ಕೃಷ್ಣ

ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು!

Submitted by makara on Sat, 09/15/2018 - 10:20

ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

Submitted by hamsanandi on Wed, 03/25/2015 - 12:00

ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು
ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ
ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ
ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು

ಸಂಸ್ಕೃತ ಮೂಲ  (ವೇದಾಂತ ದೇಶಿಕನ ಗೋಪಾಲ ವಿಂಶತಿ - ೪) :

ಅವಿರ್ಭವತ್ವನಿಭೃತಾಭರಣಮ್ ಪುರಸ್ತಾತ್
ಅಕುಂಚಿತೈಕ ಚರಣಂ ನಿಭೃತಾನ್ಯ ಪಾದಂ
ದಧ್ನಾ ನಿಮಂಥ ಮುಖರೇಣ ನಿಬದ್ಧ ತಾಳಂ
ನಾಥಸ್ಯ ನಂದ ಭವನೇ ನವನೀತ ನಾಟ್ಯಂ |

-ಹಂಸಾನಂದಿ

ಕೊ: ಮೂಲದಲ್ಲಿ ನಾಟ್ಯದ ಮೇಲೆ ಒತ್ತು ಹೆಚ್ಚಾಗಿದ್ದರೆ, ಅನುವಾದದಲ್ಲಿ ಅದು ನಾಟ್ಯವಾಡುವವನ ಮೇಲೆ ಹೆಚ್ಚಾದಂತೆ ಕಾಣುತ್ತಿದ್ದರೆ ಅದು ನನ್ನ ಕೊರತೆಯಷ್ಟೇ.

ಬ್ಲಾಗ್ ವರ್ಗಗಳು

ಎದೆಯಲ್ಲಿ ನಿಂತ ಚಿತ್ರ

Submitted by hamsanandi on Wed, 09/04/2013 - 09:14

ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ
ಮುಖಕಮಲವರಳಿಸಿದ ಮುಗುದ ಬಾಲಕನು
ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ
ಚಿತ್ರವನು ಎನ್ನೆದೆಯಲಾರು ಬರೆದವರು?

ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿಯಿಂದ):

ಹೃದಿ ಮುಗ್ಧ ಶಿಖಂಡಮಂಡನೋ ಲಿಖಿತಃ ಕೇನ ಮಮೈಷ ಶಿಲ್ಪಿನಾ
ಮದನಾತುರ ವಲ್ಲವಾಂಗನಾ ವದನಾಂಬೋಜ ದಿವಾಕರೋ ಯುವಾ

हृदिमुग्ध शिकण्डमण्डनो लिखितः केन ममैष शिल्पिना।
मदनातुर वल्लवाँगना वदनाम्बोज दिवाकरो युवा।।

-ಹಂಸಾನಂದಿ

ಬೆಳಕು

Submitted by hamsanandi on Thu, 08/01/2013 - 07:36

ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು

ಮುಡಿಯಲೇರಿಹ  ನವಿಲ ಗರಿಯ ಮೆರುಗು

ಸೆಳೆವ ನೀಲಕೆ  ಸಿಗ್ಗು ತಂದವನ  ಮೈಬಣ್ಣ

ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!

 

ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ ೧೨):

ಅಧರಾಹಿತ ಚಾರು ವಂಶ ನಾಳಾಃ

ಮುಕುಟಾಲಂಬಿ ಮಯೂರ ಪಿಂಛಮಾಲಾಃ

ಹರಿನೀಲಶಿಲಾ ವಿಭಂಗ ನೀಲಾಃ

ಪ್ರತಿಭಾಃ ಸಂತು ಮಮ ಅಂತಿಮ ಪ್ರಯಾಣೇ

 

ಕೊಳಲ ಬಗ್ಗೆ ಒಂದೆರೆಡು ಮಾತು.

Submitted by vidyakumargv on Sat, 06/23/2012 - 02:15

ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ, ಸಮುದ್ರದ ಬದಿಯಲ್ಲಿ ಹೀಗೆ ನಿಶ್ಶಬ್ಧ ಸ್ಥಳಗಳಲ್ಲಿ ಕೊಳಲು ನುಡಿಸುವಾಗ ಪ್ರಕೃತಿಯ ಭಾವಕ್ಕೆ ತಕ್ಕಂತೆ ಹೊರಡುವ ನಾದ ಅನುಭವಿಸಿಯೇ ತಿಳಿಯಬೇಕು. ಕೊಳಲ ದ್ವನಿಗೆ ನುಡಿಸದ ಜೀವಿಯೇ ಇಲ್ಲ. ಮಹಾಭಾರತದ ಕೃಷ್ಣನ ಕೊಳಲ ನಾದಕ್ಕೆ ಗೋಪಿಯರು, ದನ ಕರುಗಳು, ಪ್ರಾಣಿ ಪಕ್ಷಿಗಳು ಪ್ರತಿಕ್ರಿಯಿಸುತಿದ್ದದ್ದು ಅತಿರೇಕವಾಗಿಕಂಡರೂ ಅದು ನಿಜ ಕೊಳಲ ದ್ವನಿಯೇ ಅಂತದ್ದು.

