ಆಸುಮನದ ಮಾತುಗಳು

ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

Submitted by asuhegde on Mon, 02/18/2013 - 15:06

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬೈಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).


ಅದರ ಸತ್ಯಾಸತ್ಯತೆಯ ಬಗ್ಗೆ ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳ ಬೇಕಾಗಿಲ್ಲ. ಏಕೆಂದರೆ, ಅದು ನನ್ನ ಈ ಲೇಖನದ ವಿಷಯವೇ ಅಲ್ಲ.

ಬ್ಲಾಗ್ ವರ್ಗಗಳು

ಪ್ರೀತಿ ಕಾಲಾತೀತ!

Submitted by asuhegde on Fri, 02/15/2013 - 09:45

ಸಖೀ,
ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರ
ಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರ

ಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆ
ಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹಾತೊರೆಯುವವರೇ!
 

ಬ್ಲಾಗ್ ವರ್ಗಗಳು

ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!

Submitted by asuhegde on Thu, 02/14/2013 - 11:57

"ಸಖೀ,
ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟ
ಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟ
ನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡು
ಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು"


"ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆ
ಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆ
ದಿನವೂ ಸಖೀ ಸಖೀ ಅನ್ನುತ್ತಿರುವಿರಲ್ಲವೇ
ಬರೆಯುವಾಗಲೂ ಆ ರಾಜಕೀಯದ ಬಗ್ಗೆ"


"ಅಯ್ಯೋ ಮಂಕೇ ದಿನವೂ ಬರೆಯುವುದು
ಬರೆವ ಹವ್ಯಾಸಕ್ಕಾಗಿ ಅದು ನಿನಗಲ್ಲ ಕಣೇ
ಇಂದು ಬರೆದರೆ ಎಲ್ಲಾ ಅರ್ಥೈಸಿಕೊಂಬರು
ಇಲ್ಲಿರುವ ಸಖೀ ಬೇರಾರು ಅಲ್ಲ ನನ್ನ ಹೆಣ್ಣೇ

ಬ್ಲಾಗ್ ವರ್ಗಗಳು