ಜೇಡ

ಹವ್ಯಾಸಗಳು

Submitted by abdul on Thu, 04/09/2009 - 18:06

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತವೆ ಹವ್ಯಾಸಗಳ ಪಟ್ಟಿ. ಈಗಿನ rush rush ಯುಗದಲ್ಲಿ ಕೆಲವರಿಗೆ ಹವ್ಯಾಸಗಳ ಆಸಕ್ತಿ ಕಡಿಮೆಯಾದರೂ ಈಗಲೂ ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯಗಳ ಮೇಲೆ ಕಾರ್ಯಮಗ್ನರಾಗಿರುತ್ತಾರೆ. ಚಿಕ್ಕವನಿದ್ದಾಗ ನನಗಿತ್ತು ಅಂಚೆಚೀಟಿಗಳ ಸಂಗ್ರಹದ ಗೀಳು. ನನ್ನ ಮಟ್ಟಿಗೆ ಹವ್ಯಾಸ ಸುಲಭವಾಗಿ ಚಟವಾಗಿ ಅಂಟಿ ಕೊಂಡು ಬಿಡುತ್ತದೆ. ರಣ ಬಿಸಿಲಿನಲ್ಲಿ ಬರುವ ಪೋಸ್ಟ್ ಮ್ಯಾನ್ ಹಿಂದೆ ಸುತ್ತಿ ಅಂಚೆ ಚೀಟಿಗಾಗಿ ಮನೆ ಮನೆಗಳಿಗೆ ತೆರಳಿ ಬೇಡುತ್ತಿದ್ದೆ.