ಪ್ರಬಂಧ

ಪ್ರಬಂಧಗಳು

ಅತೀತ ಶಕ್ತಿ

Submitted by tvsrinivas41 on Sat, 03/18/2006 - 06:58

ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್‍‍ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್‍‍ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ ಬಂದವನೇ ನಾನು ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಕೇರ್‍‍ಟೇಕರ್ ಅಲ್ಲಿದ್ದ ಎಲೆಕ್ಟ್ರೀಷಿಯನ್ನಿಗೆ ಏನೋ ಸಾಮಾನನ್ನು ಕೊಡುತ್ತಿದ್ದ. ನನ್ನ ಕಡೆ ತಲೆ ಎತ್ತಿ ಕೂಡಾ ನೋಡಲಿಲ್ಲ. ಕಸ ಗುಡಿಸುವ ಹೆಂಗಸರು ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ ಅಲ್ಲಿಯೇ ಮೂಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.

ಕೃತಜ್ಞತಾ ದಿನಾಚರಣೆ

Submitted by gvmt on Sat, 11/26/2005 - 03:41

೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ ಅಲ್ಲಿಯೆ ಬಾಳಿ ಬದುಕಿದ್ದ ವಾಂಪನೊಅಗ್ ಜನಾಂಗದ ಅಮೇರಿಕೆಯ ಆದಿವಾಸಿಗಳು ಬಿಳಿಯರನ್ನು ಬರಮಾಡಿಕೊಂಡು ಅವರ ನೆರವಿಗೆ ಬಂದರು. ತಾವು ಬೆಳೆದ ಜೋಳ ಕೊಟ್ಟರು. ಜೊತೆಯಲ್ಲಿ ಬೇಟೆಯಾಡಿದರು. ಬಿಳಿಯರ ಧಾನ್ಯ ಇಲ್ಲಿ ಬೆಳೆಯದು. ವಾಂಪನೊಅಗ್ ಬಿತ್ತಲು ಬೀಜ ಕೊಟ್ಟರು, ಜಾಗ ಮಾಡಿಕೊಟ್ಟರು. ಹೊಸ ನೆಲದಲ್ಲಿ ಬದುಕುವ ಬಗೆ ಕಲಿಸಿಕೊಟ್ಟರು. ೧೬೨೧ರ ಕುಯ್ಲಿನಲಿ ಬಿಳಿಯರಿಗೆ ಕೈತುಂಬ ಬೆಳೆ ಬಂದಿತು. ಹೊಸ ನಾಡಿನಲ್ಲಿ ಬದುಕುವ ಜಾಡು ತಿಳಿದಿತ್ತು. ಇನ್ನು ಯಾವ ಭಯವೂ ಇಲ್ಲ. ಬಿಳಿಯರು ನಿಜವಾಗಿ ದಡ ಮುಟ್ಟಿದರು. ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಹಬ್ಬ ಮಾಡಿದರು.