ಪ್ರಬಂಧ

ತೋಟದಾಚೆಯ ತೋಡು

Submitted by sasi.hebbar on Fri, 01/27/2012 - 14:55

ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದರ ಪಲುಕನ್ನು ಪಲ್ಲವಿಸುತ್ತಿರುತ್ತದೆ ಎಂದು ನಮಗೂ ಆಗಾಗ ಅನಿಸುತ್ತಿರುತ್ತದೆ ಅಲ್ಲವೆ? ಬೆಳದಿಂಗಳ ರಾತ್ರಿಯಲ್ಲಿ ಅಲುಗಾಡುವ ಗಿಡಮರಗಳ ಎಲೆಗಳು ಹನಿಗವನಗಳನ್ನು ನುಡಿಯುತ್ತಾ, ಎದೆಯಲ್ಲಿ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸುತ್ತವೆ. ಈ ಎಲ್ಲಾ ಮೂರ್ತ-ಅಮೂರ್ತ ಸಂಗೀತಾನುಭಗಳಲ್ಲಿ, ನೀರು ನುಡಿಸುವ ಗಾಯನವನ್ನು ಕಿವಿಯಾರೆ ಕೇಳಬಹುದು ಎಂಬುದು ನಿಜವಾದ ಸಂಗತಿ.

 

ನಮ್ಮ ಬೈಲಿನಿಂದಾಚೆ ಮತ್ತು ತೋಟದಿಂದಾಚೆ ಒಟ್ಟು ಎರಡು ತೋಡುಗಳು ಹರಿಯುತ್ತವೆ. ನಿಶ್ಶಬ್ದ ರಾತ್ರಿಯಲ್ಲಿ ಅಲ್ಲಿ ಹರಿಯುವ ನೀರಿನ ಜುಳು ಜುಳು ಶಬ್ದ ನಮ್ಮ ಮನೆಯ ತನಕ ಕೇಳುತ್ತದೆ. ಎಲ್ಲಾ ಗದ್ದೆಬೈಲುಗಳಿಗೆ ಸಮಾಂತರವಾಗಿ, ಹಾಡಿಯ ಪಕ್ಕದಲ್ಲಿ ಒಂದು ತೋಡು ಇರುವುದು ಒಂದು ಸಾಮಾನ್ಯ ಸಂಗತಿ. ಆದರೆ, ಆ ತೋಡಿನ ನೀರಿನಲ್ಲಿ ಗಾಯನದ ಇಂಪು ಅಥವಾ ಜೀವನದ ಕಂಪು ಕಂಡುಬಂದರೆ, ಅದು ಮನಸ್ಸಿನ ಮೂಲೆಯಲ್ಲಿ ಮೂಡುವ ಬೆಚ್ಚನೆಯ ನೆನಪಾಗಿ, ತನ್ನ ಛಾಪು ಒತ್ತಬಲ್ಲದು.

ಬ್ಲಾಗ್ ವರ್ಗಗಳು

ದೆಹಲಿ: ರಾಜಧಾನಿಗೆ ಇಂದು ನೂರು ವರ್ಷ

Submitted by cherryprem on Mon, 12/12/2011 - 09:32

"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು, ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ..."

ನಾನು ಸೈಕಲ್ ಕಲಿತದ್ದು (ಪ್ರಬಂಧ)

Submitted by sasi.hebbar on Tue, 05/17/2011 - 17:09

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"


 "ಎಂತಕೆ, ನೀ ಸೈಕಲ್ ಕಲಿಲ್ಲೆ?"


 "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?"


ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸಿಕೊಂಡೆನೋ, ಲೆಕ್ಕವೇ ಸಿಗದು. ಸಹಪಾಠಿಗಳೆಲ್ಲ ಸೈಕಲ್ ಮೇಲೆ ಹೋಗುವಾಗ, ನನಗೆ ಸೈಕಲ್ ಬಿಡಲು ಬರುವುದೇ ಇಲ್ಲ ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ. "ತಕೊ, ಈ ಸೈಕಲ್ ತಕೊಂಡು ಹೋಗಿ, ಆ ಅಂಗಡಿಯಿಂದ ಇದೇನನ್ನೋ ತಕಂಡ್ ಬಾ" ಎಂದು ಅಧ್ಯಾಪಕರೋ,ಬೇರಾರೋ ಹೇಳಿದರೆ, ಇಲ್ಲಪ್ಪ, ಸೈಕಲ್ ಹೊಡೆಯಲು ಬರುವುದಿಲ್ಲ ಎಂದು ಹೇಳಿ, ಅವರನ್ನು ಅಚ್ಚರಿಪಡಿಸಿದ್ದೂ ಉಂಟು. ಕಾಲೇಜಿಗೆ ಹೋಗುವಾಗಲೂ, ಸೈಕಲ್ ಸವಾರಿ ಬಾರದವನು ಇಡೀ ಕ್ಲಾಸಿಗೆ ನಾನೊಬ್ಬನೇ ಇರಬಹುದೇನೊ! ನನ್ನ ಸಹಪಾಠಿಗಳಲ್ಲಿ ಒಂದಿಬ್ಬರು ಮೋಟರ್ ಬೈಕ್ ಓಡಿಸುವಲ್ಲಿಗೆ ಮುಂದುವರಿದಿದ್ದರೂ, ನಾನ್ಯಾವಾಗ ಸೈಕಲ್ ಕಲಿಯುವುದೆಂಬ ಅಳುಕು ಮನದ ಮೂಲೆಯಲ್ಲಿ!.


ಸರಣಿ
ಬ್ಲಾಗ್ ವರ್ಗಗಳು

ಅಹಲ್ಯೆಯನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

Submitted by inchara123 on Fri, 01/21/2011 - 22:55
 ಅಹಲ್ಯಾ - ಈಕೆ ಬ್ರಹ್ಮನ ಮಾನಸ ಪುತ್ರಿ. ಅಪ್ರತಿಮ ಸುಂದರಿ. ಇಡೀ ಜಗತ್ತಿನಲ್ಲಿ ಇವಳಷ್ಟು ಸೌಂದರ್ಯವತಿ ಯಾರೂ ಇರಲಿಲ್ಲ.  ಒಂದು ಸಾವಿರ ಸುಂದರಿಯನ್ನು ಸೃಷ್ಟಿ ಮಾಡಿದ ಬ್ರಹ್ಮ, ಅವರೆಲ್ಲರಲ್ಲಿನ ಅತ್ಯಂತ ಸೌಂದರ್ಯದ ಅಂಶವನ್ನು ತೆಗೆದುಕೊಂಡು ಈಕೆಯನ್ನು ಸೃಷ್ಟಿ ಮಾಡಿದನು.  ಒಂದು ಕಥೆಯಂತೆ ಈಕೆಯನ್ನು ಸೃಷ್ಠಿ ಮಾಡಿದ  ಬ್ರಹ್ಮ, ಇವಳ ರಕ್ಷಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಗೌತಮ ಮುನಿಗೆ ಒಪ್ಪಿಸಿದ.  ಗೌತಮ ಮುನಿ ಈಕೆಯನ್ನು ಪಾಲಿಸಿ, ಪೋಷಿಸಿ, ಈಕೆ ಪ್ರಾಪ್ತ ವಯಸ್ಸಿಗೆ ಬಂದಾಗ, ಬ್ರಹ್ಮನ ಬಳಿ ತಂದು ಬಿಟ್ಟ.  ಈತನ ಪ್ರಾಮಾಣಿಕತೆಗೆ ಮೆಚ್ಚಿದ ಬ್ರಹ್ಮ!
ಬ್ಲಾಗ್ ವರ್ಗಗಳು