ಪ್ರಕೃತಿ

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!

Submitted by ksnayak on Tue, 05/07/2013 - 18:22

 


              ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......

      

ಬ್ಲಾಗ್ ವರ್ಗಗಳು

ಲಕ್ಷ್ಮೀ ಚೇಳು

Submitted by devaru.rbhat on Tue, 11/30/2010 - 16:44

ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ. ಇದು ಲಕ್ಷ್ಮಿಯ ಪ್ರತೀಕ ಎನ್ನುವ ಭಾವನೆ ನಮ್ಮಲ್ಲೆಲ್ಲಾ ಇದೆ. ಹಾಗಾಗಿ ಇದು ಮನೆಗೆ ಬಂದರೆ ಅದಕ್ಕೆ ಮೊದಲು ಅರಿಷಿನ ಕುಂಕುಮಗಳನ್ನು ಹಾಕಿ ನಂತರ ಅದನ್ನು ಅಕ್ಕಿ ವನಿಯುವ ಮರ ಗಳಲ್ಲಿ (ವಂದರಿಗಳಲ್ಲಿ) ಹಿಡಿದು ಹೊರಗೆ ಬಿಟ್ಟು ಬರುವುದು ವಾಡಿಕೆ. ಹಾಗೇ ಈ ಚಿತ್ರದಲ್ಲಿಯೂ ಚೇಳಿನ ಮೇಲೆ ಅರಿಷಿಣ ಕುಂಕುಮ ಹಾಕಿರುವುದನ್ನು ಕಾಣಬಹುದು. ಇದು ಕಂಡು ಬರುವುದು ಸ್ವಲ್ಪ ಅಪರೂಪವೇ ಸರಿ. ಬೇರೆಲ್ಲಾ ಚೇಳುಗಳನ್ನು ನಿರ್ದಯವಾಗಿ ಹೊಡೆದು ಸಾಯಿಸಿದರೂ ಇದನ್ನು ಮಾತ್ರಾ ಸಾಯಿಸುವವರು ಕಡಿಮೆ.

ಸರಣಿ
ಬ್ಲಾಗ್ ವರ್ಗಗಳು

೧ + ೧ = ೧

Submitted by devaru.rbhat on Sat, 01/30/2010 - 14:54

1+1=1

೧+೧=೧ ಅಥವಾ ನೂರಾರು

ಇದು ಹೇಗೆ ಸಾಧ್ಯ?

ಇದೊಂದು ಪ್ರಮೇಯ. ಇದನ್ನು ಸಾಧಿಸಲು ಗಣಿತದ ಯಾವ ಸೂತ್ರಗಳೂ ಬರಲಾರವು. ಇದಕ್ಕೊಂದು ಪ್ರಕೃತಿಯಲ್ಲಿನ ಕೀಟ ಜಗತ್ತೊಂದೇ ಉತ್ತರಿಸಬಲ್ಲದು.

ಸರಣಿ
ಬ್ಲಾಗ್ ವರ್ಗಗಳು

ಜನ್ಮಾಂತರ

Submitted by devaru.rbhat on Sat, 01/30/2010 - 12:23

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೂವಾಗಿ ಅರಳಿದಾಗಜನ್ಮಾಂತರದ್ದೇ ಸುದ್ದಿ. ಯಾವುದೇ ಖಾಸಗಿ ದೂರದರ್ಶನ ಚಾನೆಲ್‌ ನೋಡಿದರೂ ಜನ್ಮಾಂತರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳ ಹೂವಾಗಿ ಅಳಿದಮೇಲೆಸುರಿಮಳೆ. ಹೀಗೆ ಹೇಳಿದಾಕ್ಷಣ ನಾನು ಇದರ ಬಗ್ಗೆ ತಾತ್ಸಾರಗೊಂಡಿದ್ದೇನೆಂದು ಅಲ್ಲ.

ಬ್ಲಾಗ್ ವರ್ಗಗಳು

ಪ್ರಕೃತಿಯೇ ನಿರ್ಮಿಸಿದ ಕಲ್ಲಿನ ಸಂಕ

Submitted by sudhimail on Mon, 01/18/2010 - 21:21

ಪ್ರಕೃತಿ ನಿರ್ಮಿತ ಈ ಕಲ್ಲಿನ ಸಂಕ (ಸೇತುವೆ) ಇರುವುದು  ಜೋಗದ ಹತ್ತಿರ, ಸಾಗರದಿಂದ ಸುಮಾರು ೨೦ ಕಿ.ಮಿ. ದೂರದಲ್ಲಿರು ಮಳವಳ್ಳಿಯಲ್ಲಿ.

ಕಲ್ಲಿನ ಸಂಕ

ಬ್ಲಾಗ್ ವರ್ಗಗಳು

ಚಿತ್ರನೋಡಿ ಗುರುತು ಹೇಳಿ

Submitted by devaru.rbhat on Fri, 01/01/2010 - 17:06

ಬನಾಟೆ ಮರದ ಹೂಚಿತ್ರ ನೋಡಿ ಗುರುತು ಹೇಳಿ

ಓಲೇನಾ?

ಮೂಗುತಿನಾ?

ಹಣ್ಣಾ?

ಹೂವಾ?

ಕಾಯಿನಾ?

ಪರೀಕ್ಷೆಗಾಗಿ ಹಿಮ್ಮುಖ ಮುಮ್ಮುಖ ಎರಡೂ ಬದಿ ಕಾಣುತ್ತಿದೆ ನೋಡಿ.

ಸರಣಿ
ಬ್ಲಾಗ್ ವರ್ಗಗಳು

ವನಸಿರಿ

Submitted by omshivaprakash on Wed, 05/06/2009 - 08:55

ರವಿ. ಅನಿಲನ - ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ - ಚಿತ್ರದ ಬಗ್ಗೆ ಬರೆದದ್ದು.

ಬಂಡೀಪುರದ ಗೊಂಡಾರಣ್ಯದಲಿ
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!

ಮಳೆಯ ಮರೆಯಲ್ಲಿ

Submitted by omshivaprakash on Tue, 05/05/2009 - 01:03

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂದರ ಮೇಲೊಂದರಂತೆ ಬೀಳುತ್ತಿದ್ದ ಹನಿಗಳಿಂದಾದ ಆ ಕಂಪನ ಕಂಡು ಎಂಥದೋ ಒಂಥರಾ ವಿದ್ಯುತ್ ಸಂಚಾರ.

 

ಬ್ಲಾಗ್ ವರ್ಗಗಳು