ಪ್ರವಾಸ

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

Submitted by hamsanandi on Wed, 12/28/2011 - 02:11

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:

 

 

ಸರಣಿ

ಊರೂರು ವಿಶೇಷ ?

Submitted by ಅರವಿಂದ್ on Wed, 04/21/2010 - 17:11

ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ?

ಉದಾಹರಣೆ : ಸ್ಥಳ : ಧರ್ಮಸ್ಥಳ
                 ವಿಶೇಷ : ಮಂಜುನಾಥ ದೇವರು,
                ವಿಶೇಷ ವ್ಯಕ್ತಿ : ವೀರೇಂದ್ರ ಹೆಗ್ಡೆ
                ತಲುಪುವ ಬಗೆ : ಬಸ್ಸು - ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ನಿತ್ಯವೂ ನೂರಾರು ಬಸ್ಸುಗಳು
                ಹೊರಡುತ್ತವೆ. ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಬಸ್ಸುಗಳು ನೇರವಾಗಿ ಅಲ್ಲಿಗೆ ತಲುಪುತ್ತವೆ.

ಬ್ಲಾಗ್ ವರ್ಗಗಳು

೨ ಲಕ್ಷ ಡಾಲರ್‍ನಲ್ಲಿ ಬಾಹ್ಯಾಕಾಶ ಯಾತ್ರೆ

Submitted by amg on Wed, 03/24/2010 - 11:53

ವರ್ಜಿನ್ ಗ್ಯಾಲಕ್ಟಿಕ್ ಕ೦ಪನಿ ಸಿದ್ದಪಡಿಸಿರುವ ಸ್ಪೇಸ್ ಶಿಪ್ 2 ಬಾಹ್ಯಾಕಾಶ ನೌಕೆ ೨ ಲಕ್ಷ ಡಾಲರ್‍ನಲ್ಲಿ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಜನ ಈ ಪ್ರಯಾಣಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ. ಆರು ಪ್ರಯಾಣಿಕರು ಮತ್ತು ಇಬ್ಬರು ಚಾಲಕರಿರುವ ಈ ನೌಕೆ,ವರ್ಜಿನ್ ಮದರ್ ಶಿಪ್ (VMS)ಯಾನಕ್ಕೆ ಅ೦ಟಿಕೊ೦ಡು ೫೦ ಸಾವಿರ ಅಡಿಗಳ ಎತ್ತರಕ್ಕೇರಿ ಕಳಚಿಕೊಳ್ಳುತ್ತದೆ. ಅಲ್ಲಿ೦ದ ಅದು ತನ್ನ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ನೆಗೆಯುತ್ತದೆ.

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

Submitted by omshivaprakash on Fri, 12/25/2009 - 19:14

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ - ಭಾಗ ೧

Submitted by omshivaprakash on Tue, 12/22/2009 - 12:29

ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದಡಿಯಿಳಿದು ಮತ್ತದೇ ದೈನಂದಿನ ಜೀವನದ ಮಾರ್ಗದೆಡೆಗೆ ಮನಸ್ಸೇ ಇಲ್ಲದೆ ನುಗ್ಗಿಬರುವುದಾಗಿತ್ತು....

ದಕ್ಷಿಣ ಕರ್ನಾಟಕದಲ್ಲೊಂದು ಸುತ್ತಾಟ

Submitted by hamsanandi on Sun, 11/01/2009 - 23:18

ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ.


ಒಂದು ವಿಚಾರ ಹೇಳಬೇಕೆನ್ನಿಸಿತು. ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತವನ್ನು ರಚಿಸಿದ್ದು ನಾನೇ - ನಾಸಾಮಣಿ ಎನ್ನುವ ರಾಗದಲ್ಲಿ ಒಂದು ಜತಿಸ್ವರ. ಪಿಟೀಲಿನಲ್ಲಿ ನಿಡಿಸಿರುವುದು ಬೆಂಗಳೂರಿನ ಕಲಾವಿದರಾದ ಕೆ.ಆರ್.ಸತ್ಯಪ್ರಕಾಶ್


 

ಇಬ್ಬನಿ...

Submitted by anil.ramesh on Wed, 06/17/2009 - 12:14

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

ಇಟಲಿಯ ಪಿಡ್ಜ ಹಾಗು ಬೆಂಗಳೂರಿನ ದೋಸೆ

Submitted by thej on Mon, 05/04/2009 - 11:43

ಗೆಳೆಯ : ಮಗ, ಸಾಯಂಕಾಲ ಮೆಟ್ರೋ ಹತ್ತಿಕೊಂಡು ಬಂದುಬಿಡು. ರಸ್ತೆ ಪಕ್ಕದಲ್ಲಿ ಪಿಡ್ಜ ತಿನ್ನೋಕೆ ಹೋಗೋಣ
ನಾನು : ಸರಿ ಮಗ
ಸರಿ ಸುಮಾರು ೬ ಗಂಟೆಗೆ ನಾನು ಮೆಟ್ರೋ ಹತ್ತಿಕೊಂಡು ಗೆಳೆಯ ಹೇಳಿದ ಸ್ಥಳಕ್ಕೆ ಬರ್ತೀನಿ. ನೋಡಿದರೆ ಎಲ್ಲರು ರಸ್ತೆ ಪಕ್ಕದಲ್ಲಿ ಪೇಪರ್ ತಟ್ಟೆಯಲ್ಲಿ ಪಿಡ್ಜ ತಿಂತ ನಿಂತಿದ್ದಾರೆ.

ಗೆಳೆಯ : * ಇಟ್ಯಾಲಿಯನ್ ಭಾಷೆಯಲ್ಲಿ*