ಹಿಗ್ಗುವ ಹರಿ

Submitted by hamsanandi on Thu, 07/28/2011 - 03:58

"ಯಮುನೆಯ ಮರಳಲಿ ಆಡಪೋಗಿಹ
ಅಣ್ಣ ಬಲರಾಮ ಬರುವ ಮುನ್ನವೇ
ಬಟ್ಟಲ ಹಾಲನು ಕುಡಿದರೆ ನಿನ್ನಯ
ಕೂದಲು ಬೆಳೆವುದು ಸೊಂಪಾಗಿ"

ಬಣ್ಣಿಸಿ ಇಂತು ಯಶೋದೆ ನುಡಿದಿರೆ
ಬಟ್ಟಲ ಹಾಲನು ವೇಗದಿ ಕುಡಿಯುತ
ಮುಟ್ಟುತ ಜುಟ್ಟನು ಬೆಳೆದಿಹುದೆನ್ನುತ
ಹಿಗ್ಗುವ ಹರಿಯೇ ಎಮ್ಮ ಕಾಯಲಿ!


ಸಂಸ್ಕೃತ ಮೂಲ: (ಲೀಲಾಶುಕನ ಕೃಷ್ಣಕರ್ಣಾಮೃತ- ಶ್ಲೋಕ ೬೦)

ಕಾಲಿಂದೀ ಪುಲಿನೋದರೇಶು ಮುಸಲೀ ಯಾವದ್ಗತಃ ಖೇಲಿತುಂ
ತಾವತ್ ಕಾರ್ಪರಿಕಂ ಪಯಃ ಪಿಬ ಹರೇ ವರ್ಧಿಷ್ಯತೇ ತೇ ಶಿಖಾ |

ಸರಣಿ

ಕೊಳಲಿಗೆ

Submitted by hamsanandi on Sun, 03/06/2011 - 12:55
ಓ ಕೊಳಲೇ,
ನೀನಿರುವೆ
ನಸುನಗುವ ಮುಕುಂದನ
ಮೊಗದಾವರೆಯ ಬಳಿಯೇ;

ಅವನುಸಿರನೇ ಸವಿದು
ನಲಿವ ನಿನಗೆ
ನಾ ಕೈಯ ಮುಗಿವೆ;
ಬೇಡಿಕೊಳುವೆ.

ಆ ನಂದ ಕಂದನ
ರನ್ನದಾ ತುಟಿಗಳ ಬಳಿಸಾರಿ
ನೀ
ಹೇಗೋ ನನ್ನಳಲನ್ನು
ಅವನ ಕಿವಿಯಲ್ಲಿ
ಮೆಲ್ಲಗುಸಿರೇ!ಸರಣಿ

ಬೃಂದಾವನಕೆ ಹಾಲನು ಮಾರಲು..

Submitted by hamsanandi on Sun, 02/06/2011 - 11:06

ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದ
ಮುರಾರಿಯಡಿಗಳಲೆ ಮನಸನೊಪ್ಪಿಸಿದ
ಗೊಲ್ಲತಿ ಕೂಗಿದಳು ತಾ ಮೈಯಮರೆತು
’ಗೋವಿಂದ ದಾಮೋದರ ಮಾಧವೆಂ’ದು!

ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)

ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರಾರಿ ಪಾದಾರ್ಪಿತ ಚಿತ್ತವೃತ್ತಿಃ|
ದಧ್ಯಾಧಿಕಂ ಮೋಹವಶಾದವೋಚತ್ ಗೋವಿಂದ ದಾಮೋದರ ಮಾಧವೇತಿ||

-ಹಂಸಾನಂದಿ

ಕೊ: ನೆನ್ನೆ ತಾನೇ ಓದಿದ್ದಿದು ಈ ಶ್ಲೋಕ - ಅದರಲ್ಲಿರುವ ಲಯದಿಂದ ಕೂಡಲೇ ಅನುವಾದಿಸಬೇಕೆಂಬ ಸೆಳೆತವುಂಟುಮಾಡಿತು!

ಸರಣಿ

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

Submitted by hamsanandi on Wed, 09/01/2010 - 22:21

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.