ ಅದನ್ನು ಆದಷ್ಟೂ ಸರಳವಾಗಿ ಬರೆಯಲು ಪ್ರಯತ್ನಿಸಿದ್ದೇನೆ. ನಿಜ ಹೇಳಬೇಕೆ0ದರೆ ನನಗೂ ಭೌತ ಶಾಸ್ತ್ರದ ಬಗ್ಗೆ ಹೆಚ್ಚು ತಿಳಿಯದು :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಶ್ರೀಧರ್ ಅವರೇ. ಇದು ಕ್ವಾ೦ಟಂ ಸಿಧ್ದಾ೦ತದ ಪ್ರತಿಪಾದಕನಾದ 'ನೀಲ್ಸ್ ಬೋರ್' ನು ಚಿಕ್ಕವನಾಗಿದ್ದಾಗ ಉತ್ತರಿಸಿದ ಬಗೆ. ಆ ವಯಸ್ಸಿನಲ್ಲಿಯೇ ವಿಚಾರಸರಣಿಯನ್ನು ಬೇರೆ ದೃಷ್ಟಿಕೋನದಿ೦ದ ನೋಡುವ ಅವನ ಸಾಮರ್ಥ್ಯ, ಕ್ವಾ೦ಟಂ ಸಿಧ್ದಾ೦ತದ ಮೂಲ ಪುರುಷರಲ್ಲಿ ಅವನನ್ನು ಒಬ್ಬನನ್ನಾಗಿ ಮಾಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಅವರೆ, ರಾಮಮೋಹನರಿಗೆ ಭೂತ ಹೇಗೋ ನನಗೆ ಭೌತ ಶಾಸ್ತ್ರ :) ಹನುಮಾನ್ ಚಾಲೀಸ ಹೇಳಿಕೊಂಡೇ ಓದಿದೆ. ವಿಡಂಬನೆ ಮತ್ತು ಅದರ ಮೊರಲ್ ಚೆನ್ನಾಗಿದೆ. ನಮ್ಮಲ್ಲಾದರೆ ನೀಲ್ಸ್ ಬೋರ್‌ನ್ನು ಬೆಂಚಿನ ಮೇಲೆ ನಿಲ್ಲಿಸುತ್ತಿದ್ದರು. :) http://www.snopes.co... -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಸ್ವಾಮಿ 'ನೀಲ್ಸ್ ಬೋರ'ನ್ನಾದರೆ ಬೆ0ಚ್ ಮೇಲೆ ನಿಲ್ಲಿಸುತ್ತಿದ್ದರು, ಆದರೆ ಗಣೇಶರನ್ನು ನಿಲ್ಲಿಸುವ ಸಾಹಸ ಮಾಡಲಿಕ್ಕಿಲ್ಲ ;)). ಸ್ವಾಮಿಗಳೇ, ನೀವು ಕೊಟ್ಟ ಕೊ0ಡಿಯನ್ನು ನೋಡಿದೆ ಅದರಲ್ಲಿ ಈ ಕತೆಯ ಬಗ್ಗೆ ಪ್ರಚಲಿತವಿರುವ ಕತೆಗಳ ಬ್ರಹ್ಮಾ0ಡವೇ ಇದೆ, ನೀವು ನಿಜಕ್ಕೂ ಅ0ಡಾ0ಡ ಭ0ಡರೆನ್ನುವುದರಲ್ಲಿ ಸ0ಶಯವಿಲ್ಲ! ಎಲ್ಲಿ0ದ ಹುಡುಕುತ್ತೀರ ಸ್ವಾಮಿ ಇಷ್ಟೊ0ದು ವಿಷಯಗಳನ್ನು. ಮೊನ್ನೆ ನೋಡಿದರೆ ವಿಟಮಿನ್ ಸೊಪ್ಪಿನ ಕೊ0ಡಿಯನ್ನು ಕೊಟ್ಟಿದ್ದಿರಿ ಅದಕ್ಕೂ ಮು0ಚೆ ಕೆಲವು ಹೂವುಗಳ ಬಗ್ಗೆ, ನಿಜಕ್ಕೂ ನಿಮ್ಮ ಹುಡುಕುವ ವಿಧಾನಕ್ಕೆ "ಹ್ಯಾಟ್ಸಾಫ್". ನಿಮ್ಮ ಪೂರಕ ಮಾಹಿತಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:()))) ಗಣೇಶ್ ಅಣ್ಣ... ಎಲ್ಲಿಂದ ಹುಡುಕುತ್ತೀರಾ ಇದೆಲ್ಲವನ್ನೂ? ಅದಕ್ಕೆ ಸಮಯ ಹೇಗೆ ಸಿಗುತ್ತೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಮಮೋಹನರಿಗೆ ಭೂತ ಹೇಗೋ ನನಗೆ ಭೌತ ಶಾಸ್ತ್ರ :) ಹನುಮಾನ್ ಚಾಲೀಸ ಹೇಳಿಕೊಂಡೇ ಓದಿದೆ. :()))) ಸಧ್ಯ ನಾ ಬಚಾವ್ ಆದೇ ಇಂತಿ ನೀ.... ಬೋ...............