ಸಾವು

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ...

Submitted by ksraghavendranavada on Mon, 03/12/2012 - 18:40
ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ. ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳಿಗೆ ಮನಸ್ಸನ್ನು ದೂಡಲೇಬೇಕಾಗುತ್ತದೆ.. ಒಮ್ಮೊಮ್ಮೆ ಸಿಹಿಯನ್ನು ನೀಡಿದರೆ ಮತ್ತೊಮ್ಮೆ ನೆನೆಕೆಯಿ೦ದಲೇ ಕ೦ಬನಿ ಉಕ್ಕುತ್ತದೆ.. ಕೆಲಸಕ್ಕೆ ಹೊರಡುವಾಗ ಚಾವಡಿಯಲ್ಲಿನ ಅಮ್ಮನ ಭಾವಚಿತ್ರ ಹರಸಿದ೦ತೆ ಕ೦ಡರೆ ಮನೆಯೊಳಗೆ ಕಾಲಿಟ್ಟಕೂಡಲೇ ಆ ಭಾವಚಿತ್ರದಲ್ಲಿನ ಅಮ್ಮನನ್ನು ಅರಸುತ್ತೇನೆ.. ಮನಸ್ಸೊಮ್ಮೆ ಮೂಕವಾಗುತ್ತದೆ.. ಕ್ಷಣ ಮಾತ್ರ.. ಹಿ೦ದೆ ಮು೦ದೆ ಯಾರೂ ಇಲ್ಲವೆ೦ದೆನೆಸಿ ಅನಾಥನಾದೆ ಎನ್ನುವ ಭಾವ ಕಾಡಿದರೂ ಶ್ರೀಮತಿಯ ನಗು ಎಲ್ಲವನ್ನೂ ಮರೆಸುತ್ತದೆ! ಶ್ರೀಮತಿಯಲ್ಲಿಯೇ ಶ್ರೀಮಾತೆಯನ್ನೂ ಕ೦ಡುಕೊಳ್ಳಬಹುದೆನ್ನುವ ಭಾವವೇ ಮನಸ್ಸಿಗೊಮ್ಮೆ ಮುದ ನೀಡುತ್ತದೆ.. ಆರೈಕೆಯನ್ನು ಅನುಭವಿಸಲು ಮನಸ್ಸು ಹಾತೊರೆಯುತ್ತದೆ! ಶ್ರೀಲೇಖಳ ಮ೦ದಹಾಸ ಶೇಷುವಿನ ಅರಳು ಹುರಿಗಟ್ಟುವ ಮಾತುಗಳು ಭಾವ ಬ೦ಧನದಲ್ಲಿ ಆಗಾಗ ಕಳೆದುಹೋಗುವ
ಬ್ಲಾಗ್ ವರ್ಗಗಳು

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. 2

Submitted by manju787 on Fri, 12/18/2009 - 13:07

ಸಾವು ೪:  ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ.  ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ.  ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು.  ಜೊತೆಗಾರ ಅರುಣ ಮತ್ತು ಗೋವಿಂದನ ನಡುವೆ ಅವಳಿಗೆ ಲೈನು ಹೊಡೆಯುವ ವಿಪರೀತ ಸ್ಪರ್ಧೆ ತರಗತಿಯ ಎಲ್ಲರಿಗೂ ಖುಷಿ ಕೊಡುತ್ತಿತ್ತು.  ಆದರೆ ಇವರ್ಯಾರ ಪುಂಗಿಗಳಿಗೂ ತಲೆ ಕೆಡಿಸಿಕೊಳ್ಳದೆ, ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುತ್ತಾ, ತನ್ನ ಸ್ನಿಗ್ಧ ನಗುವಿನಿಂದ ತನ್ನದೇ ಆದ ಛಾಪನ್ನು ಒತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಅವಳದ್ದು.

ಸರಣಿ
ಬ್ಲಾಗ್ ವರ್ಗಗಳು

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..

Submitted by manju787 on Wed, 12/16/2009 - 23:12

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..  ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ  ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ ಸೋತಿದ್ದೇನೆ.  ಹುಲು ಮಾನವನಾಗಿ ಅಸಹಾಯಕನಾಗಿ ಆ ನಿರ್ದಯಿ ಸಾವಿನ ಮುಂದೆ ನಿಂತಿದ್ದೇನೆ, ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ, ಆ ನಿರ್ದಯಿ ಸಾವಿನ ಗೆಲುವನ್ನು ಕಂಡಿದ್ದೇನೆ, ನನ್ನ ಬಗ್ಗೆ ನಾನೇ ಅಸಹ್ಯ ಪಟ್ಟುಕೊಂಡಿದ್ದೇನೆ.  ಅದರ ಕೆಲವೊಂದು ಝಲಕುಗಳನ್ನು ನಿಮ್ಮ ಮುಂದಿಡುತ್ತೇನೆ.

ಸರಣಿ
ಬ್ಲಾಗ್ ವರ್ಗಗಳು

ಸಾವು ಯಾವಗ

Submitted by malathi shimoga on Mon, 06/15/2009 - 14:10

ಸಾವು ಯಾವಗ ಅಂತ ತಿಳಿಬೇಕ ಈ ಲಿಂಕ್ ಗೆ ಹೀಗಿ ಮಾಹಿತಿಯನ್ನು ಕೊಡಿ, ನಿಮ್ಮ್ ಸಾವಿನ ದಿನಾಂಕ ತಿಳಿದುಕೊಳ್ಳಿ...ಎಷ್ಟು ಸತ್ಯವೊ ಸುಳ್ಳೊ ಗೊತ್ತಿಲ್ಲ .. ಇದು ನನಿಗೆ ಬಂದ ಒಂದು ಮಿಂಚಿಂಚೆ......
http://www.findyourfate.com/deathmeter/deathmtr.html

ಸರಣಿ