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೇ, ಸಂಪದ ಮಥನ ನಡೆಸಿ ಹೊಸ ಲೇಖನಗಳನ್ನು ಬರೆಯಲು ಸ್ಪೂರ್ತಿಯೊದಗಿಸುತ್ತಿದ್ದೀರ. ನನ್ನ ನೆಟ್‍ವರ್ಕ್ ಸಮಸ್ಯೆ ಸಧ್ಯಕ್ಕೆ ಬಗೆಹರಿದಿದೆಯೆಂದುಕೊಳ್ಳುತ್ತೇನೆ. ಮತ್ತೆ ಸಂಪದದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಶುಭದಿನ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೆ ಈ ಕತೆ ಕ್ವಾ೦ಟಂ ಸಿಧ್ದಾ೦ತದ ಪ್ರತಿಪಾದಕನಾದ 'ನೀಲ್ಸ್ ಬೋರ್' ನದು ಎ0ದು ತಿಳಿದಿರಲಿಲ್ಲ. ಪೂರಕ ಮಾಹಿತಿಯನ್ನು ಒದಗಿಸಿದ್ದಕ್ಕೆ ಧನ್ಯವಾದಗಳು ಹೆಗಡೆಯವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತು0ಬಾ ಚೆನ್ನಾಗಿದೆ ... ಅ0ದು ಕಲಿತಿದ್ದೆಲ್ಲ ಮತ್ತೊಮ್ಮೆ ನೆನಪಿಸಿಕೊಳ್ಳುವ0ತಾಯಿತು ... ಅ0ದೇ ಹೇಳಿದ0ತೆ, ನಿಮ್ಮ ಲೇಖನಗಳಲ್ಲಿ ವೈವಿಧ್ಯತೆ ಇರುತ್ತದೆ. ಓದಲು ಸೊಗಸು. ಮು0ದುವರೆಯಲಿ ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಈ ವೈಜ್ಞಾನಿಕ ವಿಡಂಬನಾ ಲೇಖನ ತುಂಬಾ ಚೆನ್ನಾಗಿದೆ. ವೈಜ್ಞಾನಿಕ ಸೂತ್ರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂದು ನಿಮ್ಮ ಲೇಖನದಿಂದ ತಿಳಿದಂತಾಯಿತು.ಮತ್ತಷ್ಟು ಲೇಖನಗಳು ನಿಮ್ಮಿಂದ ನಿರೀಕ್ಷಿಸುತ್ತೇನೆ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಆಶಯದ0ತೆ ಹೊಸ ಹೊಸ ರೀತಿಯ ಲೇಖನಗಳನ್ನು ಕೊಡಲು ಪ್ರಯತ್ನಿಸುತ್ತೇನೆ. ಹೀಗೆ ಸ0ಪದಿಗರ ಬೆ0ಬಲವಿರುವಾಗ ಅದು ಖ0ಡಿತ ಸಾಧ್ಯವಾಗುತ್ತದೆ, ಧನ್ಯವಾದಗಳು ನಾಗೇ0ದ್ರರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಉತ್ತೇಜನಾಪೂರ್ವಕ ನುಡಿಗಳಿಗೆ ಧನ್ಯವಾದಗಳು ಭಲ್ಲೇಜಿ. ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ ತು0ಬ ಚನ್ನಾಗಿದೆ... ನನ್ನ ಪ್ರಕಾರ ಒ0ದು ಉತ್ತಮ ತಪ್ಪು ಉತ್ತರ ಬರೆಯಲು ಅದಕ್ಕೆ ಸ0ಭ‌0ದಿಸಿದ ತು0ಬ ವಿಚಾರ ಗೊತ್ತಿರ ಬೇಕು ಇದಕ್ಕಿ0ತ ಸರಿ ಉತ್ತರ ಬರಿಯುವುದೆ ಸುಲಭ ಇದು ನನ್ನ ಸ್ವ0ತ ಅನುಭವ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಖ್ಯಾತ ವಿಜ್ನಾನಿ Neils Bhor ಅವರ ಜೇವನದಲ್ಲಿ ನಡೆದ ಪ್ರಸ0ಗ ....ಬಹಳ ಸಮಯವಗಿತ್ತು ಕೇಳಿ...ಮನಕ್ಕೆ ಮುದ ಸಿಕ್ಕಿತು . ನಮ್ಮ ಫಿಸಿಕ್ಸ್ ಗುರುಗಳನ್ನು ನೆನಪಿಸುವ0ತೆ ಮಾಡಿತು ... ನಿಮಗೆ ಧನ್ಯಾವಾದಗಳು ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೆಚ್ಚುಗೆಗೆ ನಿಮಗೂ ಧನ್ಯವಾದಗಳು ಕಾಮತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜೈ ಕಿಸಾನ್ ಅವರೆ, ಬಹಳ ಚೆನ್ನಾಗಿ ಹೇಳಿದಿರಿ. ತಪ್ಪು ಉತ್ತರ ಕೊಟ್ಟ ಮೇಲೆ ಅದನ್ನು ಸಮರ್ಥಿಸಿಕೊಳ್ಳಲೂ ಬಹಳ ಬುದ್ಧಿವ0ತಿಕೆ ಬೇಕು. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೂ ಬಹಳ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಚನ್ನಾಗಿದೆ ನಿಮ್ಮ ಈ ಬರಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು, ಚನ್ನಕೇಶವ ಅವರೆ. ಗಣೇಶ್ ಅವರು ಪ್ರತಿಕ್ರಿಯೆಯಲ್ಲಿ ಸೂಚಿಸಿರುವ ಕೊ0ಡಿಯನ್ನು ನೋಡಿ ನಿಮಗೆ ಇನ್ನೂ ಹೆಚ್ಚಿನ ವಿಷಯಗಳು ಇದರ ಬಗ್ಗೆ ತಿಳಿದುಬರುತ್ತವೆ. http://www.snopes.co...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಬಂಡ್ರಿಯವರೆ ನಿಜಕ್ಕು ನಿಮ್ಮ ಬರಹಗಳಲ್ಲಿ ವೈವಿಧ್ಯತೆಯ ಜೊತೆಗೆ ವೈಚಾರಿಕತೆಯೂ ಇರುತ್ತದೆ. ಸುಲಭವಾಗಿ ಓದಿಸಿಕೊಂಡು ಹೋಗುವ ಸರಳ ಶೈಲಿ ಓದುಗರ ಮನಸ್ಸಿಗೆ ಮುದನೀಡುತ್ತದೆ. ಪ್ರಶ್ನಪತ್ರಿಕೆ ತಯಾರಕರು ಈ ಲೇಖನವನ್ನು ಓದಲೇ ಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪದ್ಮರವರೆ, ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ. ನಾನು ಮೇಲಿನ ಪ್ರತಿಕ್ರಿಯೆಯಲ್ಲಿ ಕೊಟ್ಟಿರುವ ಕೊಂಡಿಯನ್ನೂ ಸಹ ಸಾಧ್ಯವಾದರೆ ನೋಡಿ ಅದರಲ್ಲಿ ಈ ಬ್ಯಾರೋಮೀಟರಿನ ಬಗ್ಗೆ ಇನ್ನೂ ಹೆಚ್ಚಿನ ಸ್ವಾರಸ್ಯಕರವಾದ ಸಂಗತಿಗಳು ನಿಮಗೆ ಲಭ್ಯವಾಗುತ್ತವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.